ಯಾದವಾಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದೀಪೊತ್ಸವ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಸನಸಾಬ್ ಮುಧೋಳ, ಎಂ.ಡಿ.ಮುಲ್ಲಾ, ಲಕ್ಷ$್ಮವ್ವ ಪಾಟೀಲ, ಹನುಮಂತ ಮೋಡಿ ಇತರರಿದ್ದರು.
ಯಾದವಾಡ: ಆಂಗ್ಲ ಖಾಸಗಿ ಶಾಲೆಗಳ ಆಕರ್ಷಣೆಗೆ ಜನರು ಮರಳಾಗದೇ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಮುಖ್ಯಶಿಕ ಎಂ.ಡಿ.ಮುಲ್ಲಾ ಹೇಳಿದರು. ಗ್ರಾಮದ ಕಾಮನಕಟ್ಟ ಮಾರುತಿ ದೇವಸ್ಥಾನದ ಆವರಣದಲ್ಲಿ ದೀಪೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಸಾಂಸತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಒಂದನೇ ತರಗತಿಗೆ ಈಗಾಗಲೇ 22 ವಿದ್ಯಾರ್ಥಿಗಳ ಹೆಸರು ನೋಂದಣಿಯಾಗಿದು,್ದ ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 206ಕ್ಕೇರಿದೆ. ಸರ್ಕಾರಿ ಶಾಲೆಗಳು ಎಲ್ಲ ಸೌಲಭ್ಯ ನೀಡುತ್ತಿದ್ದು, ನುರಿತ ಶಿಕರನ್ನು ಒಳಗೊಂಡಿವೆ ಎಂದರು. ಎಸ್ಡಿಎಂಸಿ ಅಧ್ಯ ಹಸನಸಾಬ್ ಮುಧೋಳ, ಉಪಾಧ್ಯ ಲಕ್ಷ$್ಮವ್ವ ಪಾಟೀಲ, ಹನುಮಂತ ಮೋಡಿ, ಇಲಾಹಿ ಅತ್ತಾರ, ಗುರಪ್ಪ ಗಾಣಗಿ, ಆನಂದ ತೋಟಗಿ, ಶಿವಬಸು ಗಾಣಗಿ, ಶಿಕರಾದ ಎಂ.ಜಿ.ಕರೆನ್ನವರ, ಎಂ.ಐ.ಚಾಯಪ್ಪಗೋಳ, ಎ.ವಿ.ರಾಗಣ್ಣವರ, ಬೀರಪ್ಪಣ್ಣ ಹಾರೂಗೇರಿ, ಸುಭಾಸ ಭೂತಾಳಿ, ಎ.ಎಸ್.ಅಡಾಲಟ್ಟಿ ಇತರರಿದ್ದರು.