ವಿಟಿಯು ಕಲಬುರಗಿ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಯುಕ್ತಿ&2026 ಸಾಂಸತಿಕ ಉತ್ಸವದಲ್ಲಿ ಗಣ್ಯರು ದೀಪ ಬೆಳಗಿಸಿದರು. ಡಾ.ವಿದ್ಯಾಶಂಕರ ಎಸ್., ಡಾ.ಸರ್ದಾರ್ ಬಲಬೀರಸಿಂಗ್, ಡಾ.ಶುಭಾಂಗಿ ಡಿಸಿ, ಅರುಣಕುಮಾರ ಪಾಟೀಲ್, ಡಾ.ಬಸವರಾಜ ಗಾದಗೆ, ಡಾ.ಸಂಗಪ್ಪ ಎಸ್.ಬಿ ಇತರರಿದ್ದರು.
- ವಿಟಿಯು ಕುಲಪತಿ ಡಾ.ವಿದ್ಯಾಶಂಕರ ಹೇಳಿಕೆ
- ಕಲಬುರಗಿ ಪ್ರಾದೇಶಿಕ ಕೇಂದ್ರದಲ್ಲಿ ಸಾಂಸತಿಕ ಉತ್ಸವ
ಕಲಬುರಗಿ: ಉತ್ತಮ, ಗುಣಮಟ್ಟದ ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡುವುದರ ಜತೆ ಕ್ಯಾಂಪಸ್ ಸಂದರ್ಶಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ವಿದ್ಯಾಶಂಕರ ಎಸ್. ಹೇಳಿದರು.
ವಿವಿ ಕಲಬುರಗಿ ಪ್ರಾದೇಶಿಕ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಯುಕ್ತಿ&2026 (ತಾಂತ್ರಿಕ, ನಿರ್ವಹಣೆ&ಸಾಂಸತಿಕ ಉತ್ಸವ)ದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಉತ್ತಮ ಮತ್ತು ಗುಣಮಟ್ಟದ ತಾಂತ್ರಿಕ ಶಿಕ್ಷಣ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ವಿವಿಗೆ ಸಂದ ಪ್ರಶಸ್ತಿಗಳೇ ಸಾಕ್ಷಿ. ಪೋರ್ಟಲ್ನಲ್ಲಿ ವಿದ್ಯಾರ್ಥಿಗಳನ್ನು ನೋಂದಾಯಿಸಿ ಆನ್ಲೈನ್ ಮೂಲಕ ಇಂರ್ಟನ್ಶಿಪ್ ಪೂರ್ಣಗೊಳಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಯುಕ್ತಿಯಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹುರಿದುಂಬಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳಿಗೆ 10ನೇ ತರಗತಿ ನಂತರದ ವಿದ್ಯಾಭ್ಯಾಸದಲ್ಲಿ ಪಠ್ಯಕ್ರಮದ ಜತೆ ಕೌಶಲಸಹಿತ ಜ್ಞಾನದ ಅವಶ್ಯಕತೆ ಇದೆ ಎಂದರು.
ಕೇಂದ್ರದ ಪ್ರಾದೇಶಿಕ ನಿರ್ದೇಶಕಿ ಡಾ.ಶುಭಾಂಗಿ ಡಿಸಿ ಸ್ವಾಗತಿಸಿ, ನಾವೀನ್ಯ ಮತ್ತು ತಾಂತ್ರಿಕ ಶೇಷ್ಠತೆ ಪ್ರೋತ್ಸಾಹಿಸುವಂಥ ಇಂತಹ ಕಾರ್ಯಕ್ರಮಗಳ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಯುಕ್ತಿ ಮುಖ್ಯ ಸಂಯೋಜಕ ಡಾ.ಬಸವರಾಜ ಗಾದಗೆ ಪ್ರಾಸ್ತಾವಿಕ ಮಾತನಾಡಿ, ಕುಲಪತಿಗಳು ಈ ವಿವಿ ಕಾರ್ಯಭಾರ ವಹಿಸಿಕೊಂಡ ನಂತರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂಥ ಕಾರ್ಯಕ್ರಮಗಳಲ್ಲಿ ಯುಕ್ತಿ ಮಹತ್ವದ್ದು. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆ ದೊರೆತಿದೆ ಎಂದು ತಿಳಿಸಿದರು.
ವಿವಿ ಆಡಳಿತ ಮಂಡಳಿ ಸದಸ್ಯ ಡಾ.ಸಂಗಪ್ಪ ಎಸ್.ಬಿ. ಮಾತನಾಡಿದರು. ಬೀದರ್ ಗುರುದ್ವಾರ ಗುರುನಾನಕ್ ಝೀರಾ ಸಾಹೇಬ್ ಸಂಸ್ಥೆ ಅಧ್ಯಕ್ಷ ಡಾ.ಸರ್ದಾರ್ ಬಲಬೀರ್ಸಿಂಗ್, ಮೈಸೂರಿನ ಡಾ.ಎ.ಪಿ. ಪಾರ್ಥ, ವಿವಿ ಕಾರ್ಯಕಾರಿ ಮಂಡಳಿ ಸದಸ್ಯರಾದ ಪಿ.ಪವಿತಸಿಂಗ್, ಮಹಾಂತಪ್ಪ ಎಸ್.ಕೌಲಗಿ, ಡಾ.ಅಂಬ್ರೇಶ್ ಭದ್ರಶೆಟ್ಟಿ, ಡಾ.ಮನೀತ್ ಪಿ.ಡಿ, ಕುಲಸಚಿವರಾದ ಡಾ.ಪ್ರಸಾದ ಬಿ.ರಾಂಪುರೆ, ಡಾ.ಉಜ್ವಾಲ್ ಯು.ಜೆ., ಹಣಕಾಸು ಅಧಿಕಾರಿ ಡಾ.ಪ್ರಶಾಂತ ನಾಯಕ್ ಇತರರಿದ್ದರು.
ಡೊಳ್ಳು ಕುಣಿತ ಮತ್ತು ಫೋಕ್ ನೃತ್ಯದ ಮೂಲಕ ಅತಿಥಿಗಳನ್ನು ಸ್ವಾಗತಿಸಲಾಯಿತು. ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರನ್ನು ಸತ್ಕರಿಸಲಾಯಿತು.
ವಿಶ್ವವಿದ್ಯಾಲಯದಲ್ಲಿ ಸೆಂಟ್ರಲ್ ಪ್ಲೇಸ್ಮೆಂಟ್ ಪೋರ್ಟಲ್ ಆರಂಭಿಸಿ ಇನ್ಫೋಸಿಸ್ನಲ್ಲಿ ಸುಮಾರು 392 ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಲಾಗಿದೆ.
> ಡಾ.ವಿದ್ಯಾಶಂಕರ ಎಸ್.ಕುಲಪತಿ,