ಕಕ್ಕೇರಾ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಆರಂಭೋತ್ಸವದಲ್ಲಿ ಸೋಮವಾರ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸಿಹಿ ತಿನ್ನಿಸಿ ಸ್ವಾಗತಿಸಲಾಯಿತು. ಬಸಯ್ಯಸ್ವಾಮಿ, ದೇವಿಂದ್ರಪ್ಪ ದೇಸಾಯಿ, ಅನುರಾಧಾ ಗೌಡಗೇರಾ, ದೇವು ಸಜ್ಜನ್, ಮಹಾಂತಯ್ಯ, ಗಣೇಶ ಇತರರಿದ್ದರು.
- ಮುಖ್ಯಗುರು ಬಸಯ್ಯ ಸ್ವಾಮಿ ಸಲಹೆ
- ಕಕ್ಕೇರಾದಲ್ಲಿ ಶಾಲಾ ಆರಂಭೋತ್ಸವ
ಕಕ್ಕೇರಾ: ಗುಣಮಟ್ಟದ ಶಿಕ್ಷಣ ಮತ್ತು ಮಕ್ಕಳ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸುತ್ತಿರುವ ಸರ್ಕಾರಿ ಶಾಲೆಗೆ ಪಾಲಕರು ತಮ್ಮ ಮಕ್ಕಳನ್ನು ಸೇರಿಸಬೇಕು ಎಂದು ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಬಸಯ್ಯ ಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವ ವೇಳೆ ಮಾತನಾಡಿದ ಅವರು, ಶಾಲಾ ಮಕ್ಕಳಿಗಾಗಿ ಸರ್ಕಾರ ಗುಣಮಟ್ಟದ ಶಿಕ್ಷಣದ ಜತೆಗೆ ಉಚಿತವಾಗಿ ಪುಸ್ತಕಗಳು, ಬಟ್ಟೆ, ಶೂ, ಮದ್ಯಾಹ್ನದ ಬಿಸಿಯೂಟ, ಮೊಟ್ಟೆ, ಹಾಲು ಸೇರಿ ಅನೇಕ ಸೌಲಭ್ಯವನ್ನು ನೀಡಲಾಗುತ್ತಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ನುರಿತ ಶಿಕ್ಷಕರು ಹಗಲಿರುಳು ಶ್ರಮವಹಿಸುತ್ತಾರೆ. ಈ ಸಲದ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ 121 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ನೂರಕ್ಕೆ ನೂರು ಫಲಿತಾಂಶ ನಮ್ಮ ಶಾಲೆ ಬಂದಿದೆ. ಹೀಗಾಗಿ ತಮ್ಮ ಮಕ್ಕಳನ್ನು ಮನೆ ಹಾಗೂ ಕೂಲಿ ಕೆಲಸಕ್ಕೆ ಕಳುಹಿಸದೆ ಶಾಲೆಗೆ ದಾಖಲಲಿಸಬೇಕು ಎಂದು ಕಿವಿಮಾತು ಹೇಳಿದರು.'
ಪದವಿಪೂರ್ವ ಕಾಲೇಜು ಪ್ರಾಚಾಯೆರ್ ಅನುರಾಧಾ ಗೌಡಗೇರಾ, ಪ್ರೌಢಶಾಲಾ ಎಸ್ಡಿಎಂಸಿ ಅಧ್ಯಕ್ಷ ದೇವಿಂದ್ರಪ್ಪ ದೇಸಾಯಿ, ಶಿಕ್ಷಕರಾದ ದೇವಿಂದ್ರಪ್ಪ ಸಜ್ಜನ್, ಕಾಶೀನಾಥ ಹೊಸಮಠ, ಗಣೇಶ ಭಜಂತ್ರಿ, ಮಹಾಂತಯ್ಯಸ್ವಾಮಿ, ರಾಜು ಬೊಮ್ಮನಳ್ಳಿ, ಶೋಭಾ ಬಡಿಗೇರ, ಸುಭದ್ರ ಜೋಶಿ, ಸವಿತಾ ಸ್ವಾಮಿ, ಮಹಾದೇವಿ, ಮಂಜುಳಾ, ಜಯಲ್ಮ, ಮಂಜುನಾಥ ಭಜಂತ್ರಿ ಇತರರಿದ್ದರು.