Engage the community and raise awareness 
ರಾಜ್ಯ

ಸಮುದಾಯ ಸಂಘಟಿಸಿ ಜಾಗೃತಿ ಮೂಡಿಸಿ

ಬಾಗೇಪಲ್ಲಿ: ತುಳಿತಕ್ಕೊಳಗಾಗಿರುವ ಮಾದಿಗ ಸಮುದಾಯವನ್ನು ಸಂಟಿಸಿ ಶಿಕ್ಷಣ ಜಾಗೃತಿ ಮೂಡಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಸ್ವಾಭಿಮಾನದಿಂದ ತರುವ ಉದ್ದೇಶದಿಂದ ಹಳ್ಳಿ ಹಳ್ಳಿಗಳಿಗೂ ಹೋಗಿ ಸಮಾಜ ಜನರಿಗೆ ಮಾರ್ಗದರ್ಶನ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಪತ್ರಕರ್ತರ ಸಂದ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಾಗೇಪಲ್ಲಿ ವಿಧಾನ ಸಭಾ ೇತ್ರದ ಮಾದರ ಮಹಾಸಭಾ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿ, ಬಾಗೇಪಲ್ಲಿ, ಚೇಳೂರು, ಗುಡಿಬಂಡೆ ತಾಲೂಕುಗಳ ವಿಧಾನ ಸಭಾ ೇತ್ರ ಸಮಿತಿಯ ಪದಾಧಿಕಾರಿಗಳು ಎಲ್ಲ ಗ್ರಾಮಗಳಲ್ಲೂ ಪ್ರವಾಸ ಮಾಡಿ ಮಾಹಾಸಭಾದ ಆಶಯಗಳನ್ನು ತಿಳಿಸಿ. ಸದಸ್ಯತ್ವ ಅಭಿಯಾನ ನಡೆಸಿ ಸಂಘಟಿಸಬೇಕಾಗಿದೆ ಎಂದರು.
ಕರ್ನಾಟಕ ಮಾದರ ಮಹಾಸಭಾ ನೂತನ ಅಧ್ಯಕ್ಷ ಅ.ನಾ.ಮೂರ್ತಿ ಮಾತಮಾಡಿ, ರಾಜ್ಯ ವ್ಯಾಪಿ ನಡೆಯುವ ಹೋರಾಟದಲ್ಲಿ ಮುಂಚೂಣಿಯಲ್ಲಿರುವುದು ಮಾದಿಗ ಸಮುದಾಯ. ಆ ನಿಟ್ಟಿನಲ್ಲಿ ಸಮುದಾಯವನ್ನು ಆರ್ಥಿಕ, ಶೈಕ್ಷಣಿಕ ಸಾಮಾಜಿಕವಾಗಿ ಮುಂಚೂಣಿಗೆ ತರಲು ಕೆ.ಎಚ್​. ಮುನಿಯಪ್ಪ, ನಾರಾಯಣಸ್ವಾಮಿ, ಆಂಜನೇಯ, ಗೋವಿಂದ ಕಾರಜೋಳ ಸೇರಿ ಸಮುದಾಯದ ಎಲ್ಲ ಮುಖಂಡರು ಪಾತೀತವಾಗಿ ಒಗ್ಗಟ್ಟಿನಿಂದ ಸೇರಿ ಕರ್ನಾಟಕ ಮಾದರ ಮಹಾಸಭಾವನ್ನು ಕಟ್ಟಿ ಬೆಳೆಸಿದ್ದಾರೆ ಅವರ ಮಾರ್ಗದರ್ಶನದಲ್ಲಿ ಸಮುದಾಯವನ್ನು ಕಟ್ಟುವ ಕೆಲಸ ನಾನು ಮಾಡುತ್ತೇನೆ ಎಂದರು.
ಪದಾಧಿಕಾರಿಗಳು ಪಟ್ಟಿ: ಅಧ್ಯಕ್ಷ ಆ.ನ.ಮೂರ್ತಿ, ಉಪಾಧ್ಯಕ್ಷ ಬಾಬು, ಕಾರ್ಯದರ್ಶಿ ನಾರಾಯಣ ಸ್ವಾಮಿ, ಖಜಾಂಚಿ ಜಯಂತ್​, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಾರಾಯಣಪ್ಪ, ನಾಗರಾಜಪ್ಪ, ಜಿ.ಕೃಷ್ಣಪ್ಪ, ರಾಮಚಂದ್ರ, ನಾಗೇಶ್​, ಬಿ.ನರಸಿಂಹಪ್ಪ, ಈರಪ್ಪ, ರಾಮಾಂಜಿ, ಬಾವಪ್ಪ, ಶಿವಪ್ಪ, ಗಂಗುಲಮ್ಮ ಅವರನ್ನು ನೇಮಕ ಮಾಡಲಾಯಿತು.