Electricity problem due to poor TCs
ಗುಬ್ಬಿ: ತಾಲೂಕಿನಲ್ಲಿ ವಿದ್ಯುತ್ ಪರಿವರ್ತಕಗಳು ಕಳಪೆಯಾಗಿದ್ದು, ಇದರಿಂದ ಪಂಪ್, ಮೋಟಾರ್ ಸುಟ್ಟು ಹೋಗುತ್ತಿವೆ. 25, 60 ಹಾಗೂ 100 ಕೆವಿ ಸಾಮರ್ಥ್ಯದ ಟಿಸಿಗಳು ಸರಬರಾಜು ವಾಡಿರುವ ಏಜೆನ್ಸಿಗಳ ಪರವಾನಗಿ ರದ್ದು ಪಡಿಸಬೇಕು. ಇಲ್ಲದಿದ್ದರೆ ಬೆಸ್ಕಾಂ ವಿರುದ್ಧ ಪ್ರತಿಭಟಿಸಲಾಗುವುದು ಎಂದು ರೈತ ಸಂ ಎಚ್ಚರಿಕೆ ನೀಡಿದೆ.
ರೈತ ಸಂದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಮಾತನಾಡಿ, ಬೇಸಿಗೆ ಕಾಲದಲ್ಲಿ ನೀರಿನ ಅಭಾವದಿಂದ ಹೈರಾಣ ಆಗಿರುವ ರೈತರಿಗೆ ವಿದ್ಯುತ್ ಕಡಿತ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳಪೆ ಪರಿವರ್ತಕಗಳಿಂದ ಕಡಿಮೆ ವಿದ್ಯುತ್ ಸರಬರಾಜು ಆಗುತ್ತಿದೆ. ಇದರಿಂದ ಮೋಟಾರ್ ಸುಟ್ಟುಹೋಗಿವೆ. ಬೆಳಗ್ಗೆ ಅಳವಡಿಸಿದ್ದ ಟಿಸಿ ಸಂಜೆ ವೇಳೆಗೆ ಸುಟ್ಟು ಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಎಲ್ಲ ಹೋಬಳಿಯಲ್ಲಿ ವಿದ್ಯುತ್ ಸರಬರಾಜು ಉಪ ಕೇಂದ್ರ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ರೈತರಿಗೆ 7 ಗಂಟೆ ತ್ರೀಫೇಸ್ ಕರೆಂಟ್ ನೀಡುವಂತೆ ಆದೇಶವಿದ್ದರೂ ಪಾಲನೆಯಾಗುತ್ತಿಲ್ಲ. ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಬೆಸ್ಕಾಂ ಕಚೇರಿ ಮುತ್ತಿಗೆ ಹಾಕುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸಿ ಪರಿಹರಿಸಬೇಕು ಎಂದು ಎಚ್ಚರಿಕೆ ನೀಡಿದರು.