ಬೈಲೂರು ಗ್ರಾಮದಲ್ಲಿ ಅಂಬೇಡ್ಕರ್​ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಭೀಮ ರ್ಜನೆ ಕಾರ್ಯಕ್ರಮಕ್ಕೆ ಬಾಬಾಸಾಹೇಬ ಪಾಟೀಲ ಚಾಲನೆ ನೀಡಿದರು. ಶಿವಾನಂದ ಗುಡಗನಟ್ಟಿ, ಸಿದ್ಧಬಸವದೇವರು, ಈಶ್ವರ ಹಡಪದ ಇತರರಿದ್ದರು. 
ರಾಜ್ಯ

ಸಮಾನತೆ ಒದಗಿಸಿದ ಬಾಬಾಸಾಹೇಬ

ಎಂ.ಎಸ್​.ಹಿರೇಮಠ ಬೆಳಗಾವಿ
ವಿಜಯವಾಣಿ ಸುದ್ದಿಜಾಲ ಇಟಗಿ
ಭಾರತಕ್ಕೆ ಸಂವಿಧಾನ ನೀಡುವಲ್ಲಿ ಹಾಗೂ ಪ್ರಭುದ್ಧ ರಾಷ್ಟ್ರ ನಿರ್ಮಾಣದಲ್ಲಿ ಅಂಬೇಡ್ಕರ್​ ಪಾತ್ರ ಅವಿಸ್ಮರಣೀಯ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಸಮೀಪದ ಬೈಲೂರು ಗ್ರಾಮದಲ್ಲಿ ಈಚೆಗೆ ಡಾ.ಬಿ.ಆರ್​.ಅಂಬೇಡ್ಕರ್​ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಭೀಮ ರ್ಜನೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಬಾಸಾಹೇಬರು ರಚಿಸಿದ ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ನೀಡುವ ಮಹತ್ವದ ಗ್ರಂಥವಾಗಿದ್ದು ಅದರಲ್ಲಿ ತತ್ತ$$$್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.
ಬೈಲಹೊಂಗಲ ಉಪ ವಿಭಾಗದ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಉಪನ್ಯಾಸಕ ಪ್ರಕಾಶ ಶಿವಣ್ಣವರ, ಕರವೇ ಅಧ್ಯ ವಿಠ್ಠಲ ಹಿಂಡಲಕರ, ಬಿಜೆಪಿ ಯುವ ಮುಖಂಡ ಶಿವಾನಂದ ಹಣಮಸಾಗರ, ನಿವೃತ್ತ ಮುಖ್ಯಶಿಕ್ಷಕ ಶಂಕರ ದಂಡಿನ ಮಾತನಾಡಿದರು. ದಲಿತ ಸಮುದಾಯದ ಸೇವಾ ನಿರತ ಮತ್ತು ಸೇವಾ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.
ಸಿಪಿಐ ಶಿವಾನಂದ ಗುಡಗನಟ್ಟಿ, ಪಿಡಿಒ ಈಶ್ವರ ಹಡಪದ, ಸಿದ್ಧಬಸವದೇವರು, ಮಹಾದೇವ ಗಿರಿಯಾಲ, ಗಂಗಾಧರ ಮುಳಕೂರ, ಬಾವುದ್ದೀನ್​ ಮಕಾನದಾರ, ಮಂಜುನಾಥ ಶಿಡ್ಲವ್ವಗೋಳ, ಗಂಗಾಧರ ಹನುಮಸಾಗರ, ಮಾರುತಿ ಆನಿಗೋಳ, ವಿ.ಎಸ್​.ನಂದಿಹಳ್ಳಿ, ನಿಂಗಪ್ಪ ಮುಂದಿನಮನಿ, ಜಗದೀಶ ಕೇರವಾಡ ಇತರರಿದ್ದರು. ಗಂಗಾಧರ ಮುಳಕೂರ ಸ್ವಾಗತಿಸಿದರು. ಶಿಕ ವಿವೇಕ ಕುರಗುಂದ ನಿರೂಪಿಸಿದರು.