ಬಸವನಬಾಗೇವಾಡಿ ಪಟ್ಟಣದ ತಾಲೂಕು ಪಂಚಾಯಿತಿಯ ಆವರಣದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ತಾಲೂಕು ಪಂಚಾಯಿತಿ ಕಚೇರಿ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಶಾಸಕ ಶಿವಾನಂದ ಪಾಟೀಲ ನೆರವೇರಿಸಿದರು. ಸುರೇಶ ಹಾರಿವಾಳ, ಸಂಗಮೇಶ ಓಲೇಕಾರ, ಬಸವರಾಜರಾಯಗೊಂಡ, ಚಂದ್ರಶೇಖರಗೌಡ ಪಾಟೀಲ ಮತ್ತಿತರರಿದ್ದರು.
- ಶಾಸಕ ಶಿವಾನಂದ ಪಾಟೀಲ ಹೇಳಿಕೆ
- ಕಟ್ಟಡದ ಭೂಮಿ ಪೂಜೆ
ಬಸವನಬಾಗೇವಾಡಿ: ಮತಕ್ಷೇತ್ರದಲ್ಲಿ 2013ರಿಂದ ಇಲ್ಲಿಯವರೆಗೆ ಸುಮಾರು ಸಾವಿರಾರು ಕೋಟಿ ಹಣದಲ್ಲಿ ಅನೇಕ ಸರ್ಕಾರಿ ಕಚೇರಿಗಳನ್ನು ನಿರ್ಮಿಸಲಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ 4 ಕೋಟಿ ರೂ. ವೆಚ್ಚ ದಲ್ಲಿ ನೂತನ ಕಚೇರಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿವರು.
ಕ್ಷೇತ್ರದಲ್ಲಿ ಹಲವಾರು ಸರ್ಕಾರಿ ಕಚೇರಿಗಳು ಮತ್ತು ನೌಕರರ ವಸತಿ ಗೃಹಗಳು ಶೀತಲಗೊಂಡಿದ್ದವು ಅವುಗಳನ್ನು ತೆರವುಗೊಳಿಸಿ ಸುಜಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದರು.
ಕ್ಷೇತ್ರದಲ್ಲಿ ಕೇವಲ ಸರ್ಕಾರಿ ಕಚೇರಿಗಳು ಸ್ಥಾಪನೆ ಮಾಡದೆ ಸಾರ್ವಜನಿಕರಿಗೆ ಮತ್ತು ವ್ಯಾಪಾರಸ್ಥರಿಗೆ ಎಲ್ಲ ಅಗತ್ಯವಿರುವ ವಸ್ತುಗಳು ಒಂದೆಡೆ ಸಿಗುವ ವ್ಯವಸ್ಥೆಯಾಗಬೇಕೆಂಬ ಉದ್ದೇಶದಿಂದ ಮೇಗಾ ಮಾರುಕಟ್ಟೆ ಸೇರಿ ಅನೇಕ ವಿವಿಧ ವಾಣಿಜ್ಯ ಮಳಿಗೆಗಳು ಪಟ್ಟಣ ಹೋಬಳಿ ನಗರ ಪ್ರದೇಶದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಸಂಗಮೇಶ ಓಲೇಕಾರ, ಬಸವರಾಜ ರಾಯಗೊಂಡ, ಚಂದ್ರಶೇಖರಗೌಡ ಪಾಟೀಲ, ಶೇಖರ ಗೊಳಸಂಗಿ, ರವಿ ರಾಠೋಡ, ಸುರೇಶಗೌಡ ಪಾಟೀಲ, ಕಮಲಸಾಬ ಕೊರಬು, ತಾಪಂ. ಇ.ಒ. ವೆಂಕಟೇಶ ವಂದಾಲ, ಜಿಪಂ ಎಇಇ ವಿಲಾಶ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಪಿಡಬ್ಲ್ಯೂಡಿ ಎಇಇ ಸಿದ್ದರಾಜ ದೊಡ್ಡಮನಿ ಮತ್ತಿತರರಿದ್ದರು.