ಅಥಣಿ ಕೆಎಲ್‌ಇ ಸಂಸ್ಥೆ ಖೋತ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಾಳಾಸಾಹೇಬ ಲೋಕಾಪುರೆ, ರಮೇಶ ಬುಲಬುಲೆ, ಆನಂದ ಟೊನಪಿ, ಅಶೋಕ ಹೊಸೂರ, ಭಾರತಿ ಕೋರೆ ಇತರರಿದ್ದರು. 
ರಾಜ್ಯ

ವಿದ್ಯಾರ್ಥಿಗಳ ಪ್ರತಿಭೆ ಪ್ರೋತ್ಸಾಹಿಸಿ

ವಿಜಯವಾಣಿ ಸುದ್ದಿಜಾಲ ಅಥಣಿ
ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ನಿರಂತರ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಸಾಧನೆ ಸಾಧ್ಯ ಎಂದು ಹಿರಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರೆ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಖೋತ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಲಯನ್ಸ್ ಕ್ಲಬ್ ಸಂಘಟಿತವಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಅವರಿಗೆ ಪ್ರೋತ್ಸಾಹ, ಸ್ಫೂರ್ತಿ ತುಂಬುವ ಕಾರ್ಯ ಮಾಡುವುದು ಉತ್ತಮ ಸಂಗತಿ ಎಂದರು.
ಲಯನ್ಸ್ ಕ್ಲಬ್ ಅಥಣಿ ಘಟಕದ ಅಧ್ಯಕ್ಷ ರಮೇಶ ಬುಲಬುಲೆ ಮಾತನಾಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಕಟಗೇರಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಪ್ರಾರ್ಥನಾ ಬಿರಾದಾರ, ಐಗಳಿ ಆದರ್ಶ ಶಾಲೆಯ ದಶರಥ ಭೋಸಲೆಯನ್ನು ಸನ್ಮಾನಿಸಲಾಯಿತು.
ಕ್ಲಬ್ ಉಪಾಧ್ಯಕ್ಷ ಆನಂದ ಟೊನಪಿ, ಕಾರ್ಯದರ್ಶಿ ವಿನೋದ ಕನಮಡಿ, ಖಜಾಂಚಿ ಅಶೋಕ ಹೊಸೂರ, ಸದಸ್ಯರಾದ ಕಿರಣ ಶಿರಗುಪ್ಪಿ, ಬಾಹುಸಾಬ ನಾಯಿಕ, ಅಮಿತ ಮಹಾಜನ, ಗುರುಪುತ್ರ ಪಾಟೀಲ, ಚಿದಾನಂದ ನರಗಟ್ಟಿ, ವೈಭವ ಪೋತದಾರ, ರವಿ ಗಾವಡೆ, ಈರಾವತಿ ಕೌಲಾಪುರೆ, ಭಾರತಿ ಸಂಕ್ರಟ್ಟಿ, ಮೊಹನ ಕಾಂಬಳೆ, ಭಾರತಿ ಕೋರೆ, ಮಂಜುನಾಥ ಬಡಿಗೇರ ಇತರರಿದ್ದರು.