ಅಫಜಲಪುರದ ಜೆಸ್ಕಾಂ ಕೇಂದ್ರದಲ್ಲಿ 3 ಫೀಡರ್ಗಳನ್ನು ಕೆಕೆಆರ್ಟಿಸಿ ಅಧ್ಯ ಅರುಣಕುಮಾರ ಪಾಟೀಲ್ ಲೋಕಾರ್ಪಣೆಗೊಳಿಸಿದರು. ಶಿವಾನಂದ ಗಾಡಿಸಾಹುಕಾರ, ರಮೇಶ ಪೂಜಾರಿ, ಸಂಜೀವಕುಮಾರ ನಿಂಬಾಳ, ಶ್ರೀಮಂತ ಬಿರಾದಾರ ಇದ್ದರು.
- ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಹೇಳಿಕೆ
- ಮೂರು ಫೀಡರ್ ಉದ್ಘಾಟನೆ
ಅಫಜಲಪುರ: ತಾಲೂಕಿನಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಹಿನ್ನೆಲೆ ಹಾಗೂ ಗ್ರಾಹಕರಿಗೆ ಸಮರ್ಪಕ ಕರೆಂಟ್ ನೀಡುವ ಉದ್ದೇಶದಿಂದ ಮೂರು 11 ಕೆವಿ ಫೀಡರ್ಗಳನ್ನು ನಿರ್ಮಿಸಲಾಗಿದೆ. ಇದರಿಂದ ರೈತರು, ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ್ ಹೇಳಿದರು.
ದುಧನಿ ರಸ್ತೆಯ ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿಯ ಕೇಂದ್ರದಲ್ಲಿ 3 ಫೀಡರ್ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೇಸಿಗೆ ಇರುವುದರಿಂದ ರೈತರ ಬೆಳೆಗಳಿಗೆ ನೀರು ಅಗತ್ಯವಾಗಿದೆ. ಇನ್ಮುಂದೆ ವಿದ್ಯುತ್ ಟ್ರಿಪ್ ಹಾಗೂ ವೋಲ್ಟೇಜ್ ಸಮಸ್ಯೆ ಇರಲ್ಲ. ನಿಗದಿತ ಅವಧಿಯ ವಿದ್ಯುತ್ ನಿರಂತರವಾಗಿ ಬರುತ್ತದೆ. ಅಂಬಾ ಭವಾನಿ, ಲ್ಮ, ಆಶ್ರಯ ಫೀಡರ್ಗಳಿಂದ ವಿದ್ಯುತ್ ಪ್ರವಾಹದ ಲಾಸ್ ಶೇ.3ಕ್ಕೆ ಇಳಿಕೆಯಾಗಿ, ವೋಲ್ಟೇಜ್ 180ರಿಂದ 230ಕ್ಕೆ ಏರಿಕೆಯಾಗುತ್ತದೆ. ಇದರಿಂದ ನಿಮ್ಮ ಪಾಲಿನ 7ಗಂಟೆ ವಿದ್ಯುತ್ ಸರಾಗವಾಗಿ ದೊರೆಯುತ್ತದೆ ಎಂದರು.
ತಾಪಂ ಮಾಜಿ ಅಧ್ಯ ಶಿವಾನಂದ ಗಾಡಿಸಾಹುಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯ ರಮೇಶ ಪೂಜಾರಿ, ಪ್ರಮುಖರಾದ ಸಂಜೀವಕುಮಾರ ನಿಂಬಾಳ, ಶ್ರೀಮಂತ ಬಿರಾದಾರ, ಕಂಟೆಪ್ಪ ಬಳೂರಗಿ, ಬಸವರಾಜ ಅಂದೋಡಗಿ, ವಿಶ್ವನಾಥ ಮಲಘಾಣ, ಸಂತೋಷ ಮನ್ಮಿ, ಮಹೇಶ ಆಲೆಗಾಂವ್, ಗುರು ಚಾಂದಕವಟೆ, ದುಂಡು ಜಮಾದಾರ, ಬಸಯ್ಯ ನಂದಿಕೋಲ, ಮಲ್ಲಿಕಾರ್ಜುನ ವಾಳಿ, ಗುರುಶಾಂತ ಡಾಂಗೆ, ಚಂದು ಕರಜಗಿ, ಎಇಇ ಶಿವಶರಣಪ್ಪ ಮೇತ್ರೆ ಇದ್ದರು.