Engage in social activities 
ರಾಜ್ಯ

ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ

ಆನೇಕಲ್​:

ತಾಲೂಕಿನ ಹಳೇ ಚಂದಾಪುರ ಸಮೀಪದ ಖಾಸಗಿ ಸಭಾಮಂಟಪದಲ್ಲಿ ಜಿಲ್ಲಾ ಪೊಲೀಸ್​ ಹಾಗೂ ಆನೇಕಲ್​ ಉಪ ವಿಭಾಗದ ಸಹಯೋಗದಲ್ಲಿ ಮಾದಕ ವಸ್ತುಮುಕ್ತ ಸಮಾಜಕ್ಕಾಗಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಹೆಚ್ಚುವರಿ ಪೊಲೀಸ್​ ಅಧೀಕ ಲಕ್ಷಿ$್ಮನಾರಾಯಣ್​, ಡಿವೈಎಸ್ಪಿ ಗೋಪಾಲ್​ ನಾಯಕ್​ ಚಾಲನೆ ನೀಡಿ ಮಾತನಾಡಿದರು.
ಮಾದಕ ವಸ್ತುಗಳ ಸೇವನೆಯು ವ್ಯಕ್ತಿಯ ಆರೋಗ್ಯ, ಶಿಣ, ಕುಟುಂಬ ಹಾಗೂ ಸಮಾಜದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಿದ ಅವರು, ಯುವಕರು ದುಶ್ಚಟಗಳಿಂದ ದೂರವಿದ್ದು ಕ್ರೀಡೆ, ಶಿಣ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಾದಕ ವಸ್ತುಗಳ ಮಾರಾಟ ಅಥವಾ ಬಳಕೆಯ ಬಗ್ಗೆ ಮಾಹಿತಿ ದೊರೆತರೆ ತಣವೇ ಪೊಲೀಸ್​ ಇಲಾಖೆಗೆ ತಿಳಿಸಿ, ಡ್ರಗ್ಸ್​ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.
ಡ್ರಗ್ಸ್​ ಸೇವನೆಯಿಂದ ಉಂಟಾಗುವ ಆರೋಗ್ಯ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ಡಾ.ದಿನಕರ್​ ಗೌತಮ್​ ಅವರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಸೂರ್ಯ ಸಿಟಿ ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್​ ಚಂದ್ರಪ್ಪ, ಅತ್ತಿಬೆಲೆ ಠಾಣೆ ಇನ್​ಸ್ಪೆಕ್ಟರ್​ ಮಂಜುನಾಥ್​, ಜಿಗಣಿ ಠಾಣೆ ಇನ್​ಸ್ಪೆಕ್ಟರ್​ ನವೀನ್​ ಕುಮಾರ್​, ಆನೇಕಲ್​ ಠಾಣೆ ಇನ್​ಸ್ಪೆಕ್ಟರ್​ ಪ್ರಕಾಶ್​, ಬನ್ನೇರುಟ್ಟ ಠಾಣೆ ಇನ್​ಸ್ಪೆಕ್ಟರ್​ ಕೆಂಪೇಗೌಡ, ಸರ್ಜಾಪುರ ಠಾಣೆ ಇನ್​ಸ್ಪೆಕ್ಟರ್​ ಮಹೇಂದ್ರ ಕುಮಾರ್​, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.