ಮಳಖೇಡ ಪೊಲೀಸ್ ಠಾಣೆ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು. ರಾಜಶೇಖರ ಪುರಾಣಿಕ, ಮಹ್ಮದ್ ಸಿರಾಜ್, ಶರಣಪ್ಪ ಜಾಕನಳ್ಳಿ, ಚೇತನ ವಾ್ಮೂರೆ ಇತರರಿದ್ದರು.
ಮಳಖೇಡ: ಸ್ವಚ್ಛ ಪರಿಸರದಿಂದ ಸದೃಢ ಆರೋಗ್ಯ ದೊರೆಯುತ್ತದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಪ್ರತಿ ನಾಗರಿಕರ ಹೊಣೆಯಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ ಪುರಾಣಿಕ ಹೇಳಿದರು.
ಪೊಲೀಸ್ ಠಾಣೆ ಆವರಣದಲ್ಲಿ ಅಲ್ಟ್ರಾಟೆಕ್ ವೆಲ್ಫೇರ್ ಫೌಂಡೇಷನ್ ಹಾಗೂ ಮೆಟ್ರೋ ಕಂಪ್ಯೂಟರ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪರಿಸರ ದಿನ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿದ ಅವರು, ಗಿಡ-ಮರ ಬೆಳೆಸುವುದರಿಂದ ಉತ್ತಮ ವಾತಾವರಣದ ಜತೆಗೆ ಭರ್ಜರಿ ಮಳೆಯಾಗುತ್ತದೆ ಎಂದರು.
ಪಿಎಸ್ಐ ಶರಣಪ್ಪ ಜಾಕನಳ್ಳಿ, ಫೌಂಡೇಷನ್ ಮುಖ್ಯಸ್ಥ ಚೇತನ ವಾ್ಮೂರೆ, ಮೆಟ್ರೋ ಕಂಪ್ಯೂಟರ್ನ ಮಹ್ಮದ್ ಸಿರಾಜ್, ಪ್ರಮುಖರಾದ ದೇವಿಂದ್ರಪ್ಪ ಹಳಿಜೋಳ, ನಾಗರಾಜ ನಂದೂರ, ತೌಸಿಫ್ಖಾನ್, ಅಕ್ಬರ್ ಭಾಗೋಡಿ, ಅನುಖಾನ್, ನಬಿಸಾಬ್, ಶರಣಪ್ಪ ಯರಗೋಳ, ಕಾಶಿಬಾಯಿ ಇತರರಿದ್ದರು.