ಮಲ್ಲತ್ತಹಳ್ಳಿ ಕೆರೆ ಆವರಣದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು. ಶಾಸಕ ಮುನಿರತ್ನ, ಬಿಜೆಪಿ ಮುಖಂಡರಾದ ಮಲ್ಲತ್ತಹಳ್ಳಿಯ ಎಂ.ಮಂಜುನಾಥ್,ಜಯರಾಮಯ್ಯ, ವಿ.ಸಿ.ಚಂದ್ರು, ರವಿ ಗೌಡ, ರಾಜಕುಮಾರಿ ಮತ್ತಿತರರಿದ್ದರು.  
ರಾಜ್ಯ

ಜೀವರಾಶಿಯ ಉಳಿವಿಗೆ ಪರಿಸರ ಅಗತ್ಯ; ಡಾ.ಸಿ.ಎನ್.ಮಂಜುನಾಥ್ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಜೀವರಾಶಿಯ ಉಳಿವಿಗೆ ಪರಿಸರ ಅಗತ್ಯ
  • ಸಂಸದ ಡಾ.ಸಿ.ಎನ್.ಮಂಜುನಾಥ್ ಅಭಿಮತ
  • ಗಿಡ ನೆಟ್ಟು ವಿಶ್ವ ಪರಿಸರ ದಿನಾಚರಣೆಗೆ ಚಾಲನೆ

ಬೆಂಗಳೂರು: ಈಭೂಮಿ ಮೇಲೆ ಮಾನವ ಬದುಕುತ್ತಿರುವುದುನೀರು,ಆಮ್ಲಜನಕದಿಂದ.ಎಲ್ಲ ಜೀವರಾಶಿಯಉಳಿವಿಗೆ ಪರಿಸರ ಅತ್ಯಗತ್ಯವಾಗಿದ್ದು,ಎಲ್ಲರೂ ಗಿಡನೆಡುವ ಮೂಲಕ ಪರಿಸರ ಉಳಿಸಬೇಕಾಗಿದೆಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ಹೇಳಿದರು.

ಮಲ್ಲತ್ತಹಳ್ಳಿಕೆರೆ ಬಳಿ ಗಿಡ ನೆಡುವ ಮೂಲಕ ಪರಿಸರದಿನಾಚರಣೆ ಕಾರ್ಯಕ್ರಮಕ್ಕೆಚಾಲನೆ ನೀಡಿ ಮಾತನಾಡಿದರು.ಭೂ ಒತ್ತುವರಿಯಿಂದಕೆರೆಗಳ ಸಂಖ್ಯೆ ಕಡಿಮೆಯಾಗುತ್ತಿವೆ.ಜೊತೆಗೆ ಇರುವಕೆರೆಗಳ ವಿಸ್ತೀರ್ಣ ಕಡಿಮೆಯಾಗುತ್ತಿವೆ.ಭೂಮಿಯ ಆರೋಗ್ಯಚೆನ್ನಾಗಿರಬೇಕಾದರೆ ಕೊಳಚೆ ನೀರುಭೂಮಿಗೆ ಸೇರದಂತೆ ನೋಡಿಕೊಳ್ಳಬೇಕು.ಇದು ಪ್ರತಿಯೊಬ್ಬನಾಗರೀಕರು,ಸಂಘ-ಸಂಸ್ಥೆಗಳು,ಸರ್ಕಾರಗಳ ಕರ್ತವ್ಯವಾಗಿದೆ ಎಂದರು.

ಶಾಸಕಮುನಿರತ್ನ ಮಾತನಾಡಿ,ಮಲ್ಲತ್ತಹಳ್ಳಿಕೆರೆ ಅಭಿವೃದ್ದಿಗೆ ಹಿಂದೆ ಸಿ.ಎಂ.ಆಗಿದ್ದ ಬಸವರಾಜ್ಬೊಮ್ಮಾಯಿ ಅನುದಾನ ಬಿಡುಗಡೆಮಾಡಿ ವಿವಿಧ ಕಾಮಗಾರಿಗೆ ಚಾಲನೆನೀಡಿದ್ದರು.ಆದರೆ ಅವುಗಳುಸ್ಥಗಿತಗೊಂಡಿದ್ದು,ಶೀಘ್ರದಲ್ಲಿಯೇಸಂಸದರ ಜೊತೆಗೂಡಿ ಮತ್ತಷ್ಟುಅನುದಾನ ತಂದು ಚಾಲನೆ ನೀಡಲಾಗುವುದುಎಂದರು.

ರಾಜರಾಜೇಶ್ವರಿನಗರಕ್ಷೇತ್ರದ ಬಿಜೆಪಿ ಮುಖಂಡರಾದಮಲ್ಲತ್ತಹಳ್ಳಿಎಂ.ಮಂಜುನಾಥ್,ವಿ.ಸಿ.ಚಂದ್ರು,ರವಿಗೌಡ,ಶ್ರೀನಿವಾಸ್.ಜಿ,ಜ್ಞಾನಭಾರತಿವಾರ್ಡ್‌ನ ಸಂಘ ಸಂಸ್ಥೆಗಳ ಒಕ್ಕೂಟದಅಧ್ಯಕ್ಷ ಜಯರಾಮಯ್ಯ,ಯೋಗೇಶ್,ಮಹಿಳಾ ಘಟಕದ ಅಧ್ಯಕ್ಷೆ ರಾಜಕುಮಾರಿ,ಮಂಜುಶ್ರೀಮತ್ತಿತರರಿದ್ದರು.