ಬೆಂಗಳೂರು: ಇಂಜಿನಿಯರ್‌ಗಳ ಹೆಸರು ಪೂರ್ವದಲ್ಲಿ ‘Er'’ ( ಇಂಜಿನಿಯರ್-ಅಭಿಯಂತರರು) ಪದನಾಮ ಬಳಸಲು ಆದೇಶ ಹೊರಡಿಸಿರುವುದಕ್ಕೆ ಸರ್ಕಾರಕ್ಕೆ ‘ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಬೆಂಗಳೂರು ಕೇಂದ್ರ ಅಭಿನಂದನೆ ಸಲ್ಲಿಸಿದೆ.
ವೈದ್ಯರಿಗೆ ‘"Dr' ಮತ್ತು ವಕೀಲರಿಗೆ ‘"adv' ಪದನಾಮ ಇರುವಂತೆ ಇಂಜಿನಿಯರಿಂಗ್‌ಗಳಿಗೆ ಅಧಿಕೃತ ವೃತ್ತಿಪರ ಗುರುತಿಸುವಿಕೆ ನೀಡಿರುವುದು ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸಂದ ಗೌರವವಾಗಿದೆ. ಸರ್ಕಾರದ ಈ ನಿರ್ಧಾರವು ಇಂಜಿನಿಯರ್‌ಗಳ ವೃತ್ತಿಪರ ಗಾಂಭೀರ್ಯ, ಸಾಮಾಜಿಕ ಜವಾಬ್ದಾರಿ ಮತ್ತು ಗೌರವವನ್ನು ಹೆಚ್ಚಿಸಲಿದೆ ಎಂದು ಸಂಘದ ಅಧ್ಯಕ್ಷ ಸವೀನ ತೀರ್ಥಹಳ್ಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.