ಆಳಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿದರು. ಶಿವಪುತ್ರಪ್ಪ ಪಾಟೀಲ್, ಅಣ್ಣಾರಾವ ಪಾಟೀಲ್, ಮಾನಪ್ಪ ಕಟ್ಟಿಮನಿ ಇದ್ದರು.
- ಶಾಸಕ ಬಿ.ಆರ್.ಪಾಟೀಲ್ ತಾಕೀತು
- ಆಳಂದನಲ್ಲಿ ಪ್ರಗತಿ ಪರಿಶೀಲನೆ ಸಭೆ
ಆಳಂದ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಬಾರದಿರುವುದರಿಂದ ಕ್ಷೇತ್ರದಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಿದ್ದು, ಅಧಿಕಾರಿಗಳು ಮುಂಜಾಗ್ರತೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ಆರ್.ಪಾಟೀಲ್ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಸಮಸ್ಯಾತ್ಮಕ ಗ್ರಾಮಗಳು ಹಾಗೂ ಸಮಸ್ಯೆ ಆಗುವ ಗ್ರಾಮಗಳ ಪಟ್ಟಿಯೊಂದಿಗೆ ಅಗತ್ಯ ಕ್ರಿಯಾಯೋಜನೆ ಸಿದ್ಧಪಡಿಸಿ. ಅನುದಾನ ಕೊರತೆ ಇದ್ದರೆ ಪ್ರಸ್ತಾವನೆ ಸಲ್ಲಿಸಿ. ಕಳೆದ ಅನೇಕ ಸಭೆಗಳಲ್ಲಿ ಗ್ರಾಪಂ ಆಸ್ತಿಗಳ ಕುರಿತು ಸ್ಟಾಕ್ ರಿಜಿಸ್ಟರ್ ಇಡಲು ಸೂಚನೆ ನೀಡಲಾಗಿತ್ತು. ಆದರೆ ಈವರೆಗೂ ಪಿಡಿಒಗಳನ್ನು ರಿಜಿಸ್ಟರ್ ಮಾಡಿಲ್ಲ. ಅಲ್ಲದೆ ನನ್ನ ಹಾಗೂ ಜನರ ಕರೆಗಳು ಸ್ವೀಕರಿಸುತ್ತಿಲ್ಲ. ಇದು ಹೀಗೆ ಮುಂದುವರಿದರೆ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ವಿಭಾಗದ ಎಇಇ ಸಂಗಮೇಶ ಬಿರಾದಾರ ಮಾತನಾಡಿ, ಕ್ಷೇತ್ರದಲ್ಲಿ 42 ಗ್ರಾಪಂಗಳಿದ್ದು, 17 ಗ್ರಾ.ಪಂಗಳ ವ್ಯಾಪ್ತಿಯ 26 ಗ್ರಾಮಗಳಿಗೆ ಖಾಸಗಿ ವ್ಯಕ್ತಿಗಳಿಂದ ಕುಡಿವ ನೀರು ಒದಗಿಸಲಾಗುತ್ತಿದೆ. ಹೆಬಳಿ ತಾಂಡಾದಲ್ಲಿ ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲೂ ಮಳೆ ಬಾರದಿದ್ದರೆ 65 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೂರಲಿದೆ. ಸಮಸ್ಯೆ ಎದುರಿಸಲು 2.50 ಕೋಟಿ ರೂ. ಅನುದಾನ ಬೇಕಾಗುತ್ತದೆ ಎಂದು ಹೇಳಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪಯ್ಯ ಮಾತನಾಡಿ, ಮಾದನಹಿಪ್ಪರಗಾ, ಖಜೂರಿ ಹೋಬಳಿ ವ್ಯಾಪ್ತಿಯಲ್ಲಿ ಅಲ್ಪ ಪ್ರಮಾಣ ಮಳೆ ಬಂದಿರುವುದರಿಂದ ಮುಂಗಾರು ಬಿತ್ತನೆಯಾಗಿದೆ. ನಿಂರ್ಬಗಾ, ನರೋಣಾ, ಆಳಂದ ವ್ಯಾಪ್ತಿಯಲ್ಲಿ ಬಿತ್ತನೆ ಆಗಿಲ್ಲ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ್, ತಹಸೀಲ್ದಾರ್ ಅಣ್ಣಾರಾವ ಪಾಟೀಲ್, ಇಒ ಮಾನಪ್ಪ ಕಟ್ಟಿಮನಿ, ಗ್ರಾಪಂ ಆಡಳಿತಾಧಿಕಾರಿಗಳಾದ ಡಾ.ಯಲ್ಲಪ್ಪ ಇಂಗಳೆ, ಹೊನ್ನೇಶ ಎಇಇ, ವಿಜಯಲಕ್ಷ್ಮಿ ಹೋಳ್ಕರ್, ಪ್ರಭು ಮಡ್ಡಿತೋಟ ಇತರರಿದ್ದರು.
