ಕಲಬುರಗಿ ಶ್ರೀಹಿಂಗುಲಾಂಬಿಕಾ ಎಜ್ಯುಕೇಶನ್​ ಸೊಸೈಟಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಫಿಜಿಯೋಥೆರಪಿ ಕಾರ್ಯಕ್ರಮದಲ್ಲಿ ಎಸ್​ಪಿ ಅಡ್ಡೂರು ಶ್ರೀನಿವಾಸುಲು, ಸುರೇಶ ಬುಲ್ಬುಲೆ, ದೇವಿದಾಸ, ನರೇಶ ತಾಂಡ್ಲೆ, ಡಾ.ವಿಜಯಲಕ್ಷಿ$್ಮ ಇತರರಿದ್ದರು. 
ರಾಜ್ಯ

ಪ್ರತಿಯೊಂದು ವೃತ್ತಿಗಿದೆ ತನ್ನದೇ ಮಹತ್ವ

ಪ್ರಮುಖ ಮುಖ್ಯಾಂಶಗಳು

  • ಎಸ್​ಪಿ ಅಡ್ಡೂರು ಶ್ರೀನಿವಾಸಲು ಅನಿಸಿಕೆ
  • ಶ್ರೀ ಹಿಂಗುಲಾಂಬಿಕಾ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಫಿಜಿಯೋಥೆರಪಿ ದಿನಾಚರಣೆ
ಕಲಬುರಗಿ: ಪ್ರತಿಯೊಂದು ವೃತ್ತಿಗೂ ತನ್ನದೇ ಆದ ಮಹತ್ವವಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹೇಳಿದರು.
ನಗರದ ಶ್ರೀ ಹಿಂಗುಲಾಂಬಿಕಾ ಎಜ್ಯುಕೇಶನ್​ ಸೊಸೈಟಿಯ ಕಾಲೇಜ್​ ಆಫ್​ ಫಿಜಿಯೋಥೆರಪಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಫಿಜಿಯೋಥೆರಪಿ ದಿನ ಕಾರ್ಯಕ್ರಮದಲ್ಲಿ ಶಿಕ್ಷಣದ ಮಹತ್ವ, ವೃತ್ತಿಯಲ್ಲಿನ ಬದ್ಧತೆ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಅವರು, ರಾಷ್ಟ್ರ ನಿರ್ಮಾಣದಲ್ಲಿ ಪ್ರತಿಯೊಂದು ವೃತ್ತಿ ಮಹತ್ವದ ಕೊಡುಗೆ ನೀಡುತ್ತದೆ ಎಂದರು.
ಸೊಸೈಟಿ ಅಧ್ಯ ಸುರೇಶ ಬುಲ್ಬುಲೆ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ತಾನು ಪಡೆದ ಜ್ಞಾನ, ಕೌಶಲ ಮತ್ತು ಸೇವೆಯನ್ನು ಸಮಾಜದ ಒಳಿತಿಗಾಗಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಆಡಳಿತ ಮುಖ್ಯಸ್ಥ ಡಾ.ದೇವಿದಾಸ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಫಿಜಿಯೋಥೆರಪಿ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ನಿರಂತರ ನವೀಕರಿಸಿಕೊಳ್ಳುವುದರ ಜತೆ ಸಂಶೋಧನೆ, ಸಾ್ಯಾಧಾರಿತ ಚಿಕಿತ್ಸಾ ವಿಧಾನ ಅರಿತು ಹೊಸ ತಂತ್ರಜ್ಞಾನ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸೊಸೈಟಿ ಕಾರ್ಯದರ್ಶಿ ನರೇಶ ತಾಂಡ್ಲೆ, ಆಯುರ್ವೇದಿಕ್​ ಕಾಲೇಜಿನ ಪ್ರಾಂಶುಪಾಲ ಡಾ.ವಿಜಯಲಕ್ಷ್ಮೀ , ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಡಾ.ಗೀತಾ ಮೋರೆ, ಡಾ.ವೈಷ್ಣವಿ ಪಿ., ಡಾ.ಸಾಗರ, ಡಾ.ಸಂಧ್ಯಾ, ಡಾ.ಕ್ರಿಸ್ಟಿನಾ, ಡಾ.ಪೂಜಾ, ಡಾ.ಅಯ್​, ಡಾ.ಶ್ರೀಶೈಲ್​ ಉಪಸ್ಥಿತರಿದ್ದರು. ವಿವಿಧ ೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.