- ಎರಡೂ ಅಧ್ಯಕ್ಷ ಹುದ್ದೆಗಳಿಗೆ ಒಟ್ಟಿಗೆ ಆಯ್ಕೆ ಮಾಡಬೇಕು ಎನ್ನುವುದು ಮುಖ್ಯಮಂತ್ರಿಗಳ ಬಯಕೆಯಾಗಿದೆ
- ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್
ಕೆಎಂಎಪ್ ಮತ್ತು ಅಪೆಕ್ಸ್ ಅಧ್ಯಕ್ಷ ಹುದ್ದೆಗಳ ಚುನಾವಣೆ ಇನ್ನಷ್ಟು ಮುಂದಕ್ಕೆ ಹೋಗುವ ಸಾದ್ಯತೆಗಳು ಹೆಚ್ಚಾಗಿವೆ.
ವಿಧಾನಸಭೆ ಅಧಿವೇಶನ ಮುಗಿದ ಮೇಲೆ ಈ ಪ್ರಕ್ರಿಯೆಯನ್ನು ಮುಗಿಸಲು ಮುಖ್ಯಮಂತ್ರಿಗಳು ಆಸಕ್ತರಾಗಿದ್ದರು. ನಾನಾ ಕಾರಣಗಳಿಗಾಗಿ ರಾಜಕೀಯ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಎರಡೂ ಸಂಸ್ಥೆಗಳ ಅಧ್ಯಕ್ಷ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲು ಸಿಎಂ ನಿರ್ಧರಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಎರಡೂ ಅಧ್ಯಕ್ಷ ಹುದ್ದೆಗಳಿಗೆ ಒಟ್ಟಿಗೆ ಆಯ್ಕೆ ಮಾಡಬೇಕು ಎನ್ನುವುದು ಮುಖ್ಯಮಂತ್ರಿಗಳ ಬಯಕೆಯಾಗಿದೆ. ಒಂದು ಹುದ್ದೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರ ಆಯ್ಕೆಗೆ ಬಿಟ್ಟು, ಮತ್ತೊಂದು ಹುದ್ದೆಯನ್ನು ತಾವು ಆಯ್ಕೆ ಮಾಡಬಹುದು ಎನ್ನುವುದು ಮುಖ್ಯಮಂತ್ರಿಗಳ ಚಿಂತನೆ.
ಕೆಎಂಎಪ್ ಅಧ್ಯಕ್ಷ ಹುದ್ದೆ ತಮಗೆ ಬೇಕು ಎಂದು ಡಿಸಿಎಂ ಪಟ್ಟು ಹಿಡಿದರೆ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹುದ್ದೆಯನ್ನು ಸುಲುಭವಾಗಿ ತಮ್ಮ ಬೆಂಬಲಿಗ ಕೆ.ಎನ್.ರಾಜಣ್ಣ ಅವರಿಗೆ ನೀಡಲು ಸಾಧ್ಯವಾಗುತ್ತದೆ. ಒಂದು ವೇಳೆ ಅೆಕ್ಸ್ ಬ್ಯಾಂಕ್ ಹುದ್ದೆಯನ್ನು ಡಿಸಿಎಂ ಶಿವಕುಮಾರ್ ಪಟ್ಟು ಹಿಡಿದರೆ, ಕೆಎಂಎ್ ಅಧ್ಯಕ್ಷ ಹುದ್ದೆಗೆ ತಮ್ಮ ಬೆಂಬಲಿಗ ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಗೆ ಕೊಡಲು ಸಾಧ್ಯವಾಗುತ್ತದೆ ಎನ್ನುವುದು ಸಿಎಂ ರಾಜಕೀಯ ಲೆಕ್ಕಾಚಾರವಾಗಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರು ಕೆಎಂಎಪ್ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರೆ, ಮತ್ತೋರ್ವ ಸಂಬಂದಿ ವಿಧಾನ ಪರಿಷತ್ ಸದಸ್ಯರಾದ ರವಿ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. ಆದರೆ ಎರಡೂ ಹುದ್ದೆಗಳನ್ನು ಡಿಕೆಶಿ ಪಾಲಿಗೆ ಬಿಡಲು ಸಿಎಂ ಸಿದ್ದರಾಮಯ್ಯ ಸಿದ್ಧರಿಲ್ಲ. ಹಾಗಾಗಿಯೇ ಪಕ್ಷದ ಆಂತರಿಕ ವಲಯದಲ್ಲಿ ಸಿಎಂ ಮತ್ತು ಡಿಸಿಎಂ ನಡುವೆಯೇ ಹಗ್ಗ ಜಗ್ಗಾಟ ನಡೆಯುತ್ತಿದೆ.
-ಕೆಎಂಎಪ್ ಮತ್ತು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಚುನಾವಣೆ ಬಗ್ಗೆ ಸಿಎಂ ಮತ್ತು ಡಿಸಿಎಂ ಒಟ್ಟಾಗಿ ಈ ಬಗ್ಗೆ ನಿರ್ಣಯ ಮಾಡಬೇಕಾಗಿದೆ. ಹಾಗಾಗಿ ಚುನಾವಣೆ ಸ್ವಲ್ಪ ತಡವಾಗುತ್ತಿದೆ.
-ರವಿ, ವಿಧಾನ ಪರಿಷತ್ ಸದಸ್ಯರು