ಅಫಜಲಪುರದ ತಹಸಿಲ್​ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ನುಲಿ ಚಂದಯ್ಯ ಜಯಂತಿಯಲ್ಲಿ ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಮಾತನಾಡಿದರು. ಪ್ರಕಾಶ ಜಮಾದಾರ, ಮಂಜುನಾಥ ಅಂಜುಟಗಿ, ಸಂಜೀವಕುಮಾರ ದಾಸರ ಇತರರಿದ್ದರು. 
ರಾಜ್ಯ

ನಾರಾಯಣ ಗುರುಗಳ ಹೆಸರಲ್ಲಿ ಗ್ರಂಥಾಲಯ ಸ್ಥಾಪನೆ

ಪ್ರಮುಖ ಮುಖ್ಯಾಂಶಗಳು

  • ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಭರವಸೆ
  • ಅಫಜಲಪುರದಲ್ಲಿ ಜಯಂತ್ಯುತ್ಸವ
ಅಫಜಲಪುರ: ಸಮಾನತೆ, ಸಹೋದರತ್ವ, ಕಾಯಕನಿಷ್ಠೆ, ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿದ ನಾರಾಯಣ ಗುರುಗಳು ಹಾಗೂ ನುಲಿಯ ಚಂದಯ್ಯ ಅವರ ಆದರ್ಶಗಳು ಇಂದಿಗೂ ದಾರಿದೀಪವಾಗಿವೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ (ಕೆಕೆಆರ್​ಟಿಸಿ) ಅಧ್ಯಕ್ಷ ಅರುಣಕುಮಾರ ಪಾಟೀಲ್​ ಹೇಳಿದರು.
ತಹಸಿಲ್​ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಶರಣ ನುಲಿ ಚಂದಯ್ಯ ಜಯಂತ್ರಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಲ್ಲಿ ಗ್ರಂಥಾಲಯ ಹಾಗೂ ಭಜಂತ್ರಿ, ಈಡಿಗ ಸಮುದಾಯಕ್ಕೆ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಾರಾಯಣ ಗುರುಗಳು ಶಿಕ್ಷಣ, ಸಂಘಟನೆ ಹಾಗೂ ಸಾಮಾಜಿಕ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿದ್ದರು. ನುಲಿ ಚಂದಯ್ಯ ಅವರು ಕಾಯಕ ನಿಷ್ಠೆ ಹಾಗೂ ದಾಸೋಹ ತತ್ವವನ್ನು ಎಲ್ಲೆಡೆ ಸಾರಿದ್ದಾರೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ ಜಮಾದಾರ, ಕಲಬುರಗಿ ಎಪಿಎಂಸಿ ಅಧ್ಯ ಮಂಜುನಾಥ ಅಂಜುಟಗಿ, ನಗರ ಯೋಜನಾಭಿವೃದ್ಧಿ ಪ್ರಾಧಿಕಾರದ ಅಧ್ಯ ಚಂದ್ರಶೇಖರ ಕರಜಗಿ, ತಹಸೀಲ್ದಾರ್​ ಸಂಜೀವಕುಮಾರ ದಾಸರ, ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಹಣಮಯ್ಯ ಗುತ್ತೇದಾರ್​, ಭಜಂತ್ರಿ ಸಮಾಜ ತಾಲೂಕು ಅಧ್ಯಕ್ಷ ಶಿವಣ್ಣ ಭಜಂತ್ರಿ, ಪ್ರಮುಖರಾದ ಉಮೇಶ ಗುತ್ತೇದಾರ್​, ಶಿವಯ್ಯ ಗುತ್ತೇದಾರ್​, ನಾಗಯ್ಯ ಗುತ್ತೇದಾರ್​, ಸಿದ್ದಯ್ಯ ಗುತ್ತೇದಾರ್​, ಶರಣಯ್ಯ ಗುತ್ತೇದಾರ್​, ಅಶೋಕ ಗುತ್ತೇದಾರ್​, ಸೂರ್ಯಕಾಂತ ಗುತ್ತೇದಾರ್​, ದತ್ತು ಬಿಲ್ಕರ, ಪ್ರೇಮಾನಂದ, ಶಂಕರಗೌಡ ಪಾಟೀಲ್​, ಫಕ್ರುದ್ದಿನ್​, ರವಿ ಅಂಬಲಗಿ ಇತರರಿದ್ದರು.