ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ರಸಾಯನಶಾಸ ವಿಭಾಗದಲ್ಲಿ ಹಮ್ಮಿಕೊಂಡಿದ್ದ ದಿನಗಳ ಕಾರ್ಯಾಗಾರಕ್ಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಣ ಚಾಲನೆ ನೀಡಿದರು. ಬಾಲಭಾವು ವಾರ್ಕಾಡ್, ಹೇಮಲತಾ ಬಲರಾಮ್, ಪ್ರೊ.ವೆಂಕಟರಮಣ ದೊಡ್ಡಿ, ಪ್ರೊ.ಪಲ್ಲೆಪೋಗು ರಾವಯ್ಯ, ಪ್ರೊ.ಕೆ.ಹನುಮೇಗೌಡ ಇದ್ದರು.
- ಕುಲಪತಿ ಪ್ರೊ.ಸತ್ಯನಾರಾಯಣ ಹೇಳಿಕೆ
- ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕಾರ್ಯಾಗಾರ
ಕಲಬುರಗಿ: ಇಂದಿನ ಆಧುನಿಕ, ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನದ ಜತೆಗೆ ಪ್ರಾಯೋಗಿಕ ಕೌಶಲವೂ ಅಗತ್ಯ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿರುವ ಅತ್ಯಾಧುನಿಕ ಸಂಶೋಧನಾ ಸೌಲಭ್ಯ ಹಾಗೂ ಪ್ರಯೋಗಾಲಯಗಳನ್ನು ಬಳಕೆ ಮಾಡಿಕೊಂಡು ತಮ್ಮ ಸಂಶೋಧನಾ ಸಾಮರ್ಥ್ಯ ವೃದ್ಧಿಸಿಕೊಳ್ಳುವುದರಿಂದ ವಿಕಸಿತ ಭಾರತ-2047 ನಿರ್ಮಾಣದ ಗುರಿ ಸಾಧನೆಗೆ ಸಹಕಾರಿಯಾಗಲಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ರಸಾಯನಶಾಸ ವಿಭಾಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮಾಸ್ ಸ್ಪೆಕ್ಟ್ರೊಮೆಟ್ರಿ-ಬೇಸ್ಡ್ ಪ್ರೋಟಿಯೊಮಿಕ್ಸ್ ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಇಂದು ವಿದ್ಯಾರ್ಥಿಗಳು ಲಭ್ಯವಿರುವ ವಿಶ್ವದರ್ಜೆಯ ಸಂಶೋಧನಾ ಸೌಕರ್ಯ ಬಳಸಿಕೊಂಡು ಹೊಸ-ಹೊಸ ಸಂಶೋಧನೆ ಮಾಡಬೇಕು. ಸಮಯ ನಿರ್ವಹಣೆ ಪಾಲಿಸುವುದರ ಜತೆಗೆ ಪರಿಶ್ರಮ ಹಾಗೂ ನಿರಂತರ ಕಲಿಕೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್ ಮಾತನಾಡಿದರು.
ರಾಸಾಯನಿಕ ವಿಜ್ಞಾನ ವಿಭಾಗದ ಡೀನ್ ಪ್ರೊ.ವೆಂಕಟರಮಣ ದೊಡ್ಡಿ, ವಿಭಾಗದ ಮುಖ್ಯಸ್ಥರೂ ಆದ ನಿರ್ದೇಶಕ ಪ್ರೊ.ಪಲ್ಲೆಪೋಗು ರಾವಯ್ಯ, ಎಚ್ಆರ್ಎಂಎಸ್ ಸಂಯೋಜಕ ಡಾ.ಹರೀಶ್ ಹೊಳ್ಳ, ಪ್ರಾಧ್ಯಾಪಕರಾದ ಪ್ರೊ.ಕೆ.ಹನುಮೇಗೌಡ, ಪ್ರೊ.ಎಸ್.ವಿಶ್ವನಾಥ ಭೋಸಲೆ, ಡಾ.ಎನ್.ಎಸ್.ವೆಂಕಟನಾರಾಯಣ, ಡಾ.ಓರುಗಂಟಿ ಆಂಜನೇಯುಲು, ಡಾ.ಪಿ.ದುರೈಪಾಂಡಿ, ಡಾ.ಅಶೋಕ ಪಬ್ಬತ್ತಿ ಇತರರಿದ್ದರು.
ಹೈದರಾಬಾದ್ನ ಥಮೋರ್ ಫಿಶರ್ ಸೈಂಟಿಫಿಕ್ ವಿಜ್ಞಾನಿ ಬಾಲಭಾವು ವಾರ್ಕಾಡ್, ಬೆಂಗಳೂರಿನ ಜೆಎನ್ಸಿಎಎಸ್ಆರ್ನ ಪ್ರೊ. ಹೇಮಲತಾ ಬಲರಾಮ್, ಪುಣೆಯ ಸಿಎಸ್ಐಆರ್ ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿಯ ಪ್ರೊ.ಮಹೇಶ್ ಜೆ. ಕುಲಕರ್ಣಿ ಪ್ರಾಯೋಗಿಕ ತರಬೇತಿ ನೀಡಿದರು.
"
ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳಿಗಾಗಿ ಎನ್ಇಟಿ ತರಬೇತಿ ಆರಂಭಿಸುವ ಯೋಜನೆಯಿದೆ. ಶ್ರೀದಲ್ಲಿ ಈ ಯೋಜನೆ ಜಾರಿಗೊಳಿಸುವ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ಅನುಕೂಲ ಕಲ್ಪಿಸಲಾಗುವುದು.
— > ಪ್ರೊ.ಬಟ್ಟು ಸತ್ಯನಾರಾಯಣ, ಕುಲಪತಿ, ಸಿಯುಕೆ