ಕುಂದಾಣ :
ಸ್ವಾತಂತ್ರ$್ಯ ದಿನ ಕೇವಲ ಆಚರಣೆಯಲ್ಲ, ಬದಲಾಗಿ ನಮ್ಮ ದೇಶವನ್ನು ದಾಸ್ಯದ ಸಂಕೋಲೆಯಿಂದ ಮುಕ್ತಗೊಳಿಸಲು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾನ್ ನಾಯಕರನ್ನು ಮತ್ತು ಭಾರತಕ್ಕೆ ಭದ್ರ ಬುನಾದಿ ಹಾಕಿದವರನ್ನು ಸ್ಮರಿಸುವ ಪವಿತ್ರ ದಿನ ಎಂದು ಪಿಡಿಒ ಪ್ರಕಾಶ್ ಅಭಿಪ್ರಾಯಪಟ್ಟರು.
ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಗ್ಯಾರಂಟಿ ಯೋಜನಾ ಪ್ರಾಧಿಕಾರ ಸದಸ್ಯ ಮುನೇಗೌಡ ಮಾತನಾಡಿ, ಭಾರತದ ಸ್ವಾತಂತ್ರ$್ಯವು ಯಾವುದೇ ಒಬ್ಬ ವ್ಯಕ್ತಿ ಅಥವಾ ಒಂದು ಸಿದ್ಧಾಂತದಿಂದ ಬಂದಿದ್ದಲ್ಲ. ಇದು ವಿವಿಧ ಮಾರ್ಗಗಳಲ್ಲಿ ಹೋರಾಡಿದ ಲಾಂತರ ಜನರ ತ್ಯಾಗದ ಫಲ. ಸ್ವಾತಂತ್ರ$್ಯ ಹೋರಾಟಗಾರರ ತ್ಯಾಗ ಬಲಿದಾನ ಸ್ಮರಿಸಿ, ಯುವ ಜನತೆ ದೇಶದ ಸಂವಿಧಾನ ಮತ್ತು ಅಖಂಡತೆಯನ್ನು ಕಾಪಾಡುವಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.