ನೆಲಮಂಗಲ ತಾಲೂಕಿನ ಗೋವೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಅಗತ್ಯ ಸಲಕರಣೆಗಳನ್ನು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್​ ಚೌಧರಿ ವಿತರಿಸಿದರು. ಗ್ರಾಪಂ ಮಾಜಿ ಸದಸ್ಯ ಗಂಗಾಧರ್​, ತಾಲೂಕು ರೈತ ಮೋರ್ಚಾ ಅಧ್ಯಕ್ಷ ಅರುಣ್​ಕುಮಾರ್​, ಡೇರಿ ಅಧ್ಯಕ್ಷ ಸಿದ್ದಗಂಗಪ್ಪ ಇತರರು ಇದ್ದರು. 
ರಾಜ್ಯ

ಅಂಗವಿಕಲರಿಗೆ ಸಮಾನ ಅವಕಾಶ ಸಿಗಲಿ / TYMAGONDLU

ತ್ಯಾಮಗೊಂಡ್ಲು : ಅಂಗವಿಕಲರಿಗೂ ಇತರರಂತೆ ಸಮಾನ ಅವಕಾಶಗಳು ಸಿಗಬೇಕು ಎಂದು ನೆಲಮಂಗಲ ತಾಲೂಕು ಬಿಜೆಪಿ ಅಧ್ಯಕ್ಷ ಜಗದೀಶ್​ ಚೌಧರಿ ಹೇಳಿದರು.
ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಿಹಳ್ಳಿ ಮತ್ತು ಗೋವೇನಹಳ್ಳಿಯಲ್ಲಿ ತ್ಯಾಮಗೊಂಡ್ಲು ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಬುಧವಾರ ಹಮ್ಮಿಕೊಂಡಿದ್ದ ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ. ಆದರೆ, ಬಹುತೇಕ ಸಂದರ್ಭಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಪರಿಗಣಿಸುವ ಪರಿಪಾಠವೂ ಕೆಲವೆಡೆ ಕಾಣಿಸುತ್ತಿದೆ. ಇದು ತಪ್ಪಬೇಕು. ಅವರಿಗೆ ಮೂಲ ಸೌಲಭ್ಯ ಕಲ್ಪಿಸಬೇಕೆಂಬುದೇ ಎಲ್ಲರ ಉದ್ದೇಶವಾಗಬೇಕು ಎಂದರು.
ತ್ಯಾಮಗೊಂಡ್ಲು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್​ ಕುಮಾರ್​ ಮಾತನಾಡಿ, ಅಂಗವಿಕಲರು ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಮಾಹಿತಿ ತಂತ್ರಜ್ಞಾನ ಸೇರಿ ಹಲವು ಕ್ಷೇತ್ರದಲ್ಲಿ ಗುರುತಿಸಬಲ್ಲರು. ಕೋಡಿಹಳ್ಳಿ ಮತ್ತು ಗೋವೇನಹಳ್ಳಿ ಗ್ರಾಮಗಳಲ್ಲಿ 120 ಅರ್ಹರಿಗೆ ಶ್ರವಣ ಸಾಧನ, ವೀಲ್​ಚೇರ್​, ಸಿಟಿಂಗ್​ ವಾಕಿಂಗ್​ ಸ್ಟಿಕ್​, ಕಮೋಡ್​ ಸೇರಿ ಹಲವು ಸಲಕರಣೆಗಳನ್ನು ನೀಡಲಾಗಿದೆ. ಇದುವರೆಗೂ ಒಟ್ಟು 300ಕ್ಕೂ ಹೆಚ್ಚು ಫಲಾನುಭವಿಗಳನ್ನು ಗುರುತಿಸಿ ಸಲಕರಣೆ ನೀಡಲಾಗಿದೆ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಶಾಂತಕುಮಾರಿ, ಸೌಮ್ಯಾ, ರಾಜೇಶ್ವರಿ, ಗೋವೇನಹಳ್ಳಿ ರಮೇಶ್​, ಜಿ.ಎಚ್​. ಹುಚ್ಚೇಗೌಡ, ಪುನೀತ್​, ಸುರೇಶ್​, ಕಾಂತರಾಜು, ಸೋಮಣ್ಣ, ಉಮೇಶ್​, ಕೃಷ್ಣಪ್ಪ, ಯಶಸ್​, ವಿಕಾಸ್​, ಯೋಗೇಶ್​, ಹನುಮಂತರಾಯಪ್ಪ, ತಾಲೂಕು ಕಿಸಾನ್​ ಸಂಘದ ಕಾರ್ಯದರ್ಶಿ ಲಕ್ಷಿ$್ಮಕಾಂತ್​, ಫಲಾನುಭವಿಗಳು ಇದ್ದರು.