ಕಿಕ್ಕೇರಿ ಹೋಬಳಿಯ ಆನೆಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ನಂಜುಂಡೇಗೌಡ ಅವಿರೋಧವಾಗಿ ಮಂಗಳವಾರ ಆಯ್ಕೆಯಾದರು. ಸಿ.ಎನ್.ಪುಟ್ಟಸ್ವಾಮಿಗೌಡ, ಬಿ.ಎಂ.ಕಿರಣ್, ನಿರ್ದೇಶಕರು ಹಾಜರಿದ್ದರು.
ಕಿಕ್ಕೇರಿ: ಹೋಬಳಿಯ ಗಡಿಭಾಗದ ಆನೆಗೊಳ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅಂಚೇಬೀರನಹಳ್ಳಿ ನಂಜುಡೇಗೌಡ ಅವಿರೋಧವಾಗಿ ಆಯ್ಕೆಯಾದರು.
ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ನಂಜುಂಡೇಗೌಡ ಅವರನ್ನು ವರತುಪಡಿಸಿ ಬೇರೆ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.
ರಾಜ್ಯ ಮಾರಾಟ ಮಹಾಮಂಡಲ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ನಮ್ಮ ಮಂಡಲ ಈ ಸಂಘದ ಅಭಿವೃದ್ಧಿಗೆ ಸಾಕಷ್ಟು ನೆರವು ನೀಡಿದೆ. ಈ ಸಂಘದಿಂದ ರೈತರಿಗೆ 5.60 ಕೋಟಿ ರೂ. ಹಾಗೂ ಸಂಘಗಳಿಗೆ 60 ಲಕ್ಷ ರೂ. ಬಡ್ಡಿರಹಿತ ಸಾಲ ನೀಡಿದೆ. ಸಂಘದ ನಿರ್ದೇಶಕರು ಸಂಘ, ರೈತರ ಆರ್ಥಿಕ ಅಭಿವೃದ್ಧಿಗೆ ಸಹಕರಿಸಿ ಎಂದು ಸಲಹೆ ನೀಡಿದರು.
ಚುನಾವಣಾಧಿಕಾರಿಯಾಗಿ ಪ್ರಶಾಂತ್ ಕಾರ್ಯನಿರ್ವಹಿಸಿದರು. ತಾಪಂ ಮಾಜಿ ಸದಸ್ಯ ರಾಮೇಗೌಡ, ಟಿಎಪಿಸಿಎಂಸ್ ನಿರ್ದೇಶಕ ಬಿ.ಎಂ.ಕಿರಣ್, ಗ್ರಾಪಂ ಮಾಜಿ ಅಧ್ಯಕ್ಷ ಕಡಹೆಮ್ಮಿಗೆ ರಮೇಶ್, ಯೋಗೇಶ್, ಜಗನ್ನಾಥ್, ದಾನಶೇಖರ್, ಕೆ.ಆರ್.ವೆಂಕಟೇಶ್, ಕುಮಾರ್, ಮಹಾಲಿಂಗೇಗೌಡ, ಶಿಶುಪಾಲ, ಮಂಜೇಗೌಡ, ಸಂಘದ ನಿರ್ದೇಶಕರಾದ ಐ.ಡಿ.ಉದಯಶಂಕರ್, ತಿಮ್ಮೇಗೌಡ, ಐ.ಎಂ. ಮಂಜೇಗೌಡ, ಲೋಕೇಶ್, ಮಂಜುನಾಥ್, ಲಿಂಗರಾಜು, ಮಂಜುಳಾ, ಸವಿತಾ, ದೇವಮ್ಮ ಮತ್ತಿತರರಿದ್ದರು.