ಭಾಲ್ಕಿಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆಯನ್ನು ಇಒ ಸೂರ್ಯಕಾಂತ ಬಿರಾದಾರ್ ಉದ್ಘಾಟಿಸಿದರು. ಚಂದ್ರಶೇಖರ ಬನ್ನಾಳೆ, ರಾಜಪ್ಪ ಪಾಟೀಲ್, ಪ್ರಭು ಡಿಗ್ಗೆ, ಮಾರುತಿ ಜಬನೂರ, ಚಂದ್ರಕಾಂತ ತಳವಾಡೆ ಇತರರಿದ್ದರು.
- ತಾಪಂ ಇಒ ಸೂರ್ಯಕಾಂತ ಬಿರಾದಾರ್ ಕರೆ
- ಭಾಲ್ಕಿಯಲ್ಲಿ ಸಂಘದ ವಾರ್ಷಿಕ ಮಹಾಸಭೆ
ಭಾಲ್ಕಿ: ನೌಕರರು ಸಂಘಟಿತರಾಗಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಆಡಳಿತ ವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಲು ಸಾಧ್ಯವಾಗುತ್ತದೆ. ನೌಕರರ ಹಕ್ಕುಗಳು, ಸೇವಾ ಭದ್ರತೆ ಹಾಗೂ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರಿ ನೌಕರರ ಸಂಘವು ಸದಾ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸೂರ್ಯಕಾಂತ ಬಿರಾದಾರ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದಿಂದ ಶನಿವಾರ ಆಯೋಜಿಸಿದ್ದ 2025-&26ನೇ ಸಾಲಿನ ಸರ್ಕಾರಿ ನೌಕರರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ನೌಕರರು ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ, ಪಾರದರ್ಶಕ ಮತ್ತು ಉತ್ತಮ ಆಡಳಿತ ಸೇವೆ ಒದಗಿಸಬೇಕು ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಬನ್ನಾಳೆ ಮಾತನಾಡಿ, ಸಂಘದ ಯಶಸ್ಸಿನ ಹಿಂದೆ ಸದಸ್ಯರ ಒಗ್ಗಟ್ಟು ಮತ್ತು ಸಕ್ರಿಯ ಸಹಭಾಗಿತ್ವವೇ ಪ್ರಮುಖ ಶಕ್ತಿಯಾಗಿದೆ. ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆ, ಸೇವಾ ಹಿತಾಸಕ್ತಿಗಳ ರಕ್ಷಣೆ ಹಾಗೂ ಸಂಘದ ಬಲವರ್ಧನೆಗಾಗಿ ಸಂಘವು ನಿರಂತರವಾಗಿ ಶ್ರಮಿಸುತ್ತಿದೆ ಮುಂದಿನ ದಿನಗಳಲ್ಲಿ ಶೀಘ್ರವಾಗಿ ಎನ್ಪಿಎಸ್ ರದ್ದುಪಡಿಸಿ ಓಪಿಎಸ್ ಜಾರಿಗೆ ತರಲು ರಾಜ್ಯ ಸರಕಾರಕ್ಕೆ ಮತ್ತು ರಾಜ್ಯ ಸಂಘಕ್ಕೆ ಹಕ್ಕೋತ್ತಾಯ ಮಾಡುವಾದಗಿ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ದಾನಾ ಮಾತನಾಡಿದರು. ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಪ್ಪ ಪಾಟೀಲ್ ಸಂಘದ 2025&26ನೇ ಸಾಲಿನ ವಾರ್ಷಿಕ ವರದಿ ಹಾಗೂ ಆದಾಯ&ವೆಚ್ಚದ ಲೆಕ್ಕಪತ್ರವನ್ನು ಮಂಡಿಸಿದರು. ಸದಸ್ಯರು ವರದಿ ಹಾಗೂ ಲೆಕ್ಕಪತ್ರವನ್ನು ಸರ್ವಾನುಮತದಿಂದ ಅನುಮೋದಿಸಿದರು.
ಪ್ರಮುಖರಾದ ಶೇಮಿ ಪಟೇಲ್, ಸುನಿಲ ಬಿರಾದಾರ, ಬಸವರಾಜ ಬಂಗಾರೆ, ಶರಣಬಸವರಾಜ ಶೆಟ್ಟರ, ನಂದುಕುಮಾರ ಜಾಧವ, ಸುಭಾಷ ಸತಾರೆ, ಲಕ್ಷಿ$್ಮಕಾಂತ ಪವಾರೆ, ಬಲಬೀರಸಿಂಗ್, ವಿಜಯಕುಮಾರ ಪಾಟೀಲ, ಮಹೇಬೂಬ್ ಖಾನ, ಮಾರುತಿ ಜಬನೂರ, ಧನರಾಜ ಮೇತ್ರೆ, ನೀಲಕಂಠ ಕಾಂಬಳೆ, ಧನರಾಜ ಬಂಬುಳಗೆ, ಸಂಗಮೇಶ ಖೇಳಗೆ, ವೀರಭದ್ರಪ್ಪ, ದಾವುದ ಜಮಾದಾರ, ನೀಲಕಂಠ ಕುರುಣೆ, ದೇವಿಂದ್ರಕುಮಾರ, ಸಚಿನ ಸ್ವಾಮಿ, ಸೂರ್ಯಕಾಂತ ಸುಂಟೆ, ಸಂತೋಷ ವಾಡೆ, ಅಮೋಲ ಮೇತ್ರೆ, ಭೀಮಣ್ಣ ಕೊಂಕಣಿ, ಕುಪೇಂದ್ರ ಜಗಶೆಟ್ಟೆ ಇತರರು ಭಾಗವಹಿಸಿದ್ದರು. ರವೀಚಂದ್ರ ಮೈನಾಳೆ ಸ್ವಾಗತಿಸಿದರು. ಚಂದ್ರಕಾಂತ ತಳವಾಡೆ ನಿರೂಪಣೆ ಮಾಡಿದರು. ಪ್ರಭು ಡಿಗ್ಗೆ ವಂದಿಸಿದರು.