ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೇಡಂನಲ್ಲಿ ರಾಷ್ಟ್ರವೀರ ಮಹಾರಾಣಾ ಪ್ರತಾಪಸಿಂಗ್ ರಜಪೂತ ಸಮಾಜ ಸೇವಾ ಸಂದಿಂದ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಭೀಮಣ್ಣ ಕುದರಿಗೆ ಮನವಿಪತ್ರ ಸಲ್ಲಿಸಲಾಯಿತು. ಭವಾನಿಸಿಂಗ್ ಠಾಕೂರ್, ಸಂಜೀವಕುಮಾರಸಿಂಗ್, ಪೃಥ್ವಿರಾಜ್ ತಿವಾರಿ, ಅಮರಸಿಂಗ್ ರಜಪೂತ, ಜಗದೀಶಸಿಂಗ್ ಚಿಂಚೋಳಿ ಇತರರಿದ್ದರು.
- ಭವಾನಿಸಿಂಗ್ ಠಾಕೂರ್ ಆಗ್ರಹ
- ಸೇಡಂನಲ್ಲಿ ಸಮಾಜ ಸೇವಾ ಸಂಘ ಪ್ರತಿಭಟನೆ
ಸೇಡಂ: ಅತ್ಯಂತ ಸಣ್ಣ ಸಮುದಾಯವಾಗಿರುವ ರಜಪೂತ ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂದು ಸಮಾಜದ ಸಲಹೆಗಾರ ಭವಾನಿಸಿಂಗ್ ಠಾಕೂರ್ ಆಗ್ರಹಿಸಿದರು.
ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಿಂದ ಪ್ರಜಾಸೌಧದವರೆಗೆ ರಾಷ್ಟ್ರವೀರ ಮಹಾರಾಣ ಪ್ರತಾಪಸಿಂಗ್ ರಜಪೂತ ಸಮಾಜ ಸೇವಾ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿ, ರಜಪೂತ ಸಮಾಜದ ಜನತೆ ಕಡಿಮೆ ಇರುವುದರಿಂದ ನಮ್ಮ ಬೇಡಿಕೆಗೆ ಬಲ ಬರುತ್ತಿಲ್ಲ. ಈಗಾಗಲೇ ರಾಜ್ಯದ ಸಣ್ಣ ಸಮುದಾಯಗಳಿಗೂ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು. ಸಮಾಜ ಜನರಿರುವ ಗ್ರಾಮಗಳಲ್ಲಿ ಸಮುದಾಯ ಭವನ ಹಾಗೂ ಶವಸಂಸ್ಕಾರಕ್ಕಾಗಿ ವಿದ್ಯುತ್ ಚಿತಗಾರ ನಿರ್ಮಿಸಬೇಕು. ಶೌರ್ಯದ ಪ್ರತಿಕವಾದ ಮಹಾರಾಣಾ ಪ್ರತಾಪಸಿಂಗ್ರ ಮೂರ್ತಿಯನ್ನು ಸೇಡಂನಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಗ್ರೇಡ್-2 ತಹಸೀಲ್ದಾರ್ ಭೀಮಣ್ಣ ಕುದರಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ಸಂಜೀವಕುಮಾರಸಿಂಗ್, ಪ್ರಮುಖರಾದ ಪೃಥ್ವಿರಾಜ್ ತಿವಾರಿ, ಅಮರಸಿಂಗ್ ರಜಪೂತ, ಗೋವಿಂದಸಿಂಗ್, ಜಗದೀಶಸಿಂಗ್ ಚಿಂಚೋಳಿ, ರಾಮಸಿಂಗ್ ಠಾಕೂರ್, ನರೇಂದ್ರಸಿಂಗ್ ಲಿಂಗಂಪಲ್ಲಿ, ಆಕಾಶ ಠಾಕೂರ್, ಗೋವಿಂದಸಿಂಗ್ ಠಾಕೂರ್, ಭಾನುಪ್ರತಾಪಸಿಂಗ್, ರತನಸಿಂಗ್, ಕರಣಸಿಂಗ್, ರವೀಂದ್ರಸಿಂಗ್, ರಾಮಸಿಂಗ್, ರಮೇಶಸಿಂಗ್, ತುಳಜರಾಮಸಿಂಗ್, ಭೀಮಸಿಂಗ್, ವಿಜಯಕುಮಾರ ತ್ರಿವೇದಿ, ವಿಕ್ರಮಸಿಂಗ್ ಇತರರಿದ್ದರು.