ಜಿಪಂ ಮಾಜಿ ಅಧ್ಯಕ್ಷ Fare ತೂಪಲ್ಲಿ ಆರ್.ನಾರಾಯಣಸ್ವಾಮಿ ಅನ್ನಸಂತರ್ಪಣೆಗೆ ಚಾಲನೆ ನೀಡಿದರು.
ರಾಯಲ್ಪಾಡು: ಜೀವನ ಜಂಜಾಟದಲ್ಲಿ ಮಾನಸಿಕ ಒತ್ತಡದಿಂದ Fare ದೂರವಾಗಲು ಆಧ್ಯಾತ್ಮ ಹಾಗೂ ಸಾಂಸತಿಕ ಕಾರ್ಯಕ್ರಮಗಳಲ್ಲಿ ತೊಡಗುವುದು ಮುಖ್ಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ರಾಯಲ್ಪಾಡು ಸಮೀಪದ ಯರ್ರಂಕೊಂಡದಲ್ಲಿ ಗುರುವಾರ ಹೊಸ ವರ್ಷದ ಅಂಗವಾಗಿ ಹಮ್ಮಿಕೊಂಡಿದ್ದ ಗಂಗಮ್ಮದೇವಿ ಜಾತ್ರಾಮಹೋತ್ಸವದಲ್ಲಿ ಮಾತನಾಡಿ, ಧಾರ್ಮಿಕ ಹಾಗೂ ಗುಣಾತ್ಮಕ ಜೀವನ ನಡೆಸುವುದೊಂದೇ ಮನುಷ್ಯರಿಗೆ ಸುಖದಾಯಕವಾದದು. ಚಿಂತೆಯಿಲ್ಲದ ಮತ್ತು ಸುಖ ಸಂತೋಷದ ಜೀವನ ನಡೆಸಬೇಕೆಂಬ ದೃಢಸಂಕಲ್ಪವಿರುವುದಾದರೆ ಧರ್ಮದ ದಾರಿ ತುಳಿಯಲೇಬೇಕು. ಅದನ್ನು ನಿಯಂತ್ರಣ ಮಾಡುವ ಶಕ್ತಿ ಭಗವಂತನಿಗೆ ಮಾತ್ರ ಇದೆ. ಬೇರೆ ಯಾರಿಗೂ ಇದು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರರೂ ನಿತ್ಯಜಿವನದಲ್ಲಿ ದೇವರ ಧ್ಯಾನ, ದಾನ, ಧರ್ಮಗಳ ಮೂಲಕ ನೆಮ್ಮದಿ ಜೀವನ ನಡೆಸಬೇಕು ಎಂದು ಹೇಳಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಗುಂಟಪಲ್ಲಿ ಬಿ.ವಿ.ಶಿವಾರೆಡ್ಡಿ ಮಾತನಾಡಿ, ಮನುಷ್ಯನು ನಿತ್ಯದ ಜಂಜಾಟಗಳಲ್ಲಿ ತೊಡಗಿರುತ್ತಾನೆ. ಅವನಿಗೆ ಮಾನಸಿಕವಾಗಿ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ. ಎಷ್ಟೇ ಮಾನಸಿಕ ಒತ್ತಡ ಇದ್ದರೂ ಸಹ ದೇವಾಲಯಗಳಿಗೆ ಬಂದು ಹೋದರೆ ಮನಸ್ಸು ಸಂತಸಗೊಳ್ಳುತ್ತದೆ ಎಂದರು.
ಯರ್ರಂಗೊಂಡ ಗಂಗಮ್ಮ ಜಾತ್ರೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಗಂಗಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದಲೇ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಜನರು ತಂಡೋಪತಂಡವಾಗಿ ಸಾಲುಗಟ್ಟಿ ದೇವಿ ದರ್ಶನ ಪಡೆದುಕೊಂಡರು.