Essay competition on tobacco control
ಹುಳಿಯಾರು: ಜಿಲ್ಲಾ ತಂಬಾಕು ನಿಯಂತ್ರಣ ಕೋಶ ತುಮಕೂರು ಹಾಗೂ ತಾಲೂಕು ತಂಬಾಕು ನಿಯಂತ್ರಣ ಕೋಶ ಚಿಕ್ಕನಾಯಕನಹಳ್ಳಿ, ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ತಾಲೂಕಿನ ವಿವಿಧ ಪ್ರೌಢಶಾಲೆಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ತಂಬಾಕುಮುಕ್ತ ಯುವ ಅಭಿಯಾನ 3.0 ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಅಭಿಯಾನದ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದು, ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳ ಜತೆಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ ನಡೆಸಿದ ಶಾಲೆಗಳಿಗೆ "ತಂಬಾಕುಮುಕ್ತ ಶಾಲೆ' ಎಂಬ ನಾಮಫಲಕಗಳನ್ನು ವಿತರಿಸಿ ಶಾಲಾ ಆವರಣದಲ್ಲಿ ತಂಬಾಕು ಬಳಕೆಗೆ ವಿರೋಧವಾಗಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮವು ಚಿಕ್ಕನಾಯಕನಹಳ್ಳಿಯ ಅಂಬೇಡ್ಕರ್ ಪ್ರೌಢಶಾಲೆ, ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆ, ಜ್ಞಾನಜೋತಿ ಪ್ರೌಢಶಾಲೆ -ಹುಳಿಯಾರು ಹಾಗೂ ತಮ್ಮಡಿಹಳ್ಳಿ ಸರ್ಕಾರಿ ಪ್ರೌಢಶಾಲೆ-ಗಳಲ್ಲಿ ನಡೆಯಿತು.