ತಲ್ಲೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಭವನದಲ್ಲಿ ಕ್ಷಯರೋಗ ಜಾಗೃತಿ ಹಾಗೂ ಅರಿವು ಕಾರ್ಯಕ್ರಮದಲ್ಲಿ ಎಸ್.ಐ.ಡೋಣಿ ಮಾತನಾಡಿದರು. ಡಾ.ಮಲ್ಲಮ್ಮ ನೇಸರಗಿ, ಮೀತಾ ನಾಂದೂಡಕರ್, ವೀರೇಶ ದೇಮಶೆಟ್ಟಿ, ಆರತಿ ಹೊಳ್ಳಿಕೇರಿ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ತಲ್ಲೂರ
ಕ್ಷಯರೋಗದ ಲಕ್ಷಣ ಕಂಡುಬಂದರೆ ಭಯಪಡದೆ ಪ್ರಾಥಮಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಲು ಸಾಧ್ಯ ಎಂದು ತಾಲೂಕು ಹಿರಿಯ ಕ್ಷಯರೋಗ ಮೇಲ್ವಿಚಾರಕ ಎಸ್.ಐ.ಡೋಣಿ ಹೇಳಿದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಭವನದಲ್ಲಿ ಶುಕ್ರವಾರ ಕ್ಷಯರೋಗ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಕದಲ್ಲಿ ರಕ್ತ ಬೀಳುವುದು, ದೇಹದ ತೂಕ ಕಡಿಮೆ ಆಗುವುದು, ಹಸಿವಾಗದೇ ಇರುವುದು, ರಾತ್ರಿ ಬೆವರುವುದು, ಎದೆಯಲ್ಲಿ ನೋವು, ಸಂಜೆ ಜ್ವರ ಕಂಡುಬಂದರೆ ತಪ್ಪದೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ವೈದ್ಯಾಧಿಕಾರಿ ಡಾ.ಮಲ್ಲಮ್ಮ ನೇಸರಗಿ ಮಾತನಾಡಿ, ಆಶಾ ಕಾರ್ಯಕರ್ತೆಯರ ಮನೆ ಮನೆಗೆ ತೆರಳಿ ಕ್ಷಯರೋಗದ ತಿಳಿವಳಿಕೆ ನೀಡಬೇಕು ಎಂದರು.
ಯರಗಟ್ಟಿ ಸಮುದಾಯ ಆರೋಗ್ಯ ಕೇಂದ್ರದ ನೇತ್ರ ಸಹಾಯಕಿ ಮೀತಾ ನಾಂದೂಡಕರ್, ಶುಶ್ರೂಷಾಧಿಕಾರಿ ವೀರೇಶ ದೇಮಶೆಟ್ಟಿ, ಾರ್ಮಸಿ ಅಧಿಕಾರಿ ಆರತಿ ಹೊಳ್ಳಿಕೇರಿ, ಎಲ್‌ಟಿಒ ಎಸ್.ಎಸ್.ಉಪ್ಪಿನ, ಶಂಕರ ಲಮಾಣಿ, ಮಹಾವೀರ ಜೋಡಟ್ಟಿ, ಶಾಂತವ್ವ ಜಡಿಯರ, ಬೀಮವ್ವ ಭಜಂತ್ರಿ, ನೀಲವ್ವ ಬೆನಕಟ್ಟಿ, ಕೀರವ್ವ ಕಾರೆಪ್ಪನವರ ಇತರರಿದ್ದರು.