ವಿದ್ಯುತ್ ವಿತರಣೆ ವ್ಯವಸ್ಥೆ ಖಾಸಗೀಕರಣ ಕೈಬಿಡುವಂತೆ ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ವತಿಯಿಂದ ರಾಮದುರ್ಗದಲ್ಲಿ ತಹಸೀಲ್ದಾರ್ ಪ್ರಕಾಶ ಗಾಯಕವಾಡಗೆ ಮನವಿ ಸಲ್ಲಿಸಲಾಯಿತು. ಸತ್ಯಪ್ಪ ಮಲ್ಲಾಪುರ, ಪಾಂಡುರಂಗ ಬೀರನಗಡ್ಡಿ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ರಾಮದುರ್ಗ
ರಾಜ್ಯ ಸರ್ಕಾರ ವಿದ್ಯುತ್ ವಿತರಣೆ ವ್ಯವಸ್ಥೆ ಖಾಸಗೀಕರಣ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಪ್ರಕಾಶ ಗಾಯಕವಾಡಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ವಿದ್ಯುತ್ ಬಳಕೆ ಜನಸಾಮಾನ್ಯರ ಮೂಲ ಅವಶ್ಯಕತೆಯಾಗಿದೆ. ವಿದ್ಯುತ್ ವಿತರಣೆ ನಿರ್ವಹಣೆ ಸೇರಿ ಸಂಪೂರ್ಣ ಆಡಳಿತವನ್ನು ಖಾಸಗಿ ಕಂಪನಿಗಳಿಗೆ ನೀಡುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಗ್ರಾಮೀಣ ಪ್ರದೇಶದ ರೈತರಿಗೆ ನೀಡಲಾಗುತ್ತಿರುವ ರಿಯಾಯಿತಿ ಸೌಲಭ್ಯಕ್ಕೂ ಖಾಸಗೀಕರಣ ಮಾರಕವಾಗಲಿದೆ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.
ತಣವೇ ಸರ್ಕಾರ ವಿದ್ಯುತ್ ಖಾಸಗೀಕರಣ ವಿಚಾರ ಕೈಬಿಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ರಾಜ್ಯ ರೈತ ಸಂದ ಉಪಾಧ್ಯ ಸತ್ಯಪ್ಪ ಮಲ್ಲಾಪುರ, ರಾಜ್ಯ ಸಂಚಾಲಕ ಪಾಂಡುರಂಗ ಬೀರನಗಡ್ಡಿ, ಜಿಲ್ಲಾಧ್ಯ ಕುಮಾರ ಮರ್ಡಿ, ಉಪಾಧ್ಯ ಶಿವಾನಂದ ದೊಡವಾಡ, ತಾಲೂಕಾಧ್ಯ ಜಗದೀಶ ದೇವರಡ್ಡಿ, ಉಪಾಧ್ಯ
ಮಾರುತಿ ಹಾಲೊಳ್ಳಿ, ಕೃಷಿಕ ಸಮಾಜದ ಅಧ್ಯ ವೈ.ಎಚ್.ಪಾಟೀಲ, ವಾಸು ಪಂಡ್ರೋಳಿ, ಪ್ರಕಾಶಗೌಡ ಪಾಟೀಲ, ಮಾರುತಿ ಕರಿಶೆಟ್ಟಿ, ಪತ್ರೆಪ್ಪ ಕೊಪ್ಪದ, ನಿಂಗಪ್ಪ ಕೂಗಿ, ಹನಮಂತ ಬೇವೂರ, ಶಂಕರಗೌಡ ಪಾಟೀಲ ಇತರರಿದ್ದರು.