ಯಾದಗಿರಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಜಟ್ಟಿ ಕುಸುಮಕುಮಾರ ಮಾತನಾಡಿದರು. ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ, ರಾಜಾ ವೇಣುಗೋಪಾಲ ನಾಯಕ, ಮಾಜಿ ಸಚಿವ ಬಾಬುರಾವ ಚಿಂಚನಸೂರ, ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ, ಶ್ರೀದೇವಿ ನಾಯಕ, ಶಾಮಸನ್ ಮಾಳಿಕೇರಿ ಇತರರಿದ್ದರು. 
ರಾಜ್ಯ

ತಳಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಎಐಸಿಸಿ ಕಾರ್ಯದರ್ಶಿ ಜಟ್ಟಿ ಕುಸುಮಕುಮಾರ ಹೇಳಿಕೆ
  • ಹೊಸ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಶುರು
ಯಾದಗಿರಿ; ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಽ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನ ಮತ್ತು ಸೂಚನೆಯಂತೆ ಸಂಘಟನ್ ಸೃಜನ್ ಅಭಿಯಾನದಡಿ ದೇಶದ ಎಲ್ಲಡೆ ಪಕ್ಷದ ಜಿಲ್ಲಾ, ಬ್ಲಾಕ್ ಮಟ್ಟದ ಅಧ್ಯಕ್ಷರ ನೇಮಕ ಮಾಡಲಾಗುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಜಟ್ಟಿ ಕುಸುಮಕುಮಾರ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವನ್ನು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿAದ ಕಟ್ಟಬೇಕಿದೆ. ಕಾರ್ಯಕರ್ತರ ಪರವಾಗಿ ಧ್ವನಿ ಹಾಗೂ ಪಕ್ಷದ ಸಂಘಟನೆಗೆ ಮೀಸಲಿರುವ ವ್ಯಕ್ತಿಯನ್ನು ನೇಮಕ ಮಾಡಲಾಗುವುದು ಎಂದರು.
ಆ.೧೮ರವರೆಗೆ ನೂತನ ಅಧ್ಯಕ್ಷರ ನೇಮಕ ಕುರಿತ ವರದಿಯನ್ನು ಪಕ್ಷದ ಕೇಂದ್ರ ಕಚೇರಿಗೆ ತಲುಪಿಸಲಾಗುವುದು, ಆ.೨೧ರ ವರೆಗೆ ನೇಮಕ ಪ್ರಕಟಗೊಳ್ಳಲಿದೆ. ಗಿರಿ ಜಿಲ್ಲೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಇಲ್ಲಿ ಮೂರು ಜನ ಶಾಸಕರಿದ್ದಾರೆ. ಮುಂದೆ ನಾಲ್ಕು ಕ್ಷೇತ್ರಗಳು ಕೈವಶವಾಗಬೇಕು. ಆ ನಿಟ್ಟಿನಲ್ಲಿ ನೂತನ ಪದಾಽಕಾರಿಗಳು, ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು.
ಬಿಜೆಪಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರೋಽಯಾಗಿದೆ ಎಂದ ಅವರು, ಇಂದಿನಿAದ ಐದು ದಿನಗಳವರೆಗೆ ಜಿಲ್ಲೆಯ ಎಂಟು ಬ್ಲಾಕ್‌ಗಳಲ್ಲಿ ಸರಣಿ ಸಭೆ ನಡೆಯಲಿವೆ. ಆಕಾಂಕ್ಷಿಗಳು ಅರ್ಜಿ ತುಂಬಿ ಕೊಡಬೇಕು. ನಂತರ ಪ್ರಮುಖರ ಮತ್ತು ಖಾಸಗಿ ಎನ್‌ಜಿಒಗಳ ಅಭಿಪ್ರಾಯ ಸಂಗ್ರಹಿಸಿ ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿ¯್ಲÁಧ್ಯಕ್ಷ ಬಸರೆಡ್ಡಿ ಅನಪುರ, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ , ಮಾಜಿ ಸಚಿವ ಬಾಬುರಾವ್ ಚಿಂಚನಸೂರು, ಶಾಸಕರಾದ ಚನ್ನಾರಡ್ಡಿ ಪಾಟೀಲï ತುನ್ನೂರ, ರಾಜಾ ವೇಣುಗೋಪಾಲ ನಾಯಕ, ಮಾಜಿ ಎಂಎಲ್‌ಸಿ ಪುಂಡಲಿಕರಾವ್, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಗೋಪಾಲರೆಡ್ಡಿ, ಮಹಿಳಾ ಕಾರ್ಯದರ್ಶಿ ಶ್ರೀದೇವಿ ನಾಯಕ, ಮುಖಂಡ ಡಾ.ಶರಣಬಸಪ್ಪ ಕಾಮರಡ್ಡಿ, ಜಿ¯್ಲÁ ಪ್ರಧಾನ ಕಾರ್ಯದರ್ಶಿ ಬಸ್ಸುಗೌಡ ಬಿಳ್ಹಾರ, ಜಿಲ್ಲಾ ವಕ್ತಾರ ಶಾಮಸನ್ ಮಾಳಿಕೇರಿ ಇತರರಿದ್ದರು.