ಔರಾದ್​ ತಾಲೂಕಿನ ಸಂತಪುರ ಹೋಲಿ ಕ್ರಾಸ್​ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಲಾ ಸಂಸತ್​ ಚುನಾವಣೆ ವಿಜೇತ ಸದಸ್ಯರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಫಾದರ್​ ಕ್ಲಿವನ್​, ಮುಖ್ಯಗುರು ಸಿಸ್ಟರ್​ ಜೋಸ್ಫಿನ್​, ಸಿಸ್ಟರ್​ ರೆಮೋಲಿನ್​, ಸಿಸ್ಟರ್​ ನಮೃತಾ, ಸೀಮಾ, ಸಪನಾ ಪವಾರ, ಪ್ರತಿಭಾ, ಸುವರ್ಣ, ಮಂದಾಕಿನಿ, ಅನಿಲ, ಸೀಮಾ, ವಿಜಯಕುಮಾರ ಹಾಗೂ ಮಕ್ಕಳಿದ್ದರು. 
ರಾಜ್ಯ

ಶಾಲಾ ಹಂತದಲ್ಲಿ ಚುನಾವಣೆ ಅಗತ್ಯ

ಔರಾದ್​: ಮಕ್ಕಳು ಪ್ರಜಾಪ್ರಭುತ್ವ ವ್ಯವಸ್ಥೆ, ಮತದಾನದ ಮಹತ್ವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಶಾಲಾ ಸಂಸತ್​ ಚುನಾವಣೆ ನಡೆಸುತ್ತಿರುವುದು ಮಹತ್ವದಾಗಿದೆ ಎಂದು ಹೋಲಿ ಕ್ರಾಸ್​ ಶಾಲಾ ವ್ಯವಸ್ಥಾಪಕ ಫಾದರ್​ ಕ್ಲಿವನ್​ ಹೇಳಿದರು.
ಸಂತಪುರ ಹೋಲಿ ಕ್ರಾಸ್​ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡ ಶಾಲಾ ಸಂಸತ್​ ಚುನಾವಣೆ ವಿಜೇತ ಸದಸ್ಯರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ಮತದಾನ ಮಾಡಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅನುಭವಾತ್ಮಕವಾಗಿ ಅರಿತುಕೊಂಡು, ಅವರು ಮುಂದಿನ ದಿನಗಳಲ್ಲಿ ಯಾವ ರೀತಿ ನೈಜ ಮತದಾನ ಪ್ರಕ್ರಿಯೇ ಜರುಗುತ್ತದೆ ಅನ್ನುವುದು ಶಾಲಾ ಹಂತದಲ್ಲಿಯೇ ಅರಿತುಕೊಂಡು ಸಮಗ್ರ ಮಾಹಿತಿ ಅರಿತಿರುವುದು ಉತ್ತಮ ಸಂಗತಿಯಾಗಿದೆ ಎಂದರು.
ಮುಖ್ಯಗುರು ಮುಖ್ಯಗುರು ಸಿಸ್ಟರ್​ ಜೋಸ್ಫಿನ್​ ಮಾತನಾಡಿ, ಪಠ್ಯದ ಜತೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ನಾಯಕತ್ವದ ಗುಣಗಳನ್ನು ಪರಿಚಯಿಸುವ ಉದ್ದೇಶವಾಗಿದೆ. ವಿಧಾನಸಭೆ, ವಿಧಾನ ಪರಿಷತ್​, ಲೋಕಸಭೆ ಹಾಗೂ ರಾಜ್ಯಸಭೆಯ ಚುನಾವಣಾ ಪ್ರಕ್ರಿಯೆ, ಒಂದು ಮತದ ಮಹತ್ವ, ಮತದಾನ, ಮತ ಎಣಿಕೆ, ಸಚಿವ ಸಂಪುಟ ರಚನೆ ಮತ್ತು ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಕುರಿತು ಮಾಹಿತಿ ಒದಗಿಸಲಾಗಿದೆ. ವಿದ್ಯಾರ್ಥಿಗಳ ಪ್ರಾಣಾಳಿಕೆ ಮಂಡಿಸಿ, ಮತ ಯಾಚಿಸಿ, ಭಾಷಣ ಮಾಡುವ ಮೂಲಕ ಆತ್ಮವಿಶ್ವಾಸ ಬೆಳೆಸಿದೆ ಎಂದು ಹೇಳಿದರು.
ಚುನಾವಣೆಯ ಬಳಿಕ ಶಾಲಾ ಸಂಸತ್ತಿನ ಪದಾಧಿಕಾರಿಗಳನ್ನು ಘೋಷಿಸಿ ಪ್ರಮಾಣ ವಚನ ಬೋಧಿಸಿ ಸಚಿವ ಸ್ಥಾನ ಹಂಚಲಾಯಿತು. ಪ್ರಿಯಾಂಕಾ, ಪ್ರತಿಭಾ, ಸುವರ್ಣ, ಮಂದಾಕಿನಿ, ರೆಮೋಲಿನ್​, ಸಪನಾ ಪವಾರ, ನಮೃತಾ, ಅನಿಲ, ಸೀಮಾ, ಸತೀಶ ನಾಗೂರೆ, ವಿಜಯಕುಮಾರ ಹಾಗೂ ಮಕ್ಕಳಿದ್ದರು.