ಅಫಜಲಪುರದಲ್ಲಿ ಹಮ್ಮಿಕೊಂಡಿದ್ದ ಎಸ್ಐಆರ್ ಜನಜಾಗೃತಿ ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯ ಪ್ರಕಾಶ ಜಮಾದಾರ ಮಾತನಾಡಿದರು. ಪಪ್ಪುಪಟೇಲ್, ಅಂಬರೀಶ ಬುರಲಿ, ಮಂಜುನಾಥ ಅಂಜುಟಗಿ, ಸಿದ್ಧಾರ್ಥ ಬಸರಿಗಿಡ, ಚಂದ್ರಶೇಖರ ಕರಜಗಿ, ರಮೇಶ ಪೂಜಾರಿ ಇತರರಿದ್ದರು.
- ಪ್ರಕಾಶ ಜಮಾದಾರ ಸೂಚನೆ
- ಅಫಜಲಪುರ ಕಾಂಗ್ರೆಸ್ ಕಚೇರಿಯಲ್ಲಿ ಸಭೆ
ಅಫಜಲಪುರ: ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಅರ್ಹ ಮತದಾರರು ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು. ಪ್ರತಿ ಬೂತ್ನಲ್ಲಿ ಎಲ್ಲರೂ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ ಜಮಾದಾರ ಕರೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಎಸ್ಐಆರ್ ಜನಜಾಗೃತಿ, ಬಿಎಲ್ಎ-2 ಪ್ರತಿನಿಧಿ ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜನರಿಗೆ ಎಸ್ಐಆರ್ ಕುರಿತು ಮಾಹಿತಿ ನೀಡುವ ಜತೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸಹಕರಿಸಬೇಕು ಎಂದರು.
ಮುಖಂಡ ಅಂಬರೀಶ ಬುರಲಿ ಮಾತನಾಡಿದರು.
ಕೆಪಿಸಿಸಿ ಸದಸ್ಯ ಪಪ್ಪು ಪಟೇಲ್, ಕಲಬುರಗಿ ಎಪಿಎಂಸಿ ಅಧ್ಯ ಮಂಜುನಾಥ ಅಂಜುಟಗಿ, ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರ ಅಧ್ಯ ಚಂದ್ರಶೇಖರ ಕರಜಗಿ, ಬ್ಲಾಕ್ ಕಾಂಗ್ರೆಸ್ ಅಧ್ಯ ರಮೇಶ ಪೂಜಾರಿ, ಜಿಪಂ ಮಾಜಿ ಸದಸ್ಯ ಸಿದ್ಧಾರ್ಥ ಬಸರಿಗಿಡ, ಪ್ರಮುಖರಾದ ಅಣವೀರಯ್ಯ ಮಠಪತಿ, ಮಹಾಲಿಂಗ ಅಂಗಡಿ, ಪ್ರವಿಣ ಕಲ್ಲೂರ, ವಿಶ್ವನಾಥ ಮಲಘಾಣ, ಸಂಗನಗೌಡ ಪಾಟೀಲ್, ರಮೇಶಗೌಡ ಪಾಟೀಲ್, ಪ್ರೀತಮ್ ಚವ್ಹಾಣ್, ಮಾಜೀದ್ ಪಟೇಲ್, ಬಸಯ್ಯ ನಂದಿಕೋಲ, ಭೀಮಣ್ಣ ಪೂಜಾರಿ ಇತರರಿದ್ದರು.