ಎಂಎಲ್ಸಿ ಬಿಆರ್ಪಿ ಬೇಸರ > ಬರ ೂಷಣೆ ಮಾಡಿದ್ರೆ ಡಿಸಿ ಖಾತೆ ಹಣ ಬಳಸಬಹುದು
ಗ್ರಾಪಂ ನಿರ್ವಹಣೆಗೆ ಹಣ ನೀಡದ ಸರ್ಕಾರ
ಬರ ೂಷಿಸಿ ಇಲ್ವೇ ಗ್ರಾಪಂಗೆ ಹಣ ಕೊಡಿ
ಆಳಂದ: ಜಿಲ್ಲೆಯಲ್ಲಿ ಬರ ಭೀತಿ ಹೋಗಲಾಡಿಸಲು ಪತ್ರಿ ಗ್ರಾಮ ಪಂಚಾಯಿತಿಗೆ 5 ಲಕ್ಷ ರೂ. ಅನುದಾನ ನೀಡಬೇಕು ಎಂದು ಇತ್ತೀಚೆಗೆ ಕಲಬುರಗಿಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದೆ. ಆದರೆ ಈವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ಶಾಸಕ ಬಿ.ಆರ್. ಪಾಟೀಲ್ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಖಾತೆಯಲ್ಲಿ ದುಡ್ಡಿದ್ದು, ಯಾವುದೇ ಕೊರತೆಯಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ ನಿಯಮದಂತೆ ಬರ ೂಷಣೆ ಆದಾಗಲೇ ಆ ಹಣ ಬಳಸಬಹುದು. ಇದೊಂಥರ ಬಗೆಹರಿಯದ ಕಗ್ಗಂಟ್ಟು. ಕೈಗೆ ಸಿಗುವಂತಿಲ್ಲ, ಖರ್ಚು ಮಾಡಂಗಿಲ್ಲ. ತಕ್ಷಣವೇ ಸರ್ಕಾರ ಪ್ರತಿ ಗ್ರಾಪಂಗೆ 5 ಲಕ್ಷ ರೂ. ಬಿಡುಗಡೆ ಮಾಡಬೇಕು. ಇಲ್ಲವೇ ಬರ ೂಷಿಸಬೇಕು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಈ ಮಧ್ಯೆ ಡಿಸಿಎಂ ಡಾ.ಜಿ. ಪರಮೇಶ್ವರ್ ಬರ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಪ್ರತಿಕ್ರಿಯಿಸಿದೆ ರ್ನಿಲಕ್ಷ$್ಯ ತೋರಿಸುತ್ತಿದೆ. ಹೀಗಾಗಿ ಸರ್ವಪಕ್ಷದ ನಿಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಬರ ೂಷಣೆಗೆ ಒತ್ತಡ ಹೇರಬೇಕು. ಇಲ್ಲವೇ ಎನ್ಡಿಆರ್ಎಫ್ ಅನುದಾನ ೂಷಿಸಿ ಎಂದು ಕೋರಬೇಕು ಎಂದು ಸಲಹೆ ನೀಡಿದರು.
ಬೆಳೆ ವಿಮೆ ವೈಜ್ಞಾನಿಕವಾಗಿ ಆಗಬೇಕು. ರೈತರು ಬ್ಯಾಂಕ್ನಿಂದ ಸಾಲ ಪಡೆದು ಬೀಜ&ರಸಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಮುಂಗಾರು ಮಳೆ ಬಾರದಿರುವುದಕ್ಕೆ ಸಸಿಗಳು ಮೊಳಕೆ ಒಡೆದಿಲ್ಲ. ವಿಮೆ ಕಟ್ಟಿಕೊಂಡರೆ ಸಾಲದು, ಎಲ್ಲರಿಗೂ ವಿಮೆ ಹಣ ಸಿಗುವಂತೆ ನೋಡಿಕೊಳ್ಳಬೇಕು.