ಮಲಾಮರಡಿ&ಸುಲಧಾಳ, ಗುಜನಾಳ ರಸ್ತೆಗೆ ಸಿಸಿ ಮತ್ತು ಡಾಂಬರೀಕರಣ ರಸ್ತೆ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಭೂಮಿಪೂಜೆ ನೆರವೇರಿಸಿಚದರು. ಭೀಮಗೌಡ ಪೊಲಿಸ್ಗೌಡರ, ಅಡಿವಪ್ಪ ನಾವಲಗಟ್ಟಿ ಇತರಿದ್ದರು.
ಅಂಕಲಗಿ: ಸಮೀಪದ ಮಲಾಮರಡಿ ಗ್ರಾಮದಲ್ಲಿ 1.75 ಕೋಟಿ ರೂ.ವೆಚ್ಚದಲ್ಲಿ ಮಲಾಮರಡಿ&ಸುಲಧಾಳ, ಗುಜನಾಳ ರಸ್ತೆ ಮತ್ತು ಡಾಂಬರೀಕರಣ ಕಾಮಗಾರಿಗೆ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಸೋಮವಾರ ಚಾಲನೆ ನೀಡಿದರು. ಬಳಿಕ ಮಾತನಾಡಿ, ಶಾಸಕ ರಮೇಶ ಜಾರಕಿಹೊಳಿ ಅವರ ವಿಶೇಷ ಮುತುವರ್ಜಿಯಿಂದ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದ್ದು, ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕ್ರಮವಹಿಸಲಾಗುವುದು ಎಂದರು. ಮುಖಂಡರಾದ ಭೀಮಗೌಡ ಪೊಲೀಸ್ಗೌಡರ, ಅಡಿವಪ್ಪ ನಾವಲಗಟ್ಟಿ, ರಾಜೇಂದ್ರ ಗೌಡಪ್ಪಗೋಳ, ಅಡಿವೆಪ್ಪ ಮಳಗಲಿ, ಬಸನಗೌಡ ಗುತ್ತಿ, ಮಾರುತಿ ಗೋಡಲಕುಂದರಗಿ, ಬಸಲಿಂಗಪ್ಪ ತೇಲಿ, ವಿರೂಪಾಕ್ಷ ಅಂಗಡಿ, ಗಂಗಪ್ಪ ಅಂಗಡಿ, ಈರಪ್ಪ ಮಾಳಗಿ, ಅಶೋಕ ಮಾಳಗಿ, ರಾಮಣ್ಣ ಸುಂಬಳಿ, ಬಸವರಾಜ ಪಟ್ಟಣಶೆಟ್ಟಿ, ಮುನ್ನಾ ದೇಸಾಯಿ ಇತರರಿದ್ದರು. ಪಿಡಿಒ ಸುನೀಲ ನಾಯ್ಕ್, ಇಂಜಿನಿಯರ್ ಶಿವಲಿಂಗ ಇತರರಿದ್ದರು.