ಕನಕಪುರ ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಸಿ.ಎಂ.ಜಗದೀಶ್, ಉಪಾಧ್ಯಕ್ಷರಾಗಿ ಮಹೇಶ್, ಕಾರ್ಯದರ್ಶಿಯಾಗಿ ಕೆ.ಎನ್.ಮಂಜುನಾಥ್ ಚುನಾಯಿತರಾದರು. ಹಲವು ಸದಸ್ಯರು ಹೂಗುಚ್ಚ ನೀಡಿ ಅಭಿನಂದಿಸಿದರು.  
ರಾಜ್ಯ

ತಾಲೂಕು ವಕೀಲರ ಸಂಘಕ್ಕೆ ಆಯ್ಕೆ Association

ಕನಕಪುರ: ತೀವ್ರ ಕುತೂಹಲ ಕೆರಳಿಸಿದ್ದ ತಾಲೂಕು ವಕೀಲರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣಾ ಫಲಿತಾಂಶದಲ್ಲಿ ನೂತನ ಅಧ್ಯಕ್ಷರಾಗಿ ಸಿ.ಎಂ.ಜಗದೀಶ್, ಉಪಾಧ್ಯಕ್ಷರಾಗಿ ಪಿ.ಮಹೇಶ್, ಕಾರ್ಯದರ್ಶಿಯಾಗಿ ಕೆ.ಎನ್.ಮಂಜುನಾಥ್ ಭರ್ಜರಿ ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಶನಿವಾರ ನ್ಯಾಯಾಲಯದ ಆವರಣದಲ್ಲಿ ಚುನಾವಣೆ ನಡೆಯಿತು. ಮತ ಎಣಿಕೆಯು ರಾತ್ರಿ 9 ಗಂಟೆಗೆ ಪೂರ್ಣಗೊಂಡಿತು. ಒಟ್ಟು 237 ಸದಸ್ಯರಲ್ಲಿ 232 ಮಂದಿ ಉತ್ಸಾಹದಿಂದ ಮತ ಚಲಾಯಿಸಿದರು.
ಅಧ್ಯಕ್ಷ ಜಗದೀಶ್ 134, ಉಪಾಧ್ಯಕ್ಷ ಮಹೇಶ್ 126, ಕಾರ್ಯದರ್ಶಿ ಕೆ.ಎನ್.ಮಂಜುನಾಥ್ 142, ಖಜಾಂಚಿ ವಿಮಲ 125 ಮತಗಳನ್ನು ಪಡೆದು ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆರ್.ಚೇತನ್‌ಕುಮಾರ್ 182, ಅಭಿಷೇಕ್ 178, ಎಸ್.ಜಯರಾಮೇಗೌಡ 174, ವಿಜಿಕುಮಾರ್ 170, ಬಿಜ್ಜಳ್ಳಿ ಮಹೇಶ್‌ಕುಮಾರ್ 102, ಡಿ.ಲೋಕೇಶ್ 100, ಕೆ.ವಿ. ಸಂತೋಶ್ 93 ಮತಗಳನ್ನು ಪಡೆದು ಚುನಾಯಿತರಾದರೆ, ಮಹಿಳಾ ಮೀಸಲಾತಿ ಸ್ಥಾನದಿಂದ ಕೆ.ಸಿ.ಭಾವನ 183 ಹಾಗೂ ಬಿ.ಎಂ.ಗಂಗಮ್ಮ 112 ಮತಗಳನ್ನು ಪಡೆದು ಜಯಶೀಲರಾದರು. ಚುನಾವಣಾಧಿಕಾರಿಯಾಗಿ ಹಿರಿಯ ಸದಸ್ಯ ಜೆ.ಮಹದೇಶ್ ಕರ್ತವ್ಯ ನಿರ್ವಹಿಸಿದರು.
ಫಲಿತಾಂಶದ ಬಳಿಕ ನೂತನರಿಗೆ ಹೂಗುಚ್ಚ ನೀಡಿ ಅಭಿನಂದಿಸಲಾಯಿತು. ಮಾಜಿ ಅಧ್ಯಕ್ಷರಾದ ಎ.ಸಿ.ಚನ್ನೇಗೌಡ, ಎಸ್.ವಿ.ವೀರಪ್ಪ ಸೇರಿ ಅನೇಕರು ಹಾಜರಿದ್ದರು. Association