ಸೇಡಂನಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ರೇವಗೊಂಡ ಮಾತನಾಡಿದರು. ಬಸವರಾಜ ಪಾಟೀಲ್​ ಊಡಗಿ, ಶಿವಶರಣರೆಡ್ಡಿ ಪಾಟೀಲ್​, ಅನುಸೂಯಾ ಹೂಗಾರ, ವಿಶಾಲಕುಮಾರ ಇದ್ದರು.  
ರಾಜ್ಯ

ಸರ್ಕಾರಿ ಯೋಜನೆ ರೈತರಿಗೆ ಮುಟ್ಟಿಸಿ

ಪ್ರಮುಖ ಮುಖ್ಯಾಂಶಗಳು

  • ಬಸವರಾಜ ಪಾಟೀಲ್​ ಊಡಗಿ ಕರೆ
  • ಕೃಷಿಕ ಸಮಾಜದಿಂದ ಪ್ರಗತಿ ಪರಿಶೀಲನೆ ಸಭೆ
ಸೇಡಂ: ಸರ್ಕಾರಗಳು ರೈತರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದನ್ನು ರೈತರಿಗೆ ಮುಟ್ಟಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್​ ಊಡಗಿ ಹೇಳಿದರು.
ಕೃಷಿ ಇಲಾಖೆ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷಿಕ ಸಮಾಜ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ಮಳೆ ಕೊರತೆ ಆಗಿದೆ. ಹೀಗಾಗಿ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಇಲಾಖೆ ಸರ್ವ ಸಿಬ್ಬಂದಿ ರೈತರಿಗೆ ವಾತಾವರಣಕ್ಕೆ ತಕ್ಕಂತೆ ಅಗತ್ಯ ಬೆಳೆ ಬೆಳೆಯುವ ಬಗ್ಗೆ ಸೂಕ್ತ ಸಲಹೆ ನೀಡಬೇಕು ಎಂದು ತಾಕೀತು ಮಾಡಿದರು.
ಸಹಾಯಕ ಕೃಷಿ ನಿರ್ದೇಶಕ ವಿಶಾಲಕುಮಾರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅಜೀಮುದ್ದೀನ್​, ಕೃಷಿ ಇಲಾಖೆ ಉಪ ನಿರ್ದೇಶಕಿ ಅನುಸೂಯಾ ಹೂಗಾರ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ರೇವಗೊಂಡ ಮಾತನಾಡಿದರು.
ಉಪಾಧ್ಯಕ್ಷ ಲಕ್ಷ$್ಮಣ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಪಸಾರ, ಖಜಾಂಚಿ ಸಾಯಪ್ಪ, ಸದಸ್ಯರಾದ ಶಿವಶರಣರೆಡ್ಡಿ ಪಾಟೀಲ್​, ಶರಣಪ್ಪ ಬಾಬು, ಗುರುಲಿಂಗಪ್ಪ ಕಟ್ಟಿಮನಿ, ಬಸವರಾಜ ಮಾಲಿಪಾಟೀಲ್​, ಶರಣಬಸಪ್ಪ ಹಾಗರಗಿ, ಜಗನ್ನಾಥರೆಡ್ಡಿ, ಭೀಮಶಾ, ಅಧಿಕಾರಿಗಳಾದ ಜೈಶೀಲಾ, ಆಶೀಶ ಮಹಾಜನ, ಸಿದ್ದಣ್ಣಗೌಡ ಪಾಟೀಲ್​, ವೀರಶೆಟ್ಟಿ ಪಾಟೀಲ್​ ಇತರರಿದ್ದರು.