ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ Environmental
ಚೇಳೂರು: ಪರಿಸರ ರಕ್ಷಣೆ ಸರ್ಕಾರದ ಜವಾಬ್ದಾರಿಯಲ್ಲ. ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಗಾಳಿ, ನೀರು, ಮಣ್ಣಿನ ಮಾಲಿನ್ಯ ತಡೆಗಟ್ಟಿ, ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಹೊಣೆ ಎಂದು ಸಿಐ ಶ್ರೀನಿವಾಸ್ ಹೇಳಿದರು.Environmental
ಪಟ್ಟಣದ ಪೊಲೀಸ್ ಇಲಾಖೆಯ ವಸತಿ ಗೃಹ ಆವರಣದಲ್ಲಿ 200 ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪೊಲೀಸ್ ಇಲಾಖೆಯು ಜೂ.5ರಂದು ಪರಿಸರ ಸಂರಕ್ಷಣೆಗೆ ಹಲವಾರು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಂದು ಮೇಲಧಿಕಾರಿಗಳ ತುರ್ತು ಸಭೆಯಲ್ಲಿ ಭಾಗವಹಿಸಿದ ಕಾರಣ. ಭಾನುವಾರ ಎಲ್ಲ ಸಿಬ್ಬಂದಿ ವಸತಿ ಗೃಹ ಆವರಣದಲ್ಲಿ ಗಿಡ ನೆಟ್ಟರು. ಪ್ಲಾಸ್ಟಿಕ್ ಬಳಕೆ ಕಡಿತಗೊಳಿಸಲು ಜತೆಗೆ ಪರಿಸರ ಉಳಿಸಲು ಸಾರ್ವಜನಿಕರಿಗೆ ಸಹಕರಿಸಬೇಕು. ಗಿಡಗಳನ್ನು ನೆಡುವುದರಿಂದ ಆಮ್ಲಜನಕ ಮಟ್ಟ ಹೆಚ್ಚಾಗಿ ಹವಾಮಾನ ಬದಲಾವಣೆ ನಿಯಂತ್ರಣಕ್ಕೆ ಸಹಾಯವಾಗುತ್ತದೆ ಎಂದರು.