- ಪಾಲಕರಿಗೆ ಜಿಪಂ ಸಿಇಒ ಬಹಿರಂಗ ಪತ್ರ
- ಉಚಿತ ಸಮವಸ್ತ್ರ ಸೇರಿ ಹಲವಾರು ಸೌಲಭ್ಯ ಲಭ್ಯ
ಕಲಬುರಗಿ: ಹೊಸ ಆಶಯ, ಕನಸುಗಳೊಂದಿಗೆ ಪ್ರಸಕ್ತ ಶೈಣಿಕ ವರ್ಷ ಜೂ.1ರಿಂದ ಆರಂಭವಾಗುತ್ತಿದ್ದು, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಆಯೋಜಿಸಲಾಗುತ್ತಿದೆ. ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಸಂಕನೂರ ಅವರು ಕೋರಿದ್ದಾರೆ.
ಈ ಕುರಿತು ಪಾಲಕರು ಹಾಗೂ ಪೋಷಕರಿಗೆ ಬಹಿರಂಗ ಪತ್ರ ಬರೆದಿರುವ ಅವರು, ಗುಣಮಟ್ಟದ ಶಿಕ್ಷಣ ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು. ಅದನ್ನು ಈಡೇರಿಸುವ ಮತ್ತು ಸಮೃದ್ಧ ಸಮಾಜ ನಿರ್ಮಾಣದ ಭದ್ರ ಅಡಿಪಾಯ ಹಾಕುವ ಜವಾಬ್ದಾರಿ ಪಾಲಕರ ಮೇಲಿದೆ. ಶಾಲೆ ಮತ್ತು ಸಮುದಾಯ ಒಂದೇ ಗುರಿಯೊಂದಿಗೆ ಕೈಜೋಡಿಸಿದಾಗ ಮಕ್ಕಳ ಭವಿಷ್ಯ ಮತ್ತಷ್ಟು ಉಜ್ವಲವಾಗುತ್ತದೆ. ಆದ್ದರಿಂದ ಪಾಲಕರು ಮಕ್ಕಳನ್ನು ನಮ್ಮ ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಮಗುವಿಗೆ ಸಮಗ್ರ ಗುಣಮಟ್ಟದ ಮತ್ತು ಸ್ಪರ್ಧಾತ್ಮಕ ಶಿಕ್ಷಣ ನೀಡಲು ನಮ್ಮ ಸರ್ಕಾರಿ ಶಾಲೆಗಳು ಬಲಿಷ್ಠ ಮೂಲಸೌಕರ್ಯ ಹಾಗೂ ಪೂರಕ ವ್ಯವಸ್ಥೆ ಹೊಂದಿರುವ ಜ್ಞಾನದ ದೇಗುಲಗಳಾಗಿವೆ. ಅರ್ಹ ಮತ್ತು ಬದ್ಧತೆಯುಳ್ಳ ಶಿಕ್ಷರು, ಉಚಿತ ಪಠ್ಯಪುಸ್ತಕ ಮತ್ತು ಸಮವಸ, ಬಿಸಿಯೂಟ ಯೋಜನೆ, ಮೂಲಸೌಕರ್ಯ, ಪ್ರೋತ್ಸಾಹಧನ ಮತ್ತು ವಿದ್ಯಾರ್ಥಿ ವೇತನ, ಸಮಗ್ರ ವ್ಯಕ್ತಿತ್ವ ವಿಕಸನ, ಗ್ರಂಥಾಲಯ, ಪ್ರಯೋಗಾಲಯ, ತಾಂತ್ರಿಕ ಶಿಕ್ಷಣ, ಡಿಜಿಟಲ್ ಕಲಿಕೆ ಹೀಗೆ ಅನೇಕ ಸೌಲಭ್ಯ ಹೊಂದಿವೆ. ಸರ್ಕಾರಿ ಶಾಲೆಗಳು ಸುರತ, ಅಂತರ್ಗತ, ಗುಣಮಟ್ಟದ ಕಲಿಕೆ ಮತ್ತು ಅತ್ಯುತ್ತಮ ಕಲಿಕಾ ವಾತಾವರಣ ಖಚಿತಪಡಿಸಿಕೊಂಡಿವೆ ಎಂದು ಹೇಳಿದ್ದಾರೆ.
"
ಜೂ.1ರಂದು ಜಿಲ್ಲೆಯ ಪ್ರತಿ ಸರ್ಕಾರಿ ಶಾಲೆಯಲ್ಲಿ ಮಹಾಸಭೆ ಆಯೋಜಿಸಲಾಗಿದ್ದು, ಎಲ್ಲ ಪಾಲಕರು ತಪ್ಪದೇ ಭಾಗವಹಿಸಬೇಕು. ನಾವೆಲ್ಲರೂ ಒಟ್ಟಾಗಿ ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿಸೋಣ.
— > ರಾಹುಲ್ ಸಂಕನೂರ, ಸಿಇಒ, ಜಿಪಂ