ಕಾರೆಹಳ್ಳಿಯ Felicitation ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸಿಆರ್​ಪಿ ಪಂಕಜಾ, ವಿಎಸ್ಸೆಸ್ಸೆನ್​ ನಿರ್ದೇಶಕ ಕಾರೆಹಳ್ಳಿ ನರಸಿಂಹಯ್ಯ, ದ್ವಾರನಕುಂಟೆ ಗ್ರಾಪಂ ನಿಕಟ ಪೂರ್ವ ಅಧ್ಯ ಗೌರಮ್ಮ ನಾಗಣ್ಣ, ಪ್ರಭಾರ ಮುಖ್ಯ ಶಿಕ ಚಿಕ್ಕ ನಾಗಪ್ಪ, ಎಸ್​ಡಿಎಂಸಿ ಅಧ್ಯ ರಂಗನಾಥ್​ ಇತರರಿದ್ದರು. 
ರಾಜ್ಯ

ಕಾರೆಹಳ್ಳಿ ಶಾಲೆಯಲ್ಲಿ ಬಯಲು ಶೌಚಕ್ಕೆ ಮುಕ್ತಿ Felicitation

ಬರಗೂರು: ಗ್ರಾಮಸ್ಥರು ದಾನ ನೀಡಿದ ಜಾಗದಲ್ಲಿ ಸರ್ಕಾರದ Felicitation ಅನುದಾನದಿಂದ ಶೌಚಗೃಹ ನಿರ್ಮಿಸಲಾಗಿದೆ ಎಂದು ಸಿಆರ್​ಪಿ ಪಂಕಜಾ ತಿಳಿಸಿದರು.
ಶಿರಾ ತಾಲೂಕು ಕಾರೆಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನೂತನ ಶೌಚಗೃಹ ಉದ್ಘಾಟನೆ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾರೆಹಳ್ಳಿ ಸರ್ಕಾರಿ ಶಾಲೆಯಲ್ಲಿ ಜಾಗದ ಕೊರತೆಯಿಂದ ಶೌಚಗೃಹದ ವ್ಯವಸ್ಥೆ ಇರಲಿಲ್ಲ. ಇದೀಗ ಬೆಂಗಳೂರಿನಲ್ಲಿರುವ ಕೃಷ್ಣಪ್ಪ ಅವರು ಭೂಮಿ ದಾನ ನೀಡಿದ್ದು, ಶೌಚಗೃಹ ನಿರ್ಮಿಸಲಾಗಿದೆ. ಗ್ರಾಪಂನಿಂದ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.
ವಿಎಸ್ಸೆಸ್ಸೆನ್​ ನಿರ್ದೇಶಕ ಕಾರೆಹಳ್ಳಿ ನರಸಿಂಹಯ್ಯ ಮಾತನಾಡಿ, ಶಾಲೆಗೆ ಶೌಚಗೃಹ ಇಲ್ಲ ಎಂಬ ವಿಚಾರ ರಾಜ್ಯಮಟ್ಟವರಿಗೂ ಸದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಹಾಗೂ ಶಿಣ ಇಲಾಖೆ ಜಿಲ್ಲಾ ಮತ್ತು ತಾಲೂಕು, ಮಟ್ಟದ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶಾಲೆಯ ಪಕ್ಕದ ಜಮೀನಿನ ಮಾಲೀಕ ಕೃಷ್ಣಪ್ಪ ಅವರು ಜಾಗ ನೀಡಿದ್ದು, ಗ್ರಾಮದ ಮುಖಂಡ ಜಯಪ್ರಕಾಶ್​ ಅವರು ಸ್ವಂತ ಹಣದಿಂದಲೇ ಶೌಚಗೃಹ ನಿರ್ಮಿಸಿ ಕೊಟ್ಟಿದ್ದಾರೆ ಎಂದರು.
ವಿಎಸ್ಸೆಸ್ಸೆನ್​ ಮಾಜಿ ಅಧ್ಯ ನೆಜಂತಿ ರಂಗಸ್ವಾಮಿ ಗೌಡ, ಮೀನಾ ರಾಮ ಕೃಷ್ಣಯ್ಯ, ದ್ವೀತಿಯ ದರ್ಜೆ ಸಹಾಯಕ ಪುರುಷೋತ್ತಮ್​, ಮಾರನಾಯಕ, ಕೆ.ಪಿ.ಗಿರೀಶ್​, ನರಸಿಂಹಯ್ಯ, ಮೂಡ್ಲಪ್ಪ, ಮಾರಣ್ಣ, ಬಸವರಾಜು, ಕೃಷ್ಣಮೂರ್ತಿ, ರಮೇಶ್​ ಗೌಡರು, ಅಂಗನವಾಡಿ ಕಾರ್ಯಕರ್ತೆ ಲತಾ, ಆದಿತ್ಯ ಶಿಕಿ ಭಾರತಿ ಇತರರಿದ್ದರು.