ಚಿಕ್ಕಮುನವಳ್ಳಿ ಆರೂಢ ಮಠದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಶಿಕಾಂತ ಗುರೂಜಿಗೆ ಆರೂಢ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿವಪುತ್ರ ಸ್ವಾಮೀಜಿ, ವೀರೇಶ್ವರ ಸ್ವಾಮೀಜಿ ಇತರರಿದ್ದರು.
ಇಟಗಿ: ಸಮೀಪದ ಚಿಕ್ಕಮುನವಳ್ಳಿ ಆರೂಢ ಮಠದಲ್ಲಿ ಈಚೆಗೆ ಆರೂಢ ಶ್ರೀ ಪ್ರಶಸ್ತಿ ಪ್ರದಾನ, 46ನೇ ಅಖಿಲ ಕರ್ನಾಟಕ ವೇದಾಂತ ಪರಿಷತ್ ಹಾಗೂ ಸದಾಶಿವಾನಂದ ಸ್ವಾಮೀಜಿ 16ನೇ ಪುಣ್ಯಸ್ಮರಣೋತ್ಸವ ಸಮಾರೋಪ ಸಮಾರಂಭದಲ್ಲಿ ಜರುಗಿತು.
ಆರೂಢ ಶ್ರೀ ಪ್ರಶಸ್ತಿ ಸ್ವೀಕರಿಸಿದ ರಾಜ್ಯ ರೈತಸಂ ಹಸಿರು ಸೇನೆಯ ಗೌರವಾಧ್ಯ ಶಶಿಕಾಂತ ಗುರೂಜಿ ಮಾತನಾಡಿ, ರೈತ ದೇಶದ ಅನ್ನದಾತ ಹಾಗೂ ಬೆನ್ನೆಲುಬು ಆಗಿದ್ದರೂ ನಿರಂತರ ಅನ್ಯಾಯಕ್ಕೆ ಒಳಗಾಗಿ ಪ್ರತಿಯೊಂದು ಬೇಡಿಕೆಗೂ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಮಠ&ಮಾನ್ಯಗಳು ಭಕ್ತರ ಬದುಕು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಶ್ರೀಮಠದ ಪೀಠಾಧ್ಯ ಶಿವಪುತ್ರ ಸ್ವಾಮೀಜಿ ಪ್ರತಿವರ್ಷ ವಿವಿಧ ೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಅವರಿಗೆ ಆರೂಢ ಶ್ರೀ ಪ್ರಶಸ್ತಿ ನೀಡುವ ಮೂಲಕ ಅವರ ಕಾರ್ಯಕ್ಕೆ ಶಕ್ತಿ ಮತ್ತು ಸ್ಫೂರ್ತಿ ನೀಡುತ್ತಿರುವುದು ಶ್ಲಾನೀಯ ಎಂದರು.
ಶಿವಪುತ್ರ ಸ್ವಾಮೀಜಿ ಮಾತನಾಡಿದರು. ವೀರೇಶ್ವರ ಸ್ವಾಮೀಜಿ, ಷಡರಿ ದೇವರು, ಗುರುಸಿದ್ದಯ್ಯ ಕಲ್ಮಠ, ಸ್ವರೂಪಾನಂದ ಸ್ವಾಮೀಜಿ, ರಮೇಶ ಪಾತ್ರೋಟ ಗುರುಸ್ವಾಮಿ, ಶಂಕರ ಬೋಳಣ್ಣವರ, ಪಿಎಸ್ಐ
ಎಸ್.ಎಸ್.ಬದಾಮಿ, ಗಣಪತಿ ನಾಯ್ಕ, ಈರಣ್ಣ ಕಾದ್ರೊಳ್ಳಿ, ವಿಠ್ಠಲ ಪದ್ಮಪ್ಪನವರ ಇತರರಿದ್ದರು.