ಕೆಂಭಾವಿ ಸಮೀಪದ ಯಕ್ತಾಪುರ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಇದ್ದ ಒಂದೇ ಬಾವಿಯಿಂದ ನೀರು ತರಲು ಜನತೆ ಹರಸಾಹಸ ಪಡುತ್ತಿರುವುದು.
- ಇರುವ ಒಂದೇ ಬಾವಿ ನೀರು ಬಳಕೆಗೆ ಮಾತ್ರ ಸೀಮಿತ
- ಕುಡಿಯಲು ಯೋಗ್ಯವಿಲ್ಲ ಎಂದ ಗ್ರಾಮಸ್ಥರು
ಅರ್ಧ ಕೋಟಿ ಹಣ ಖರ್ಚಾದರೂ ಗ್ರಾಮಕ್ಕೆ ಇನ್ನೂ ಕುಡಿವ ನೀರು ಸಿಗದೆ ಗ್ರಾಮಸ್ಥರು ನಿತ್ಯ ಪರತದಾಡುವಂತಾಗಿದೆ.
ಯಕ್ತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ಇಂಥ ನೀರಿನ ಸಮಸ್ಯೆ ಎದುರಾಗಿದ್ದು ಇದನ್ನು ನೀಗಿಸಲು ಸರ್ಕಾರ ಹಲವು ಯೋಜನೆಗಳಡಿ ಅರ್ಧ ಕೋಟಿಗೂ ಹೆಚ್ಚು ಹಣ ವ್ಯಯ ಮಾಡಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತಿ ಬಸವೇಶ್ವರ ಆಶ್ರಯ ಕಾಲನಿ, ಆಲ್ಹಾಳ ಗ್ರಾಮ ಸೇರಿ ಹಲವು ಗ್ರಾಮಗಳಿಗೆ ಈಗಾಗಲೇ ನೀರಿನ ಬವಣೆ ನೀಗಿಸಲಾಗಿದೆ.
ಆದರೆ ೧೩ ಗ್ರಾಮಗಳನ್ನು ಒಳಗೊಂಡ ಗ್ರಾಪಂ ಕೇಂದ್ರ ಸ್ಥಾನವಾಗಿರುವ ಯಕ್ತಾಪುರ ಗ್ರಾಮಕ್ಕೆ ಈ ನೀರಿನ ಸಮಸ್ಯೆ ಕಾಡುತ್ತಿದ್ದು ಲಕ್ಷ ಲಕ್ಷ ಹಣ ಖರ್ಚು ಮಾಡಿ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಿದ್ದರೂ ಒಂಧನಿ ನೀರು ಮಾತ್ರ ಬಾರದೆ ಇರುವುದು ಗ್ರಾಮಸ್ಥರಿಗೆ ಬೇಸರ ತರಿಸಿದೆ.
ಜನತೆಗೆ ಕಳೆದ ಹತ್ತು ವರ್ಷಗಳಿಂದ ಕುಡಿವ ನೀರಿನ ಸಮಸ್ಯೆ ಬಗೆಹರಿಯದೆ ನಿತ್ಯವೂ ಪರದಾಡುವ ಪರಿಸ್ಥತಿ ಮುಂದುವರೆದಿದೆ. ಗ್ರಾಮಕ್ಕೆ ಸರಬರಾಜು ಆಗುವು ಬಾವಿಯ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು ಜನತೆ ನೀರಿಗಾಗಿ ಪರಿತಪಿಸುವಂತಾಗಿದೆ.
