ನವದೆಹಲಿಯ ಸಂಸದ ಭವನದಲ್ಲಿ ಮಂಗಳವಾರ ಕೇಂದ್ರ ಸಚಿವ ಡಾ.ಮನ್ಸುಖ್ ಮಾಂಡವಿಯಾಗೆ ಸಂಸದ ಜಗದೀಶ ಶೆಟ್ಟರ ಮನವಿ ಸಲ್ಲಿಸಿದರು. 
ರಾಜ್ಯ

ಇಎಸ್‌ಐ ವಿಭಾಗೀಯ ಕಚೇರಿ, ನವೋದಯ ಶಾಲೆ ಸ್ಥಾಪಿಸಿ

ಬೆಳಗಾವಿ:

ಕಾರ್ಮಿಕ ರಾಜ್ಯ ವಿಮಾ ಸಂಸ್ಥೆ (ಇಎಸ್‌ಐ) ವಿಭಾಗೀಯ ಅಥವಾ ಉಪಪ್ರಾದೇಶಿಕ ಕಚೇರಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೇಂದ್ರೀಯ ವಿದ್ಯಾಲಯ ಹಾಗೂ ನವೋದಯ ಶಾಲೆ ಆರಂಭಿಸಿಲು ಆಗ್ರಹಿಸಿ ಕೇಂದ್ರದ ಸಚಿವರಾದ ಡಾ.ಮನ್ಸುಖ್ ಮಾಂಡವಿಯಾ ಮತ್ತು ಪ್ರಲ್ಹಾದ ಜೋಶಿ ಅವರಿಗೆ

ಸಂಸದ ಜಗದೀಶ ಶೆಟ್ಟರ ಮನವಿ ಸಲ್ಲಿಸಿದರು.
ನವದೆಹಲಿಯ ಸಂಸದ ಭವನದಲ್ಲಿ ಮಂಗಳವಾರ ಕೇಂದ್ರ ಸಚಿವರನ್ನು ಭೇಟಿಯಾಗಿ, ಅತಿ ಹೆಚ್ಚು ಕೈಗಾರಿಕಾ ಘಟಕ ಹೊಂದಿರುವ ಬೆಳಗಾವಿಯಲ್ಲಿ ಒಂದು ಲಕ್ಷ ಕಾರ್ಮಿಕ ವಿಮಾದಾರರಿದ್ದರೂ ಕಾರ್ಮಿಕರು ಕುಂದುಕೊರತೆ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ 120 ಕಿಮೀ ದೂರದ ಹುಬ್ಬಳ್ಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ.

ವಿಭಾಗೀಯ ಅಥವಾ ಉಪ ಪ್ರಾದೇಶಿಕ ಕಚೇರಿ ಸ್ಥಾಪಿಸುವ ಅಗತ್ಯವಿದೆ ಎಂದು ವಿನಂತಿಸಿದರು. ಮನವಿಗೆ ಸ್ಪಂದಿಸಿದ ಸಚಿವ ಡಾ.ಮನ್ಸುಖ್ ಮಾಂಡವಿಯಾ, ಶೀಘ್ರ

ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಕೇಂದ್ರೀಯ, ನವೋದಯ ಶಾಲೆ ನೀಡಿ: ಜನಸಂಖ್ಯೆಗೆ ಅನುಗುಣವಾಗಿ ಮತ್ತು ಸಾರ್ವಜನಿಕರ ಬೇಡಿಕೆಯಂತೆ ಗೋಕಾಕ, ಮೂಡಲಗಿ ಹಾಗೂ ಯರಗಟ್ಟಿ ಪಟ್ಟಣಗಳ ಹತ್ತಿರ ನೂತನ ಕೇಂದ್ರೀಯ ವಿದ್ಯಾಲಯ ಮತ್ತು ರಾಮದುರ್ಗ ತಾಲೂಕಿನ ಸಾಲಹಳ್ಳಿ ಬಳಿ ನವೋದಯ ಶಾಲೆ ಪ್ರಾರಂಭಿಸಲು ಕ್ರಮ ವಹಿಸಬೇಕು. ಸೇವೆ ಕಳೆದುಕೊಳ್ಳುವ ಭೀತಿಯಲ್ಲಿರುವ ಶಿಕ್ಷಕರ ಹಿತದೃಷ್ಟಿಯಿಂದ ಟಿಇಟಿ ಪರೀಕ್ಷೆಗೆ ಶಿಕ್ಷಕ ವೃಂದವನ್ನು ಕೈಬಿಡುವಂತೆ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಅವರನ್ನು ಒತ್ತಾಯಿಸಿದರು.