ಸರಗೂರು ಪಟ್ಟಣದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಭಾಗದಲ್ಲಿ ದುರ್ಗಾಪರಮೇಶ್ವರಿ ಸೇವಾ ಸಮಿತಿ ಟ್ರಸ್ಟ್ ರಚನೆ ಮಾಡಲಾಯಿತು. ಎಸ್.ಎಸ್.ಗಣೇಶ್, ಶಿವಲಿಂಗಶೆಟ್ಟರು, ಎಂ.ಕೆಂಡಗಣ್ಣಸ್ವಾಮಿ, ಎಸ್.ಡಿ.ಸಣ್ಣಸ್ವಾಮಿ, ದೊಡ್ಡಬೈರ ಇತರರಿದ್ದರು. 
ರಾಜ್ಯ

ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಟ್ರಸ್ಟ್‌ಗೆ ಪದಾಧಿಕಾರಿಗಳ ಆಯ್ಕೆ

ಸರಗೂರು: ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಟ್ರಸ್ಟ್ ರಚಿಸಲಾಗಿ, ಎಸ್.ಎಸ್.ಗಣೇಶ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಉದ್ದೇಶದಿಂದ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಟ್ರಸ್ಟ್‌ಅನ್ನು ನೂತನವಾಗಿ ರಚಿಸಲಾಗಿದೆ.
ದೇವಸ್ಥಾನದಲ್ಲಿ ವಿವಿಧ ಸಮುದಾಯಗಳ ಮುಖಂಡರ ಸಮ್ಮುಖದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಟ್ರಸ್ಟ್‌ನ ಅಧ್ಯಕ್ಷರಾಗಿ ಎಸ್.ಎಸ್.ಗಣೇಶ್, ಉಪಾಧ್ಯಕ್ಷರಾಗಿ ಟಿ.ಕರಿಯಪ್ಪ ಆಯ್ಕೆಯಾದರು. ಉಳಿದಂತೆ ಕಾರ್ಯದರ್ಶಿಯಾಗಿ ಶ್ರೀಕಂಠಸ್ವಾಮಿ, ಖಜಾಂಚಿಯಾಗಿ ಟಿ.ಬೆಟ್ಟನಾಯ್ಕ ಆಯ್ಕೆಯಾಗಿದ್ದು, ನಿರ್ದೇಶಕರಾಗಿ ಬಸವರಾಜು, ಎಸ್.ಎನ್.ಮೋಹನ್‌ಕುಮಾರ್, ಶಿವಶಂಕರನ್, ವಿ.ವೆಂಕಟರಾಮು, ಎಸ್.ಡಿ.ವಿಮಲ್‌ಕುಮಾರ್, ಎಸ್.ವಿ.ರವಿಕುಮಾರ್, ಎಸ್.ಪಿ.ನಟರಾಜ್, ಇದಿಯಪ್ಪ ಹಾಗೂ ಶ್ರೀನಿವಾಸ್ ಅವರನ್ನು ನೇಮಿಸಲಾಯಿತು.
ಸಭೆಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಭಕ್ತರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ಕುರಿತು ಚರ್ಚಿಸಿ, ಎಲ್ಲರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸಂಕಲ್ಪ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮೊದಲ ಆಷಾಢ ಮಾಸದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಎಸ್.ಗಣೇಶ ಮಾತನಾಡಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಸರಗೂರು ಪಟ್ಟಣದ ಭಕ್ತರ ಆರಾಧ್ಯ ದೈವವಾಗಿದೆ. ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಸಮಗ್ರ ಅಭಿವೃದ್ಧಿಗೆ ಎಲ್ಲ ಸಮುದಾಯದವರ ಸಹಕಾರದೊಂದಿಗೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಲಾಗುವುದು. ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು, ದೇವಸ್ಥಾನದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಯೋಜಿಸುವುದು ನಮ್ಮ ಸಮಿತಿಯ ಪ್ರಮುಖ ಉದ್ದೇಶವಾಗಿದೆ. ದೇವಸ್ಥಾನದ ಅಭಿವೃದ್ಧಿಗೆ ಪ್ರತಿಯೊಬ್ಬ ಭಕ್ತರೂ ಕೈಜೋಡಿಸಿ ಸಹಕರಿಸಬೇಕು. ಎಲ್ಲರ ವಿಶ್ವಾಸಕ್ಕೆ ತಕ್ಕಂತೆ ಸೇವೆ ಸಲ್ಲಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಶಿವಲಿಂಗಶೆಟ್ಟರು, ಕಸಾಪ ಅಧ್ಯಕ್ಷ ಎಂ.ಕೆಂಡಗಣ್ಣಸ್ವಾಮಿ, ಮುಖಂಡರಾದ ಎಸ್.ಡಿ.ಸಣ್ಣಸ್ವಾಮಿ, ದೊಡ್ಡಬೈರ, ಮಹದೇವಯ್ಯ , ಡಕ್ಲರಾಮ್, ವೆಂಕಟೇಶ್, ಬಸವರಾಜು, ದೇವಸ್ಥಾನದ ಭಕ್ತರು ಉಪಸ್ಥಿತರಿದ್ದರು.