ಸೇಡಂನಲ್ಲಿ ಹಮ್ಮಿಕೊಂಡಿದ್ದ ಎಸ್ಐಆರ್ ಪರಿಶೀಲನೆ ಮತ್ತು ಬಿಎಲ್ಎ-2ಗಳ ಸಭೆಯನ್ನು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಉದ್ಘಾಟಿಸಿದರು. ಸಿದ್ದಾಜಿ ಪಾಟೀಲ್, ಶರಣು ಮೆಡಿಕಲ್, ಅನೀಲಕುಮಾರ ಪಾಟೀಲ್, ಸಂತೋಷಿರಾಣಿ ಪಾಟೀಲ್, ಸಿದ್ದು ಬಾನರ್ ಇದ್ದರು.
- ಮಾಜಿ ಶಾಸಕ ರಾಜಕುಮಾರ ಪಾಟೀಲ್ ಹೇಳಿಕೆ
- ಸೇಡಂನಲ್ಲಿ ಬಿಎಲ್ಎ-2ಗಳ ಸಭೆ
ಸೇಡಂ: ಭಾರತೀಯ ಜನತಾ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳವಾಗಿದ್ದು, ಬೂತ್ ಮಟ್ಟದಲ್ಲಿ ಹಗಲಿರುಳು ದುಡಿಯುವ ನಿಸ್ವಾರ್ಥ ಕಾರ್ಯಕರ್ತರಿಂದ ಮಾತ್ರ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದರು.
ಬಾಲಾಜಿ ಕಲ್ಯಾಣ ಮಂಟಪದಲ್ಲಿ ಬಿಜೆಪಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪರಿಶೀಲನೆ ಹಾಗೂ ಬಿಎಲ್ಎ-2ಗಳ ಸಭೆ ಉದ್ಘಾಟಿಸಿ ಮಾತನಾಡಿ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮುಗಿದು ಕರಡು ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಹೊರಗೊಳಿದವರ ಕುರಿತು ಅಥವಾ ಸೇರ್ಪಡೆಗೊಂಡವರ ಪೂರ್ವಾಪರ ತಿಳಿದುಕೊಳ್ಳಬೇಕು. ನೈಜ ಮತದಾರರು ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ನಮ್ಮ ಬಿಎಲ್ಎ-2ಗಳು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಸ್ಐಆರ್ ಪ್ರಕ್ರಿಯೆ ಬಿಜೆಪಿ ಮಂಡಲ ಪ್ರಭಾರಿ ಸಿದ್ದಾಜಿ ಪಾಟೀಲ್ ಮಾತನಾಡಿ, ಇಡೀ ಜಿಲ್ಲೆಯ ಎಸ್ಐಆರ್ ಪ್ರಕ್ರಿಯೆ ಗಮನಿಸಿದರೆ ಸೇಡಂ ಮಂಡಲದ ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇದೊಂದು ಪ್ರಶಂಸನೀಯ ವಿಷಯವಾಗಿದೆ. ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಅವರು ನಿರಂತರ ಗ್ರಾಮಗಳಿಗೆ ಭೇಟಿ ನೀಡಿ ಪ್ರಕ್ರಿಯೆಯಲ್ಲಿ ಕಾರ್ಯಕರ್ತರನ್ನು ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಿದ್ದಾರೆ ಎಂದು ಶ್ಲಾಘಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಶರಣು ಮೆಡಿಕಲ್, ಜಿಲ್ಲಾ ಉಪಾಧ್ಯೆಕ್ಷ ಸಂತೋಷಿರಾಣಿ ಪಾಟೀಲ್, ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ ತೊಟ್ನಳ್ಳಿ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ವಿನೋದ ಸಾಹುಕಾರ, ರೈತ ಮೋರ್ಚಾ ತಾಲೂಕು ಅಧ್ಯಕ್ಷ ನಾಗರೆಡ್ಡಿ ಪಾಟೀಲ್, ಓಬಿಸಿ ಮೋರ್ಚಾ ತಾಲೂಕು ಅಧ್ಯಕ್ಷ ಮಹಾದೇವಪ್ಪ ಗೋಣಿ, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಮು ಕಣೇಕಲ್, ಎಸ್ಟಿ ಮೋರ್ಚಾ ತಾಲೂಕು ಅಧ್ಯಕ್ಷ ಭೀಮು ನಾಯಕ, ಪ್ರಮುಖರಾದ ಅನೀಲಕುಮಾರ ಪಾಟೀಲ್, ವಿಜಯಕುಮಾರ ಆಡಕಿ, ಸಿದ್ದು ಬಾನರ್, ನಾಗಪ್ಪ ಕೊಳ್ಳಿ, ನಾಗರೆಡ್ಡಿ ದೇಶಮುಖ, ಬಸವರಾಜಗೌಡ ದೇವನೂರ, ಅಬ್ದುಲ್ ಜಬ್ಬಾರ್ ಇತರರಿದ್ದರು.
ಶರಣು ಕೆರಳ್ಳಿ ಪ್ರಾರ್ಥಿಸಿದರು. ಶರಣು ಮೆಡಿಕಲ್ ಪ್ರಾಸ್ತಾವಿಕ ಮಾತನಾಡಿದರು. ರಾವೇಂದ್ರ ಮೆಕಾನಿಕ್ ಸ್ವಾಗತಿಸಿದರು. ಓಂಪ್ರಕಾಶ ಪಾಟೀಲ್ ತರನಳ್ಳಿ ನಿರೂಪಣೆ ಮಾಡಿದರು.
ಶಾಸಕ ಹಾಗೂ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ವೈಪಲ್ಯ, ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಮುಂಬರುವ ದಿನಗಳಲ್ಲಿ ಕ್ಷೇತ್ರದಾದ್ಯಂತ ಸಂಘಟಿತ ಹೋರಾಟ ನಡೆಸಲಾಗುವುದು. ಯಾವೆಲ್ಲ ವಿಷಯಗಳನ್ನು ಇಟ್ಟುಕೊಂಡು ಜನರ ಬಳಿ ತೆರಳಬೇಕು ಎನ್ನುವ ಕುರಿತು ಕಾರ್ಯಕರ್ತರು ಮುಕ್ತವಾಗಿ ಸಲಹೆ ನೀಡಬೇಕು. ಮಳಖೇಡ, ಸುಲೇಪೇಟ, ನಿಡಗುಂದಾ ಸೇರಿ ವಿವಿಧೆಡೆ ಪ್ರತ್ಯೇಕ ಹೋರಾಟಕ್ಕೆ ತಯಾರಿ ನಡೆಸಲಾಗುತ್ತಿದೆ.
— > ರಾಜಕುಮಾರ ಪಾಟೀಲ್ ತೆಲ್ಕೂರ, ಮಾಜಿ ಶಾಸಕ