ಸೂಲಿಬೆಲೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜೇನುಗೂಡು ಟ್ರಸ್ಟ್ನಿಂದ ಹಮ್ಮಿಕೊಂಡಿದ್ದ ಸಂಗೀತೋತ್ಸವದಲ್ಲಿ ವಿಜೇತರಿಗೆ ಟ್ರಸ್ಟ್ ಉಪಾಧ್ಯಕ್ಷ ಚೌಡೇಗೌಡ ಪ್ರಮಾಣ ಪತ್ರ ವಿತರಿಸಿದರು. ಪ್ರಾಂಶುಪಾಲ ವೆಂಕಟೇಶ್, ತರಬಹಳ್ಳಿ ಹರೀಶ್, ಸೈಯದ್ ಮೆಹಬೂಬ್ ಇತರರು ಇದ್ದರು.
ಸೂಲಿಬೆಲೆ : ಗ್ರಾಮೀಣ ಭಾಗದ ಅನೇಕ ಕಲೆಗಳಿಗೆ ಸೂಕ್ತ ವೇದಿಕೆ ಕಲ್ಪಿಸದಿದ್ದರೆ ಅವು ಕಣ್ಮರೆಯಾಗುತ್ತವೆ. ಹಾಗಾಗಿ ಸಂಘ&ಸಂಸ್ಥೆಗಳ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿ ವೇದಿಕೆ ನೀಡಿದರೆ ನಮ್ಮ ಸಾಂಪ್ರದಾಯಿಕ ಕಲೆಗಳನ್ನು ಉಳಿಸಬಹುದು ಎಂದು ರಂಗಕಲಾವಿದ ಡಿ.ಲಕ್ಷಿ$್ಮನಾರಾಯಣ್ ಹೇಳಿದರು.
ಸೂಲಿಬೆಲೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಬಚ್ಚೇಗೌಡ ಸಭಾ ಭವನದಲ್ಲಿ ಜೇನುಗೂಡು ಗ್ರಾಮೀಣಾಭಿವೃದ್ಧಿ ಮತ್ತು ಸಾಂಸತಿಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಗೀತೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಭಾಗದ ಕಲೆಗಳನ್ನು ಉಳಿಸಿ ಬೆಳೆಸುವ ಹಾಗೂ ಕಲೆಗಾರರನ್ನು ಪ್ರೋತ್ಸಾಯಿಸುವ ನಿಟ್ಟಿನಲ್ಲಿ ಟ್ರಸ್ಟ್ ಹೆಚ್ಚು ಕ್ರಿಯಾಶೀಲವಾಗಿದೆ ಎಂದರು.
ಮುರಾರ್ಜಿ ದೇಸಾಯಿ ವಸತಿ ಶಾಲೆಪ್ರಾಂಶುಪಾಲ ವೆಂಕಟೇಶ್ ಮಾತನಾಡಿ, ದೃಶ್ಯ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಕೃಪೆಯಿಂದ ಯುವ ಸಮುದಾಯ ಕಲೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಗ್ರಾಮೀಣ ಭಾಗದ ಕಲೆಗಳನ್ನು ಯುವ ಸಮುದಾಯ ಉಳಿಸುವ ಕೆಲಸ ಮಾಡಬೇಕು ಎಂದರು.
ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಚೌಡೇಗೌಡ ಮಾತನಾಡಿ ನಮ್ಮ ಟ್ರಸ್ಟ್ವತಿಯಿಂದ ಸಾಂಸತಿಕ ಕಾರ್ಯಕ್ರಮಗಳಲ್ಲದೇ ಆರೋಗ್ಯ, ನೇತ್ರ ತಪಾಸಣೆ ಶಿಬಿರಗಳು, ರಕ್ತದಾನ ಶಿಬಿರಗಳು ಹಾಗೂ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲಾಗಿದೆ ಎಂದರು. ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಎಂ.ಪ್ರಶಾಂತ್, ಬೆಟ್ಟಹಳ್ಳಿ ಗೋಪಿನಾಥ್ ಮಾತನಾಡಿದರು.
ನಿಶಾ ಮತ್ತು ತಂಡದಿಂದ ಭರತನಾಟ್ಯ, ಸಮರ್ಥ ಮತ್ತು ತಂಡದಿಂದ ಜಾನಪದ ನೃತ್ಯ, ಅರುಣ್ ಕುಮಾರ್ ತಂಡದಿಂದ ಜಾನಪದ ಗೀತೆ, ಮುನಿಕೃಷ್ಣ ತಂಡದಿಂದ ಸುಗಮಸಂಗೀತ, ತನುಶ್ರೀ ತಂಡದಿಂದ ಭರತನಾಟ್ಯ, ಚಿನ್ಮಿತ ತಂಡದಿಂದ ಸಮೂಹ ನೃತ್ಯ, ಸಂತೋಷ ತಂಡದಿಂದ ಜಾನಪದ ಗೀತೆ, ಸ್ಟುಡಿಯೋ ಆನಂದ್ ತಂಡದವರು ರಂಗಗೀತೆಗಳನ್ನು ಪ್ರಸ್ತುತ ಪಡಿಸಿದರು. ಕಲಾವಿದರಿಗೆ ಪ್ರಮಾಣ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜೇನುಗೂಡು ಟ್ರಸ್ಟ್ನ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್, ನಿರ್ದೇಶಕ ಸೈಯದ್ ಮೆಹಬೂಬ್, ತರಬಹಳ್ಳಿ ಹರೀಶ್, ಅತ್ತಿಬೆಲೆ ಮಂಜುನಾಥ್, ನಯಾಜ್ ಖಾನ್, ಜಿಯಾವುಲ್ಲಾ, ಕಲಾವಿದೆ ತನುಶ್ರೀ, ವಸತಿ ಶಾಲೆಶಿಕ್ಷಕರಾದ ರುತ್ ಜೆಸೆಂತಾ, ರಕ್ಷಿತಾ, ಗಂಗಾಧರ್ ಇತರರು ಇದ್ದರು.