ಮುನವಳ್ಳಿಯ ಅಕ್ಕಮಹಾದೇವಿ ಮಠದಲ್ಲಿ ಹಮ್ಮಿಕೊಂಡಿದ್ದ ಶಿವಾನುಭವ ಕಾರ್ಯಕ್ರಮವನ್ನು ಉಮೇಶ ಬಾಳಿ ಉದ್ಘಾಟಿಸಿದರು. ಅನ್ನಪೂರ್ಣಾ ಲಂಬೂನವರ, ಸುಜಾತಾ ಜಂಬಗಿ, ಉಷಾ ಗೋಪಶೆಟ್ಟಿ ಇತರರಿದ್ದರು. 
ರಾಜ್ಯ

ಎಲ್ಲರ ಬದುಕಿಗೆ ಶರಣರ ಸಂದೇಶ ದಾರಿದೀಪ

ವಿಜಯವಾಣಿ ಸುದ್ದಿಜಾಲ ಮುನವಳ್ಳಿ
ನುಡಿದಂತೆ ನಡೆದ ಶರಣರ ವಚನಗಳನ್ನು ಅಳವಡಿಸಿಕೊಂಡಾಗ ಜೀವನದ ಮೌಲ್ಯಗಳು ಅರ್ಥವಾಗುತ್ತವೆ ಎಂದು ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಹೇಳಿದರು.
ಶ್ರೀ ಅಕ್ಕಮಹಾದೇವಿ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ಸೋಮವಾರ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರ ವಚನಗಳು ಸಾಹಿತ್ಯ ಅಷ್ಟೆ ಅಲ್ಲ, ಪ್ರತಿಯೊಬ್ಬರ ಆತ್ಮಬಲ ಹೆಚ್ಚಿಸುವ ಮತ್ತು ಸಮಾಜ ಸನ್ಮಾರ್ಗದತ್ತ ಸಾಗಿಸುವಲ್ಲಿ ದಾರಿದೀಪವಾಗಿವೆ ಎಂದರು.
ಶಸಾಪ ತಾಲೂಕಾಧ್ಯಕ್ಷ ಉಮೇಶ ಬಾಳಿ ಮಾತನಾಡಿ, ಮಕ್ಕಳಲ್ಲಿ ಸಾಂಸತಿಕ ಹಾಗೂ ಸಾಮಾಜಿಕ ಮೌಲ್ಯ ಬಿತ್ತಬೇಕು ಎಂದರು.
ಕದಳಿ ವೇದಿಕೆಯ ಸುಜಾತಾ ಜಂಬಗಿ ಮಾತನಾಡಿದರು. ಕದಳಿ ವೇದಿಕೆ ಅಧ್ಯೆ ಅನ್ನಪೂರ್ಣಾ ಲಂಬೂನವರ, ಸವಿತಾ ಬಾಳಿ, ಉಷಾ ಗೋಪಶೆಟ್ಟಿ, ನಿರ್ಮಲಾ ಗದ್ವಾಲ್​, ಅಶ್ವಿನಿ ಪಾತಾಳಿ, ಸುಜಾತಾ ಹೊನ್ನಳ್ಳಿ, ರಾಜೇಶ್ವರಿ ಬಾಳಿ, ಅಶ್ವಿನಿ ಬಾಳಿ ಇತರರಿದ್ದರು.