ಅಫಜಲಪುರ ತಾಲೂಕಿನ ಗೊಬ್ಬೂರ (ಬಿ) ಗ್ರಾಮದಲ್ಲಿ ಆಯೋಜಿಸಿದ್ದ ಎಸ್ಐಆರ್ ಕಾರ್ಯಾಗಾರವನ್ನು ಶಾಸಕ ಎಂ.ವೈ.ಪಾಟೀಲ್ ಉದ್ಘಾಟಿಸಿದರು. ಸುರೇಶ ತಿಪಶೆಟ್ಟಿ, ಶಿವಶರಣಪ್ಪ ಹೀರಾಪುರ, ಸರ್ವರ್ ಪಟೇಲ್ ಇತರರಿದ್ದರು.
ಅಫಜಲಪುರ: ಪ್ರಜಾಪ್ರಭುತ್ವವನ್ನು ಸದೃಢಗೊಳಿಸಲು ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಪೂರಕ ದಾಖಲೆ ನೀಡಬೇಕು ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು. ಗೊಬ್ಬೂರ (ಬಿ) ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್ಐಆರ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಬಿಎಲ್ಎ ಹಾಗೂ ಪದ ಕಾರ್ಯಕರ್ತರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಹೊರಹೋಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯ ಸುರೇಶ ತಿಪಶೆಟ್ಟಿ, ಜಿಪಂ ಮಾಜಿ ಸದಸ್ಯ ಶಿವಶರಣಪ್ಪ ಹೀರಾಪುರ, ಪಿಎಲ್ಡಿ ಬ್ಯಾಂಕ್ ಉಪಾಧ್ಯ ಸರ್ವರ್ ಪಟೇಲ್, ಪ್ರಮುಖರಾದ ಮಲ್ಲಿಕಾರ್ಜುನ ರ್ಖಗೆ, ಅಣವೀರಯ್ಯ ಮಠಪತಿ, ಅಂಬರೀಶ ಬುರಲಿ, ಶಿವರಾಜ ಬಾದನಳ್ಳಿ, ಸಿದ್ದು ಜವಳಿ, ಪ್ರವಿಣ ಕಲ್ಲೂರ, ಸಚಿನ ಲಿಂಗಶೆಟ್ಟಿ, ಯಲ್ಲಣ್ಣಗೌಡ ಪಾಟೀಲ್, ಜಟ್ಟೆಪ್ಪ ಪೂಜಾರಿ, ದತ್ತು ಜೆಮಶೆಟ್ಟಿ, ಅಲ್ತಾಫ್ ನರೋಣಿ, ರಾಕೇಶ ವಡಗೇರಿ, ಅಸ್ಪಾಕ್ ಬಂದರವಾಡ, ಸುಭಾಷ ಲಿಂಗಶೆಟ್ಟಿ, ಜಗದೇವಪ್ಪ ಪಾಟೀಲ್, ರಾಕೇಶ ರಾಠೋಡ್ ಇತರರಿದ್ದರು.