Environmental protection through organic farming 
ರಾಜ್ಯ

ಸಾವಯವ ಕೃಷಿಯಿಂದ ಪರಿಸರ ಸಂರಕ್ಷಣೆ

ದೊಡ್ಡೇರಿ : ಸಾವಯವ ಕೃಷಿ ವಿಧಾನವು ರಾಸಾಯನಿಕಗಳನ್ನು ಬಳಸದೆ ಬೆಳೆಗಳನ್ನು ಬೆಳೆಯುವ ಒಂದು ವಿಧಾನವಾಗಿದೆ. ಇದರಲ್ಲಿ ಕೃಷಿ ತ್ಯಾಜ್ಯ, ಗೊಬ್ಬರ, ಹಸಿರು ಗೊಬ್ಬರ ಮತ್ತು ಜೈವಿಕ ಕೀಟ ನಿಯಂತ್ರಣಗಳನ್ನು ಬಳಸಲಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಗಂಗಾಧರ್ ತಿಳಿಸಿದರು.
ಹೋಬಳಿಯಲ್ಲಿ ತೋಟಗಾರಿಕೆ ಇಲಾಖೆ, ಜಿಪಂ ಮಧುಗಿರಿ ಸಹಯೋಗದಲ್ಲಿ ಪಾರಗತ ಕೃಷಿ ವಿಕಾಸ ಯೋಜನೆ (ಪಿಕೆವಿವೈ) ಅಡಿ ಹಮ್ಮಿಕೊಂಡಿದ್ದ ಹಾಗೂ ಸಾವಯವ ತೋಟಗಾರಿಕೆ ಹಾಗೂ ಜೇನು ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ವಾತನಾಡಿ, ಸಾವಯವ ಕೃಷಿಯು ಮಣ್ಣಿನ ಫಲವತ್ತತೆ, ಜೈವಿಕ ವೈವಿಧ್ಯತೆ, ಮತ್ತು ಪರಿಸರ ಸಂರಕ್ಷಣೆ ಹೆಚ್ಚಿಸುತ್ತದೆ ಎಂದರು.
ತಾಲೂಕು ಕೃಷಿಕ ಸವಾಜದ ಅಧ್ಯಕ್ಷ ರಮೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹೆಚ್ಚಿಗೆ ಹುಣಸೆಹಣ್ಣು, ವಾವು, ಅಡಿಕೆ ಇತರೆ ಬೆಳೆಗಳನ್ನು ಬೆಳೆಯುವುದರಿಂದ ರೈತರಿಗೆ ಸಮಯಕ್ಕೆ ಸರಿಯಾಗಿ ಹೆಚ್ಚಿನ ಬೆಲೆ ಸಿಗದ ಕಾರಣ ಅಂದಿನ ವಾರ್ಕೆಟ್ ಬೆಲೆಗೆ ವಾರಾಟ ವಾರಾಡುತ್ತಿದ್ದಾರೆ. ಇದರಿಂದ ರೈತರಿಗೆ ಬಹಳ ತೊಂದರೆ ಆಗುತ್ತಿದೆ ಎಂದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಶಿಧರ್ ಮಾತನಾಡಿ, ರೈತರಿಗೆ ಬಹು ಮುಖ್ಯವಾಗಿ ಪರಿಸರದಲ್ಲಿ ಜೇನು ಸಂತತಿ ನಶಿಸಿ ಹೋಗುತ್ತಿರುವುದರಿಂದ ಜೇನುತುಪ್ಪದ ಬಗ್ಗೆ ಬಹಳ ಬೇಡಿಕೆ ಇದ್ದು, ಜೇನು ಕೃಷಿ ವಾಡುವುದರಿಂದ ರೈತರಿಗೆ ಒಳ್ಳೆ ಇಳುವರಿ ಕೊಡುವುದಲ್ಲದೆ ಲಾಭದಾಯಕ ಬೆಳೆಯಾಗಿರುತ್ತದೆ. ಈ ವಿಚಾರವಾಗಿ ಜೇನು ತರಬೇತಿ ನೀಡಲು ಹೋಬಳಿವಾರು ಜೇನು ಕೃಷಿಕ ತರಬೇತಿದಾರರು ಇರುತ್ತಾರೆ. ರೈತರು ಬಯಸಿದರೆ ಅವರ ಜಮೀನಿನ ಹತ್ತಿರ ಹೋಗಿ ಅವರಿಗೆ ತರಬೇತಿ ನೀಡಿ ಜೇನು ಕಷಿಯ ಬಗ್ಗೆ ತಿಳಿಸಿಕೊಟ್ಟು ಇಲಾಖೆಯಿಂದ ಬರುವ ಸಹಾಯಧನವನ್ನು ಸಹ ರೈತರಿಗೆ ಕೊಡಿಸಿಕೊಡುತ್ತೇವೆ ಎಂದರು.
ಯುವ ಮುಖಂಡ ಹರ್ಷ, ಮಹಾಲಿಂಗಪ್ಪ, ರೈತ ಮುಖಂಡ ವಾದೇವಪ್ಪ, ಸ್ವಾಮಿ, ಯುವ ಮುಖಂಡ ಮಹೇಶ್, ಲಿಂಗರಾಜು ಇದ್ದರು.