Even if a thousand conspiracies are hatched, the world will not be destroyed. 
ರಾಜ್ಯ

ಸಾವಿರ ಷಡ್ಯಂತ್ರ ನಡೆದರೂ ಜಗ್ಗಲ್ಲ

ಶಿಡ್ಲಘಟ್ಟ: ನನ್ನ ವಿರುದ್ಧ ಸಾವಿರ ಷಡ್ಯಂತ್ರ ನಡೆದರೂ, ಎಂತಹ ಕಷ್ಟಗಳು ಎದುರಾದರೂ ಅವೆಲ್ಲವನ್ನೂ ಮೆಟ್ಟಿ ನಿಲ್ಲುತ್ತೇನೆ. ಉಸಿರು ಇರುವವರೆಗೂ ಜನರೊಂದಿಗೆ ಈಡಿ ಕುಟುಂಬ ಇರಲಿದೆ ಎಂದು ಎಬಿಡಿ ಟ್ರಸ್ಟ್​ ಅಧ್ಯಕ್ಷ ರಾಜೀವ್​ಗೌಡ ಕಾಂಗ್ರೆಸ್​ ಕಾರ್ಯಕರ್ತರಿಗೆ ಭರವಸೆ ನೀಡಿದರು.
ನಗರದ ಎಬಿಡಿ ಟ್ರಸ್ಟ್​ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಂಬಲಿಗರು, ಕಾಂಗ್ರೆಸ್​ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್​ ನನ್ನ ಉಸಿರು. ಪಕ್ಷದ ಬಾವುಟ ತ್ತು ಹಾಕಿದರು ಎಂಬ ಕಾರಣಕ್ಕೆ ನಾನು ಕೋಪಗೊಂಡಿದ್ದು ನಿಜ. ಆ ಕ್ಷಣಕ್ಕೆ ನಾನು ಇನ್ನೊಬ್ಬರ ಮನಸಿಗೆ ಘಾಸಿ ಆಗುವಂತೆ ಮಾತನಾಡಿದೆ. ನಂತರ ನನ್ನ ತಪ್ಪಿನ ಅರಿವಾಗಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದೇನೆ. ನನ್ನ ಜೀವನದಲ್ಲಿ ಯಾವ ಹೆಣ್ಣಿಗೂ ಅಪಮಾನ ಮಾಡಿಲ್ಲ. ಆದರೆ, ಆಕಸ್ಮಿಕವಾಗಿ ಘಟನೆ ನಡೆದು ಹೋಯ್ತು. ಕೆಲವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಇನ್ನಿಲ್ಲದ ರಾದ್ಧಾಂತ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷದ ಬಾವುಟದ ವಿಚಾರವಾಗಿ ನಾನು ಇದೆಲ್ಲವನ್ನು ಎದುರಿಸುವಂತಾಯಿತು ಎನ್ನುವ ಆತ್ಮತೃಪ್ತಿ ಇದೆ. ಇದಕ್ಕೂ ಮಿಗಿಲಾಗಿ ಕಷ್ಟದ ದಿನಗಳಲ್ಲಿ ನೀವೆಲ್ಲರೂ ಬೆಂಬಲಕ್ಕೆ ನಿಂತಿದ್ದು, ನನ್ನಲ್ಲಿ ಪಕ್ಷ ಮತ್ತು ನಿಮಗಾಗಿ ಏನು ಬೇಕಾದರೂ ಮಾಡಬಲ್ಲ ಹುಮ್ಮಸ್ಸು, ಧೈರ್ಯ ಬಂದಿದೆ ಎಂದರು.
ಕೆಪಿಸಿಸಿ ಸದಸ್ಯ ಗುಡಿಹಳ್ಳಿ ನಾರಾಯಣಸ್ವಾಮಿ, ಬೈರೇಗೌಡ, ಕೃಷ್ಣಪ್ಪ, ಮುನೀಂದ್ರ, ಗೋವಿಂದರಾಜು, ವೆಂಕಟೇಶ್​ ಇತರರು ಇದ್ದರು.