ಬಾಗಲಕೋಟೆ ಬಿವಿವಿ ಸಂಘದ ಪಾಲಿಟೆಕ್ನಿಕ್ ಸಭಾಭವನದಲ್ಲಿ ಶುಕ್ರವಾರ ನಡೆದ ಭಾರತೀಯ ಶಿಕ್ಷಣ ಮಂಡಲ ಬಾಗಲಕೋಟೆ ಜಿಲ್ಲಾ ಘಟಕದ ಕಾರ್ಯಕಾರಿ ಘೋಷಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪದಾಽಕಾರಿಗಳು. 
ರಾಜ್ಯ

ಇಂಗ್ಲಿಷ್ ಬದುಕಲು ಅಲ್ಲ, ವ್ಯವಹಾರಕ್ಕೆ ಮಾತ್ರ

ಬಾಗಲಕೋಟೆ: ಶಿಕ್ಷಣ ವ್ಯವಸ್ಥೆಯಲ್ಲಿ ಭಾರತೀಯತೆಯನ್ನು ತರುವ ಆಂದೋಲನದ ಅಗತ್ಯವಿದ್ದು, ರಾಷ್ಟಿçÃಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನವಾಗಬೇಕಿದೆ ಎಂದು ಅಖಿಲ ಭಾರತೀಯ ಸಂಯುಕ್ತ ಮಹಾಮಂತ್ರಿ ಡಾ. ಮೀನಾ ಚಂದಾವರಕರ ಹೇಳಿದರು.
ನಗರದ ಬಿವಿವಿ ಸಂಘದ ಪಾಲಿಟೆಕ್ನಿಕ್ ಸಭಾಭವನದಲ್ಲಿ ಶುಕ್ರವಾರ ನಡೆದ ಭಾರತೀಯ ಶಿಕ್ಷಣ ಮಂಡಲ ಬಾಗಲಕೋಟೆ ಜಿಲ್ಲಾ ಘಟಕದ ಕಾರ್ಯಕಾರಿ ಘೋಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಳಗ್ಗೆ ೧೦ ರಿಂದ ಸಂಜೆ ೫ ರ ನಡುವೆ ನಡೆಯುವ ಪಾಠ ಪ್ರವಚನವೇ ಶಿಕ್ಷಣವಲ್ಲ. ಅದು ಈ ವ್ಯಾಪ್ತಿಯನ್ನು ಮೀರಿದ ಒಂದು ಪ್ರಕ್ರಿಯೆ. ಬದುಕುವುದಕ್ಕೆ ಇಂಗ್ಲಿಷ ಅನಿವಾರ್ಯ ಎಂಬ ತಪ್ಪುಕಲ್ಪನೆಯನ್ನು ಇಡೀ ಸಮಾಜಲ್ಲಿ ಬಿತ್ತಲಾಗಿದೆ. ಈ ಭ್ರಮೆಯಿಂದ ಹೊರಬರುವ ಅಗತ್ಯವಿದೆ. ವ್ಯವಹಾರಕ್ಕೆ ಇಂಗ್ಲಿಷ ಬೇಕು. ಆದರೆ, ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ನಡೆಯಬೇಕು. ಪ್ರಶ್ನಿಸುವ ಗುಣವೇ ಭಾರತದ ಪ್ರಾಚೀನ ಪರಂಪರೆಯ ಅಂತಃಸತ್ವ. ಭಾರತದಷ್ಟು ಉದಾರವಾದಿ ಶಿಕ್ಷಣದ ಪರಿಕಲ್ಪನೆ ಪ್ರಪಂಚದ ಬೇರೆ ಯಾವುದೇ ನಾಗರಿಕತೆಯಲ್ಲಿ ಇಲ್ಲ. ಇದನ್ನು ಪ್ರತಿಪಾದಿಸುವ ರಾಷ್ಟಿçÃಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನ ಆಗಬೇಕು ಎಂದು ಅವರು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ಶಿಕ್ಷಣ ಮಂಡಲ ಬಾಗಲಕೋಟೆ ಜಿಲ್ಲೆಯ ಅಧ್ಯಕ್ಷ ಎಸ್ ಆರ್ ಮನಹಳ್ಳಿ, ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಬೋಧನೆಗಿಂತಲೂ ಕಲಿಕೆಗೆ ಹೆಚ್ಚಿನ ಮಹತ್ವ. ಇದರ ಪ್ರಕಾರ ಯಾವುದನ್ನೂ ಹೊಸತಾಗಿ ಕಲಿಸಲಾಗದು, ಕಲಿಕಾರ್ಥಿ ತನ್ನ ಶ್ರದ್ಧೆಯಿಂದ ಕಲಿತುಕೊಳ್ಳಬಲ್ಲ ಅಷ್ಟೆ. ನಮ್ಮ ಶಿಕ್ಷಣ ಮಾಹಿತಿ, ವ್ಯಾಖ್ಯಾನ, ವಿಮರ್ಶೆಯ ಹಂತವನ್ನು ದಾಟಿ ಸೌಂದರ್ಯಶಾಸ್ತ್ರದ ಹಂತದವರೆಗೆ ವಿಸ್ತರಿಸಿಕೊಂಡಿದೆ. ಆತ್ಮನಿರ್ಭರತೆಯನ್ನು ಸಾಽಸುವುದೇ ಶಿಕ್ಷಣದ ಉದ್ದೇಶ ಎಂದರು.
ಬಸವರಾಜ್ ಯಂಕ0ಚಿ ಮಾತನಾಡಿ, ಗುರುಕುಲ ಪದ್ಧತಿ ನಮ್ಮ ಭಾರತ ದೇಶದ ಅತ್ಯಂತ ಪ್ರಾಚೀನ ಪದ್ದತಿ. ಅದನ್ನು ಇವತ್ತಿಗೂ ಮುಂದುವರಿಸಬೇಕಾದ ಅಗತ್ಯವಿದೆ ಎಂದರು.
ಪಾಲಿಟೆಕ್ನಿಕ ಪ್ರಾಚಾರ್ಯ ಎಂ ಎಸ್ ಮಾಟೂರ, ಗೀತಾ ಕಂಚಿ, ಸುಷ್ಮಾ ಒಡೆಯರ, ಎಲ್.ಜಿ ವೈದ್ಯ, ಅರುಣಾ ರಘುವೀರ್, ಡಾ. ಅರುಣ ಹೂಲಿ, ಡಾ.ಜಗನ್ನಾಥ ಚವ್ಹಾಣ, ಡಾ. ರವಿ ಕೋಟೆನ್ನವರ, ಡಾ. ಜಿ. ಐ. ನಂದಿಕೋಲ್ಮಠ, ಡಾ. ಬಸವರಾಜ ಕುಂಬಾರ ಮತ್ತಿತರರು ಇದ್ದರು.