ಕಳೆದ ದಶಕಗಳಿಂದ ಗ್ರಾಮಕ್ಕೆ ಕುಡಿಯುವ ನೀರೇ ಶಾಪವಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ಇದ್ದ ಒಂದು ಬಾವಿಯೂ ಬತ್ತಿಹೋಗುವ ಸ್ಥಿತಿ ತಲುಪಿದ್ದು ಶಾಶ್ವತ ಪರಿಹಾರವಿಲ್ಲದೆ ಜನ ತೀವ್ರ ಸಮಸ್ಯೆ ಎದುರಿಸಬೇಕಾಗಿದೆ. ಗ್ರಾಪಂ ಹೊಂದಿರುವ ಈ ಗ್ರಾಮದಲ್ಲಿ ಮೂರು ಜನ ಸದಸ್ಯರನ್ನು ಹೊಂದಿದೆ. ಒಂದು ಸಾವೀರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಗ್ರಾಮದಲ್ಲಿ ಒಂದು ಸೇದು ಬಾವಿಯಿಂದ ಮಾತ್ರ ದಿನಬಳಕೆಗೆ ಉಪಯೋಗಿಸುತ್ತಿದ್ದು, ಆದರೆ ಕುಡಿಯಲು ಯೋಗ್ಯವಿಲ್ಲ ಎನ್ನುತ್ತಾರೆ ಶಿವಶಂಕರ ಹೊಸಮನಿ.
ಕಳೆದ ಕೆಲ ತಿಂಗಳ ಹಿಂದಷ್ಟೆ ಕ್ಷೇತ್ರದ ಶಾಸಕರ ಅನುದಾನದಲ್ಲಿ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆಯಡಿ ಚಿಂಚೋಳಿ ಗ್ರಾಮದಿಂದ ಪೈಪ್‌ಲೈನ್ ಮಾಡಲಾಗಿತ್ತು. ಬಹುತೇಕ ಕಾಮಗಾರಿ ಮುಗಿದೆ ಎಂದು ಹೇಳಲಾಗುತ್ತಿದ್ದು ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂಬುದು ಗ್ರಾಮಸ್ಥರು ಆರೋಪ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಮರಿಚೆಕೆಯಾಗಿದ್ದು ಸೇದು ಬಾವಿಯ ನೀರೆ ಕುಡಿಯುವಂತಾಗಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕುಡಿಯುವ ನೀರು, ರಸ್ತೆ, ಚಂರಡಿ, ಶೌಚಗೃಹ ಸೇರಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಪಂ ಮೂಲಕ ಕೋಟಿ ಕೋಟಿ ಹಣ ಬಿಡುಗಡೆ ಮಾಡುತ್ತಿದ್ದು ಹಣ ಸರಿಯಾಗಿ ಬಳಕೆಯಾಗದಿರುವುದೇ ಇಂದು ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಈ ಮಟ್ಟಕ್ಕೆ ತಲುಪಿದೆ. ಅಽಕಾರಿಗಳು ಇತ್ತ ಗಮನ ಹರಿಸಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಮಳೆ ಬಾರದ ಕಾರಣ ಅಂತರ್ಜಲ ಮಟ್ಟ ತೀವ್ರ ಕುಸಿದಿದೆ. ಚಿಂಚೋಳಿ ಗ್ರಾಮದ ಬಳಿ ಎರಡು ಕೊಳವೆ ಬಾವಿ ಕೊರೆಸಿದ್ದು ಯಕ್ತಾಪುರ ಗ್ರಾಮಕ್ಕೆ ಈಗಾಗಲೇ ಪೈಪ್‌ಲೈನ್ ಕಾಮಗಾರಿಯೂ ಪೂರ್ಣಗೊಂಡಿದೆ. ಕೆಲ ಸಣ್ಣಪುಟ್ಟ ಕೆಲಸ ಬಾಕಿ ಇದ್ದು ಶೀಘ್ರ ನೀರಿನ ವ್ಯವಸ್ಥೆ ಮಾಡಲಾಗುವುದು.| ಎಚ್.ಡಿ.ಪಾಟೀಲ್ಎಇಇ ಜಿಪಂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ
ಅನೇಕ ತಿಂಗಳಿನಿAದ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಹಣ ಖರ್ಚಾದರೂ ನೀರು ಸಿಗದೆ ಗ್ರಾಮಸ್ಥರು ನಿತ್ಯ ಪರದಾಡುವಂತಾಗಿದೆ. ಅಲ್ಲದೇ ಇರುವ ಒಂದೇ ಬಾವಿಯಿಂದ ನಿತ್ಯ ನೀರು ತರುವ ಅನಿವಾರ್ಯತೆ ಎದುರಾಗಿದೆ.| ಸಂತೋಷಗ್ರಾಮಸ್ಥ ಯಕ್ತಪುರ