ಆರ್ಥಿಕವಾಗಿ ಸಬಲರಾದರೂ ಅನ್ನ ಇಲ್ಲರಿದ್ದರೆ ಬದುಕು ಕಷ್ಟ food
- ವಕೀಲ ತಿಮ್ಮಸಂದ್ರ ವಾಸ್ತು ರಮೇಶ್ ಕಳವಳ
- ಪ್ರಶಸ್ತಿ ಪುರಸ್ಕೃತ ಪ್ರಗತಿಪರ ರೈತ ಎಂ.ವಿ.ರವಿಚಂದ್ರಾರೆಡ್ಡಿಗೆ ಸನ್ಮಾನ
ಚಿಂತಾಮಣಿ: ರೈತ ಇಲ್ಲದಿದ್ದರೆ ದೇಶವಿಲ್ಲ. ದೇಶ ಎಷ್ಟೇ ಆರ್ಥಿಕವಾಗಿ ಸಬಲವಾದರೂ ತಿನ್ನಲು ಆಹಾರ ಬೇಕು. ಅನ್ನ ಬೆಳೆಯುವ ರೈತರ ಸಂಖ್ಯೆ ದಿನಗಳೆದಂತೆ ಣಿಸುತ್ತಿದೆ ಎಂದು ವಕೀಲ ತಿಮ್ಮಸಂದ್ರ ವಾಸ್ತು ರಮೇಶ್ ಕಳವಳ ವ್ಯಕ್ತಪಡಿಸಿದರು.food
ನಗರದ ರಾಜೀವ್ ನಗರ ಬಡಾವಣೆಯ ರಾಜೀವ್ಗಾಂಧಿ ವೆಲ್ೇರ್ ಅಸೋಸಿಯೇಷನ್ ಕಚೇರಿಯಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡ ಚೀಟಿ ಸದಸ್ಯರು ಹಮ್ಮಿಕೊಂಡಿದ್ದ ಪ್ರಶಸ್ತಿ ಪುರಸತ ಪ್ರಗತಿಪರ ರೈತ ಎಂ.ವಿ.ರವಿಚಂದ್ರಾರೆಡ್ಡಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚೆಗೆ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಇಂಜಿನಿಯರಿಂಗ್, ವೈದ್ಯ ಪದವಿ ಓದಿಸಲು ಮುಂದಾಗುತ್ತಿದ್ದಾರೆಯೇ ಹೊರತು ಕೃಷಿಗೆ ಆದ್ಯತೆ ನೀಡುತ್ತಿಲ್ಲ ಕೃಷಿ ಒತ್ತು ನೀಡದಿದ್ದರೆ ಮುಂದಿನ ದಿನಗಳಲ್ಲಿ ತಿನ್ನುವ ಆಹಾರಕ್ಕೆ ಏನು ಮಾಡಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಒಕ್ಕಲುತನವನ್ನು ಇಂದಿಗೂ ಉಳಿಸಿ, ಬೆಳೆಸಿಕೊಂಡಿರುವ ರೈತ ಎಂ.ವಿ.ರವಿಚಂದ್ರಾರೆಡ್ಡಿ ಅವರನ್ನು ಸರ್ಕಾರ ಗುರ್ತಿಸಿ ಪ್ರಗತಿಪರ ರೈತ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಇವರನ್ನು ಪ್ರೇರಣೆಯಾಗಿಸಿಕೊಂಡು ಮತ್ತಷ್ಟು ಮಂದಿ ಒಕ್ಕಲುತನಕ್ಕೆ ಮುಂದಾಗಬೇಕು ಎಂದು ಹೇಳಿದರು.
ಶಿಕ್ಷಕ ಆಂಜನೇಯಪ್ಪ ಮಾತನಾಡಿ, ಪ್ರಗತಿಪರ ರೈತ ರವಿಚಂದ್ರಾರೆಡ್ಡಿಯವರು ಚೇಳೂರು ತಾಲೂಕಿನ ಮುದ್ದಲಪಲ್ಲಿ ಗ್ರಾಮದಲ್ಲಿ ಜನಿಸಿದವರಾದರೂ ವಾಸವಾಗಿರುವುದು ಚಿಂತಾಮಣಿಯಲ್ಲಿ. ಅವರ ತಂದೆ ದಿ.ಮುದ್ದಲಪಲ್ಲಿ ವೆಂಕಟರೆಡ್ಡಿ ಅವರು ಕೃಷಿಕ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಗತಿಪರ ರೈತರಾಗಿ ಗುರುತಿಸಿಕೊಂಡಿದ್ದರು. ತಂದೆಯ ಹಾದಿಯನ್ನೇ ಅನುಸರಿಸಿ ಕೃಷಿ ಕಾಯಕ ಮಾಡುತ್ತಿರುವುದು ಮೆಚ್ಚುಗೆಯ ಸಂಗತಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಗತಿಪರ ರೈತ ಎಂ.ವಿ. ರವಿಚಂದ್ರಾರೆಡ್ಡಿ, ನಾನು ಮೂಲತ@ ಕೃಷಿ ಕುಟುಂಬದಿಂದ ಬಂದವನು. ಕಳೆದ 30 ವರ್ಷದಿಂದ ಚಿಂತಾಮಣಿಯಲ್ಲಿ ನೆಲೆಸಿದ್ದರೂ, ನಮ್ಮ ಸ್ವಂತ ಊರು ಮುದ್ದಲಪಲ್ಲಿಯಲ್ಲಿ ಸ್ನೇಹಿತರ ಸಹಕಾರದೊಂದಿಗೆ ಹಣ್ಣು, ತರಕಾರಿ, ಹೂವಿನ ಬೆಳೆ ಜತೆಗೆ ನಮ್ಮ ತಳಿಯ ಹಲವು ಜಾನುವಾರುಗಳನ್ನು ಸಾಕಣೆ ಮಾಡಲಾಗಿದೆ. ನನ್ನನ್ನು ಗುರುತಿಸಿ ಅಭಿನಂದಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ದೇವರಾಜ, ಭೂರಗಮಾಕಲಹಳ್ಳಿ ಮಂಜುನಾಥ ರೆಡ್ಡಿ, ಟಿಎನ್ಆರ್.ಶ್ರೀರಾಮರೆಡ್ಡಿ, ವೆಂಕಟರಾಯಪ್ಪ ರಾಯಲ್ ಶಾಲೆಯ ಕಾರ್ತಿಕ್ರೆಡ್ಡಿ, ನಾರಾಯಣಸ್ವಾಮಿ, ಚಂದ್ರಶೇಖರ್ ರೆಡ್ಡಿ ಇತರರು ಇದ್ದರು.