ಯರಗೋಳ ಬಳಿಯ ಅಲ್ಲಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಲಿಕೆ ಟಾಟಾ ಸ್ಟ್ರಸ್ಟ್​ನಿಂದ ಮಕ್ಕಳ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಸಂಪನ್ಮೂಲ ವ್ಯಕ್ತಿ ಬಂಗಾರೆಪ್ಪ, ಮಹಾಂತೇಶ, ಆಶಪ್ಪ, ಜಗದೀಶ, ದೇವಿಂದ್ರಪ್ಪ ಈಟಿ, ಶರಣಬಸ್ಸಪ್ಪ ಪಾಕರೆಡ್ಡಿ, ಚಂದ್ರಕಲಾ, ಮಂಜುನಾಥ ಇತರರಿದ್ದರು. 
ರಾಜ್ಯ

ಜಾತ್ರೆಯಂತೆ ಮಕ್ಕಳ ಶಾಲಾ ದಾಖಲಾತಿ ಮಾಡಿ

ಪ್ರಮುಖ ಮುಖ್ಯಾಂಶಗಳು

  • ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಂಗಾರೆಪ್ಪ ಸಲಹೆ
  • ಅಲ್ಲಿಪುರ ಗ್ರಾಮದಲ್ಲಿ ಆಂದೋಲನ ಕಾರ್ಯಕ್ರಮ
ಯರಗೋಳ: ಗ್ರಾಮೀಣ ಭಾಗದಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಜಾತ್ರೆ ಮಾಡುವಂತೆ ಶಾಲೆಗೆ ಮಕ್ಕಳ ದಾಖಲಾತಿಯೂ ಮಾಡಬೇಕು ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಂಗಾರೆಪ್ಪ ಹೇಳಿದರು.
ಇಲ್ಲಿನ ಅಲ್ಲಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಾಲಾ ಶಿಣ ಇಲಾಖೆ ಮತ್ತು ಕಲಿಕೆ ಟಾಟಾ ಟ್ರಸ್ಟ್​ ಸಹಭಾಗಿತ್ವದಲ್ಲಿ 2026&27ನೇ ಸಾಲಿನ ಅಂಗನವಾಡಿ ಮತ್ತು ಶಾಲಾ ಮಕ್ಕಳ ದಾಖಲಾತಿ ಹಾಜರಾತಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಾಲಕರು ಕೂಡ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸದೆ ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಆ ಯೋಜನೆಗಳ ಸದ್ಬಳಕೆಯೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ವೇಳೆ ಶಾಲೆಯ ದ್ವಾರಬಾಗಿಲಿಗೆ ಮಾವಿನ ಎಲೆ, ತೆಂಗಿನ ಗರಿಗಳಿಂದ ಸಿಂಗರಿಸಲಾಗಿತ್ತು.ವಿದ್ಯಾರ್ಥಿನಿಯರು ಸೀರೆ ಉಟ್ಟು, ಕುಂಬ ಹೊತ್ತು ಗಮನ ಸೆಳೆದರು. ಮುಖ್ಯ ಬೀದಿಯಲ್ಲಿ ಬ್ಯಾನರ್​ ಹಿಡಿದು ಶಿಣ ಕುರಿತು ೂಷಣೆ ಕೂಡುಗವ ಮೂಲಕ ಜಾಗೃತಿ ಮೂಡಿಸಲಾಯಿತು.
ಜಾಥಾ ಕಾರ್ಯಕ್ರಮಕ್ಕೆ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಮಹಾಂತೇಶ ಭೀಮು ಸದರಿ, ಆಶಪ್ಪ ನೆರವು ನೀಡಿದರು. ಯಾದಗಿರಿ ತಾಲೂಕಿನ ೇತ್ರ ಸಮನ್ವಯ ಅಧಿಕಾರಿ ಜಗದೀಶ, ಯರಗೋಳ ವಲಯ ಶಿಣ ಸಂಯೋಜಕ ದೇವಿಂದ್ರಪ್ಪ ಈಟಿ, ಶರಣಬಸ್ಸಪ್ಪ ಪಾಕರೆಡ್ಡಿ, ಮುಖ್ಯ ಶಿಕಿ ಚಂದ್ರಕಲಾ, ಸಹ ಶಿಕರಾದ ಮಂಜುನಾಥ, ಶಾಕೀರ್​ ಹುಸೇನ್​, ಯಲ್ಲಮ್ಮ, ಮೇ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯ ಕಾಶಪ್ಪ ಮತ್ತು ಸದಸ್ಯರು, ಕಲಿಕೆ ಸಂಸ್ಥೆ ಹಿರಿಯ ಸಂಯೋಜಕ ಲಿಂಗಪ್ಪ ವಿ.ಕೆಲ್ಲೂರ, ಮಲ್ಲಿಕಾರ್ಜುನ ಎನ್​ ಸೇರಿ ಅನೇಕರು ಇದ್ದರು.