ಶಹಾಬಾದ್ ಬಿಜೆಪಿ ಮಂಡಲ ಕಚೇರಿಯಲ್ಲಿ ಹರ್ ರ್ ತಿರಂಗಾ ಅಭಿಯಾನಕ್ಕೆ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಚಾಲನೆ ನೀಡಿದರು. ಆನಂದ ಪಾಟೀಲ್ ಮಹೇಂದ್ರ ಪೂಜಾರಿ, ವೀರೇಂದ್ರ ಪಾಟೀಲ್, ನಿಂಗಣ್ಣ ಹುಳಗೋಳ ಇತರರಿದ್ದರು.
ಶಹಾಬಾದ್: ಪ್ರತಿ ಮನೆಯ ಮೇಲೆಯೂ ಆ.15ರಂದು ತಿರಂಗಾ ಹಾರಿಸುವ ಮೂಲಕ ಮನೆ&ಮನೆಗೆ ತಿರಂಗಾ, ಮನ-ಮನದಲ್ಲಿ ರಾಷ್ಟ್ರಭಕ್ತಿ ಬಿತ್ತುವ ಕೆಲಸ ಆಗಬೇಕು ಎಂದು ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಹೇಳಿದರು. ಮಂಡಲ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹರ್ ರ್ ತಿರಂಗಾ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿ ಕಾರ್ಯಕರ್ತರೂ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಿ, ದೇಶಭಕ್ತಿ, ಸ್ವಾಭಿಮಾನ ಮೆರೆಯಬೇಕು ಎಂದು ಕರೆ ನೀಡಿದರು. ಆನಂದ ಪಾಟೀಲ್, ಮಹೇಂದ್ರ ಪೂಜಾರಿ, ವೀರೇಂದ್ರ ಪಾಟಿ ಲ್ ರಾಯಕೋಡ, ನಂದಾ ಬಾಬಾ, ಮಹಾದೇವ, ಗೋವಿಂದ ಕುಸಾಳೆ, ನಾರಾಯಣ ಕಂದಕೂರ, ಶರಣು ಕೌಲಗಿ ಇತರರಿದ್ದರು. ದೇವದಾಸ ಜಾಧವ್ ಸ್ವಾಗತಿಸಿದರು. ಮಂಡಲ ಅಧ್ಯಕ್ಷ ನಿಂಗಣ್ಣ ಹುಳಗೋಳ ಪ್ರಾಸ್ತಾವಿಕ ಮಾತನಾಡಿದರು. ದಿನೇಶ ಗೌಳಿ ವಂದಿಸಿದರು.